Oplus_131072

ಅರಣ್ಯ ಇಲಾಖೆ ಅಧಿಕಾರ ಚಲಾಯಿಸಿದ ಎಪಿಎಂಸಿ ಕಾರ್ಯದರ್ಶಿ, ಮರಗಳ ಅನಧಿಕೃತ ಕಟಾವು ಮತ್ತು ಹರಾಜು ಇದರ ವಿರುದ್ಧ ಪ್ರಕರಣ ದಾಖಲು: ಅರಣ್ಯಾಧಿಕಾರಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಯಾವುದೇ ಮರಗಿಡಗಳು ಕಡಿಯಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಬೇಕು, ಅನುಮತಿ ನೀಡಿದಾಗ ಮಾತ್ರ ಮರಗಿಡಗಳು ಕಡಿಯಲು ಸಾಧ್ಯ. ಆದರೆ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿನ ಮರಗಿಡಗಳನ್ನು ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಎಪಿಎಂಸಿ ಕಾರ್ಯದರ್ಶಿ ಅನಧಿಕೃತವಾಗಿ ಕಟಾವು ಮಾಡಿಸಿದ್ದಾರೆ ಅಲ್ಲದೇ ಹರಾಜು ಕೂಡ ಮಾಡಿ ಅರಣ್ಯ ಇಲಾಖೆಯ ಅಧಿಕಾರ ಚಲಾಯಿಸಿರುವುದು ಕಂಡುಬಂದಿದೆ.

ಎಪಿಎಂಸಿ ಪ್ರಾಂಗಣದಲ್ಲಿನ 50 ವರ್ಷದ ಹಳೆಯ ಬೃಹದಾಕಾರದ ನಾಲ್ಕು ಮರಗಳನ್ನು ಕಟಾವು ಮಾಡುವ ಮೂಲಕ ಅರಣ್ಯ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿದಂತಾಗಿದೆ. ಇಲ್ಲಿ ಎಪಿಎಂಸಿ ಕಾರ್ಯದರ್ಶಿ ತಮ್ಮ ಮನಸ್ಸಿಗೆ ಬಂದಂತೆ ವರ್ತಿಸಿ ಮರಗಳ ಮೇಲೆ ದಾಳಿ ಮಾಡಿದಂತಾಗಿದೆ. ಗಿಡಮರಗಳು ಬೆಳೆಸುವುದು ಸುಲಭ ಕೆಲಸವಲ್ಲ ಹೀಗಿರುವಾಗ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ರೈತರಿಗೆ, ಹಮಾಲರಿಗೆ, ಕೃಷಿ ಕೂಲಿಕಾರರಿಗೆ ಸಾರ್ವಜನಿಕರಿಗೆ ನೆರಳಿನ ಆಶ್ರಯವಾಗಿದ್ದ ದೊಡ್ಡ ಮರಗಳನ್ನು ಅಕ್ರಮವಾಗಿ, ಕಾನೂನು ಬಾಹಿರವಾಗಿ ಕಟಾವು ಮಾಡಿಸಿರುವ ಎಪಿಎಂಸಿ ಕಾರ್ಯದರ್ಶಿ ಕ್ರಮಕ್ಕೆ ಹಮಾಲರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ  ಪ್ರಾಂಗಣದಲ್ಲಿರುವ ಶಂಕೇಶ್ವರ ಮರ ಮಳೆ ಗಾಳಿಯಿಂದ ಅರ್ಧ ಮುರಿದು ಹೋಗಿರುತ್ತದೆ. ಹಾಗೂ ಆಡಳಿತ ಕಚೇರಿಯ ಮುಂಭಾಗದಲ್ಲಿನ ಬೇವಿನ ಮರ ಕಚೇರಿಯ ಮೇಲ್ಟಾವಣೆ ಮೇಲೆ ಬಾಗಿರುವುದರಿಂದ ಗಾಳಿ ಮಳೆಯಿಂದ ಛಾವಣ ಮೇಲೆ ಬಿದ್ದಲ್ಲಿ ತೊಂದರೆಯಾಗುವ ಸಂಭವವಿರುತ್ತದೆ. ಪ್ರಯುಕ್ತ, ಸದರಿ ಮರಳನ್ನು ಕಟಾವು ಮಾಡಲು ಅನುಮತಿ ನೀಡಲು ವಲಯ ಅರಣ್ಯಾಧಿಕಾರಿಗೆ ಮೇ.12 ರಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಆದರೆ ಇದಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಿಲ್ಲ ಹೀಗಿರುವಾಗ ಅನಧಿಕೃತವಾಗಿ ಮರಗಳು ಕಟಾವು ಮಾಡಿದ ಎಪಿಎಂಸಿ ಅಧಿಕಾರಿಗಳ ಮೇಲೆ ಅರಣ್ಯ ಇಲಾಖೆಯ ನಿಯಮದಡಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಉಪ ವಲಯ ಅರಣ್ಯಾಧಿಕಾರಿ ಮೊಹಮ್ಮದ್ ಜಾವೀದ್ ತಿಳಿಸಿದ್ದಾರೆ.

ನಾಲ್ಕು ಮರಗಳ ಪೈಕಿ ಎರಡು ಮರಗಳ ಕಟಾವು ಮಾಡಲು ಎಪಿಎಂಸಿ ಕಾರ್ಯದರ್ಶಿ ಅನುಮತಿ ಕೋರಿ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೆ ಇನ್ನೂ ಎರಡು ಮರಗಳಂತು ಬೇಕಾಬಿಟ್ಟಿಯಾಗಿ ಹಾಡುಹಗಲೇ ಕಡೆದಿದ್ದಾರೆ. ಮರಗಳು ಕಡೆದಿರುವವರು ಯಾರು ಎಂಬುದು ತಿಳಿದಿದೆ ಅವರ ಮೇಲೆಯೂ ಪ್ರಕರಣ ದಾಖಲು ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯ ವೀಕ್ಷಕ ಸವಿತಾ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!