Oplus_131072

ಚಿತ್ತಾಪುರ ಬಾಬಾಸಾಹೇಬ ಅಂಬೇಡ್ಕರ್ ಅವರ 134 ನೇ ಜಯಂತ್ಯೋತ್ಸವ, ಮೇ.2 ನೇ ವಾರದಲ್ಲಿ ಶೋಷಿತ ಸಮುದಾಯದ ಒಬ್ಬರು ರಾಜ್ಯದ ಮುಖ್ಯಮಂತ್ರಿ ಆಗುವುದು ಖಚಿತ: ಜ್ಞಾನಪ್ರಕಾಶ ಸ್ವಾಮೀಜಿ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಇಲ್ಲಿವರೆಗೆ ರಾಜ್ಯದಲ್ಲಿ 9 ಬಾರಿ ವೀರಶೈವ ಲಿಂಗಾಯತ, 7 ಬಾರಿ ಒಕ್ಕಲಿಗರು, ಸಣ್ಣ ಪುಟ್ಟ ಜಾತಿಯವರು 2 ಬಾರಿ ಈಗ ಸಿದ್ದರಾಮಯ್ಯ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷವಾದರೂ ಇಲ್ಲಿವರೆಗೆ ಅಸ್ಪೃಶ್ಯ, ಶೋಷಿತ ಸಮುದಾಯದ ಮುಖ್ಯಮಂತ್ರಿ ಆಗಿಲ್ಲ. ಆದರೆ ಬರುವ ಮೇ. 2 ನೇ ವಾರದಲ್ಲಿ ಶೋಷಿತ ಸಮುದಾಯದ ಒಬ್ಬರು ಮುಖ್ಯಮಂತ್ರಿ ಆಗುವುದು ಖಚಿತ ಎಂದು ಕೋಡ್ಲಾ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಭವಿಷ್ಯ ನುಡಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ವಿಶ್ವರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 134 ನೇ ಜಯಂತ್ಯೋತ್ಸವ ನಿಮಿತ್ತ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ನಾಗಾವಿ ನಾಡಿನಲ್ಲಿ ಭೀಮ ಉತ್ಸವ ಹಾಗೂ 1949 ಬಿಟಿಎಂಸಿ ಕಾಯ್ದೆ ರದ್ದು ಮತ್ತು ಮಹಾಬೋಧಿ ಮಹಾವಿಹಾರ ಆಂದೋಲನಕ್ಕೆ ಕರೆ ಬಹಿರಂಗ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಒಂದು ವೇಳೆ ಸಿಎಂ ಕೊಟ್ಟಿಲ್ಲ ಅಂದರೆ ರಾಜ್ಯದ ಚರಿತ್ರೆಯನ್ನೇ ಬದಲಾಗಲಿದೆ ಅದು ಚಿತ್ತಾಪುರ ದಿಂದಲೇ ಪ್ರಾರಂಭವಾಗಲಿದೆ ಎಂದು ಗುಡುಗಿದರು.

3ಡಿ (ಡಿಜೆ, ಡ್ಯಾನ್ಸ್, ಡ್ರಿಂಕ್ಸ್) ಯಿಂದ ದೂರ ಇರಬೇಕು, ಇದೊಂದು ಷಡ್ಯಂತ್ರ ಅಂಬೇಡ್ಕರ್ ಅವರ ಜ್ಞಾನ ಮತ್ತು ವಿಚಾರಗಳು ಹೊರತರದೆ ಇರುವುದಕ್ಕೆ 3ಡಿ ಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಹೀಗಾಗಿ ಸ್ವಲ್ಪ ಜಾಗೃತೆ ವಹಿಸಿ ಎಂದು ಕಿವಿಮಾತು ಹೇಳಿದರು. ಅಂಬೇಡ್ಕರ್ ಅವರನ್ನು ಮೂರ್ತಿಯಲ್ಲಿ ಹುಡಕಬೇಡಿ ಪುಸ್ತಕದಲ್ಲಿ ಹುಡುಕಿ ಹಾಗೂ ಅಂಬೇಡ್ಕರ್ ಅವರನ್ನು ಮೆರವಣಿಗೆಯಲ್ಲಿ ನೋಡಬೇಡಿ ಬರವಣಿಗೆಯಲ್ಲಿ ನೋಡಿ ಎಂದು ತಿಳಿಸಿದರು.

ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಬರೀ ಎಸ್ಸಿ ಎಸ್ಟಿ ಗಳಲ್ಲ ಭಾರತೀಯರೆಲ್ಲರೂ ಪೂಜೆ ಮಾಡಬೇಕು ಕಾರಣ ಅವರು ಎಲ್ಲರಿಗೂ ಹಕ್ಕುಗಳು ನೀಡಿದ್ದಾರೆ ಹಾಗೂ ಬದುಕು ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.

ಈಗಿರುವುದು ಅಸಲಿ ಪ್ರಜಾಪ್ರಭುತ್ವ ಅಲ್ಲ ನಕಲಿ ಪ್ರಜಾಪ್ರಭುತ್ವ ಇದೆ, ಕೆಲವರಿಂದ, ಕೆಲವರಿಗಾಗಿ, ಕೆಲವರಿಗೋಸ್ಕರ ಇಂತವರಿಂದಲೇ ದೇಶ ನಾಶ ಆಗುತ್ತಿದೆ. ಇಬ್ಬರು ದೇಶ ಮಾರೋರು ಇನ್ನೂ ಇಬ್ಬರು ಖರೀದಿ ಮಾಡುವವರು ಎಂದು ಪರೋಕ್ಷವಾಗಿ ಮೋದಿ, ಶಾ ಮತ್ತು ಅದಾನಿ, ಅಂಬಾನಿ ವಿರುದ್ಧ ಕುಟುಕಿದರು.

ಜನರಲ್ಲಿ ಸ್ಪೂರ್ತಿ ಹಾಗೂ ಪ್ರಜ್ಞೆ ಬರಲು ಪುತ್ತಳಿ ಬೇಕು ಈ ನಿಟ್ಟಿನಲ್ಲಿ ಚಿತ್ತಾಪುರ ಪಟ್ಟಣದಲ್ಲಿ 7 ಅಡಿ ಎತ್ತರದ ಅಂಬೇಡ್ಕರ್ ಅವರ ನಿಂತಿದ್ದ ಪುತ್ತಳಿ ರಾರಾಜಿಸುವಂತೆ ಆಗಬೇಕು ಎಂದು ಸ್ವಾಮೀಜಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇವಸ್ಥಾನದ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಜನರು ಯಾವಾಗ ಗ್ರಂಥಾಲಯದ ಮುಂದೆ ನಿಲ್ಲುತ್ತಾರೆ ಅಂದು ಭಾರತ ಜಗತ್ತಿನ ಗುರುವಾಗಲಿದೆ ಎಂದು ಹೇಳಿದರು. ಅಂಬೇಡ್ಕರ್ ಅವರು ಹೇಳಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಈ ಮೂರು ವಿಚಾರಗಳು ಜೀವನದಲ್ಲಿ ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂಬುದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಪಟ್ಟಣದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರಿನಲ್ಲಿ ಗ್ರಂಥಾಲಯ ಪ್ರಾರಂಭಕ್ಕೆ ಮುಂದಾದರೆ 10 ಲಕ್ಷ ಅನುದಾನ ನೀಡಲಾಗುವುದು ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗುವ ಕಾಲ ಸನ್ನಿಹಿತವಾಗಿದೆ ಬರೀ ಭಾಷಣ ಮಾಡುವುದರಿಂದ ದಲಿತ ಮುಖ್ಯಮಂತ್ರಿ ಆಗುವುದಿಲ್ಲ, ನಿಮ್ಮ ಕೂಗು ರಾಜ್ಯಕ್ಕೆ ಮುಟ್ಟಬೇಕಾದರೆ ತೀವ್ರಗತಿಯ ಹೋರಾಟ ಮಾಡಬೇಕಿದೆ ಆಗ ಡಾ.ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಅವರು ಮಾತನಾಡಿದರು. ಅಣದೂರ ಭಂತೆ ಧಮ್ಮಾನಂದ ಮಹಾಥೇರೊ, ಭಂತೆ ಜ್ಞಾನಸಾಗರ ಅವರು ಸಾನಿಧ್ಯ ವಹಿಸಿದ್ದರು. ಜಯಂತೋತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್ ಅಧ್ಯಕ್ಷತೆ ವಹಿಸಿದ್ದರು.

ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಐ ಶ್ರೀಶೈಲ್ ಅಂಬಾಟಿ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ, ಜಿಪಂ ಮಾಜಿ ಅಧ್ಯಕ್ಷ ರಮೇಶ್ ಮರಗೋಳ, ಪುರಸಭೆ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾಳಗಿ, ಶಿವಕಾಂತ್ ಬೆಣ್ಣೂರಕರ್, ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ, ಮುಕ್ತಾರ್ ಪಟೇಲ್, ನಾಗು ಕಲ್ಲಕ್, ರಾಜಪ್ಪ ಹುಂಡೇಕರ್, ಶಿವಪುತ್ರಪ್ಪ ಕರಣಿಕ್, ಮರೆಪ್ಪ ಮೇತ್ರಿ, ಲಿಂಗಪ್ಪ ಮಲ್ಕನ್, ಶ್ರೀಕಾಂತ್ ಸಿಂಧೆ, ಲೋಹಿತ್ ಮುದ್ದಡಗಿ, ವಿಜಯಕುಮಾರ್ ದೊಡ್ಡಮನಿ, ನಾಗೇಂದ್ರ ಬುರ್ಲಿ, ಜಗನ್ನಾಥ ಮುಡಬೂಳಕರ್, ರಾಮಲಿಂಗ ಬಾನರ್, ಶಿವಮೂರ್ತಿ ಯರಗಲ್, ಧರ್ಮಣ್ಣ ಕಟ್ಟಿಮನಿ, ಹರಳಯ್ಯ ಬಡಿಗೇರ್, ಮಲ್ಲಿಕಾರ್ಜುನ ಮುಡಬೂಳಕರ್, ದೇವಿಂದ್ರ ಕುಮಸಿ, ಉದಯಕುಮಾರ್ ಸಾಗರ, ನಾಗಪ್ಪ ಬೆಳಮಗಿ, ಮಾರುತಿ ಹುಳಗೋಳಕರ್, ಸುಭಾಷ್ ಕಲ್ಮರಿ, ಶರಣು ತಲಾಟಿ, ರಾಜು ಬುಳಕರ್, ಬಸವರಾಜ ಮುಡಬೂಳಕರ್, ಸೂರಜ್ ಕಲ್ಲಕ್, ನಾಗರಾಜರೆಡ್ಡಿ, ಸಾಗರ ಚಿಟ್ಟೆಕರ್, ಕಾರ್ತಿಕ್ ಕಲ್ಲಕ್, ಅಂಬರೀಷ್ ಮತ್ತಿಮುಡ್, ಪ್ರಜ್ವಲ್ ಬೌದ್ಧಿ, ರಘು ಬಡಿಗೇರ್ ಸೇರಿದಂತೆ ಇತರರು ಇದ್ದರು. ಕಲಾವಿದ ಸಿದ್ದಾರ್ಥ್ ಚಿಮ್ಮಇದಲಾಯಿ ಪ್ರಾರ್ಥಿಸಿದರು, ನಾಗರಾಜ್ ಓಂಕಾರ ನಿರೂಪಿಸಿದರು. ಕಿರಣಕುಮಾರ ಕುಮಸಿ ಸ್ವಾಗತಿಸಿದರು, ಸಂಜಯ ಬುಳಕರ್ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!