ಚಿತ್ತಾಪುರ ಹರಳಯ್ಯ ಸಮಾಜದ ಕಚೇರಿಯಲ್ಲಿ ಬಾಬು ಜಗಜೀವನರಾಮ್ ಜಯಂತಿ ಆಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಇಂದಿರಾ ನಗರದ ತಾಲೂಕು ಹರಳಯ ಸಮಗಾರ ಸಮಾಜದ ಕಚೇರಿಯಲ್ಲಿ ಶನಿವಾರ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರ ಜಯಂತಿ ಆಚರಣೆ ನಿಮಿತ್ತ ತಾಲೂಕು ಅಧ್ಯಕ್ಷ ಪರಶುರಾಮ ರಾಜಾಪುರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನಗಳು ಸಲ್ಲಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಶಂಕರ ಹಳಿಪೇಟ್, ಖಜಾಂಚಿ ಗೌರಿಶಂಕರ ಕಾಳಗಿ, ಮುಖಂಡರಾದ ಬಸವರಾಜ ಕಬಾಡೆ, ಮಹಾದೇವ ಕಬಾಡೆ, ರಾಜು ಕಬಾಡೆ, ಧರ್ಮರಾಜ್ ಅಮಿಲಿಪೂರ, ಈಶ್ವರ ಅಮಿಲಿಪೂರ, ಪರಶುರಾಮ ಮನಗೂಳಿ ಇದ್ದರು.