ಚಿತ್ತಾಪುರ ಬೇಸಿಗೆ ತರಬೇತಿ ಶಿಬಿರ ಸಮಾರೋಪ ಸಮಾರಂಭ, ಮೊಬೈಲ್ ಬಳಕೆಯಿಂದ ಓದಿನ ಕಡೆ ಆಸಕ್ತಿ ಕಡಿಮೆ: ತ್ರೀವೇಣಿ ಪಾಟೀಲ ವಿಷಾದ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪ್ರಸ್ತುತ ಕಾಲದಲ್ಲಿ ಮಕ್ಕಳು ಮೊಬೈಲ್ ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ ಹೀಗಾಗಿ ಓದಿನ ಕಡೆ ಆಸಕ್ತಿ ಕಡಿಮೆ ಆಗಿದೆ ಎಂದು ಎಂ.ಬಿ.ಪಾಟೀಲ ಪಿಯು ಕಾಲೇಜಿನ ಪ್ರಾಚಾರ್ಯ ತ್ರೀವೇಣಿ ವಿ.ಪಾಟೀಲ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಎಂ.ಬಿ.ಪಾಟೀಲ ಪಬ್ಲಿಕ್ ಇಂಗ್ಲಿಷ್ ಮಾಧ್ಯಮ ಶಾಲೆ ವತಿಯಿಂದ ಹಮ್ಮಿಕೊಂಡಿದ್ದ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮೊಬೈಲ್ ಹಾಗೂ ಟಿವಿ ನೋಡುವುದನ್ನು ಕಡಿಮೆ ಮಾಡಿ ಪುಸ್ತಕ ಓದುವ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಬೇಸಿಗೆ ತರಬೇತಿಯನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ತಮ್ಮ ಜ್ಞಾನಾರ್ಜನೆ ಹೆಚ್ಚಿಸಿಕೊಂಡಿದ್ದಾರೆ ಹಾಗೂ ವ್ಯಕ್ತಿತ್ವ ವಿಕಸನ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಸಿಬಿಎಸ್ಇ ಶಾಲೆಯ ಪ್ರಾಚಾರ್ಯ ಡಾ.ಜಯಶ್ರೀ ಎಸ್.ರೆಡ್ಡಿ ಮಾತನಾಡಿ, ಮಕ್ಕಳು ವ್ಯರ್ಥ ಸಮಯ ಕಳೆಯದೇ ಓದಿನ ಕಡೆ ಗಮನ ಹರಿಸಬೇಕು ಈ ನಿಟ್ಟಿನಲ್ಲಿ ವಿಧ್ಯಾರ್ಥಿಗಳ ಜೀವನದಲ್ಲಿ ಸಮಯ ಅನ್ನುವುದು ಬಹಳ ಮುಖ್ಯ ಹೀಗಾಗಿ ಸಮಯಕ್ಕೆ ಹೆಚ್ಚು ಮಹತ್ವ ಕೊಡಬೇಕು ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ವಿದ್ಯಾರ್ಥಿಗಳಾದ ಶಬನಂಬಿ ಎಂ.ಡಿ ಆರಿಫ್, ರುಹಾನ್ ಶೇಖ್ ಮೆಹಮೂದ್ ಶೇಖ್, ಮೊಹ್ ಅನಸ್ ಅಬ್ದುಲ್ ಹಮೀದ್, ರಾಘವ್ ಸಂತೋಷ್ ಕುಮಾರ್, ಆಶಿಯಾ ಮೈಬೂಬಸಾಬ್ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕರಾದ ಆನಂದ, ನಾಗರತ್ನ, ರಚನಾ, ಬಸವರಾಜ ಪೂಜಾರಿ, ಉದಯಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕವಿತಾ ಕಾಶಿನಾಥ ಸ್ವಾಗತಿಸಿದರು, ರುಹಾನ್ ಶೇಖ್ ಮೆಹಮೂದ್ ಶೇಖ್ ನಿರೂಪಿಸಿದರು, ಶಿಬಿರದ ಸಂಚಾಲಕ ಲಾಲಪ್ಪ ಗಂಧಿ ವಂದಿಸಿದರು.