ಚಿತ್ತಾಪುರ ಭಾರಿ ಮಳೆ ಗಾಳಿಗೆ ವಾಹನ ನಿಲುಗಡೆಯ ಶೆಡ್ ಉರುಳಿ ಬಿದ್ದು ಬೈಕ್ ಜಖಂ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದಲ್ಲಿ ಭಾನುವಾರ ಸಂಜೆ ಸುರಿದ ಮಳೆ ಮತ್ತು ಭಾರಿ ಗಾಳಿ ರಭಸಕ್ಕೆ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿನ ವಾಹನ ನಿಲುಗಡೆಯ ಶೆಡ್ ಉರುಳಿ ಬಿದ್ದಿದ್ದು ಒಂದು ಬೈಕ್ ಜಖಂಗೊಂಡಿದೆ. ಕಾಲೇಜಿನ ಆವರಣದಲ್ಲಿನ ಮರದ ಕೊಂಬೆಗಳೂ ಮುರಿದು ಬಿದ್ದಿವೆ. ಆದರೆ ಯಾರಿಗೂ ಹಾನಿ ಆಗಿರುವುದಿಲ್ಲ ಎಂದು ಪ್ರಾಚಾರ್ಯ ಡಾ.ಶಿವಶರಣಪ್ಪ ಬಿರಾದಾರ ತಿಳಿಸಿದ್ದಾರೆ.
ಪಟ್ಟಣದ ಹಲವು ಕಡೆ ಗಿಡಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದ ಕಾರಣ ರಾತ್ರಿಯಿಡೀ ವಿದ್ಯುತ್ ಕೈಕೊಟ್ಟಿದೆ ಇದರಿಂದ ರಾತ್ರಿಯಿಡೀ ಜನರು ನಿದ್ದೆ ಮಾಡದೆ ಚಡಪಡಿಸಿದ್ದಾರೆ.