Oplus_131072

ಚಿತ್ತಾಪುರ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಉದ್ದೇಶಪೂರ್ವಕವಾಗಿ ಬಂಧಿಸಿರುವ ಪೊಲೀಸರ ಕ್ರಮ ಖಂಡನೀಯ: ರವೀಂದ್ರ ಸಜ್ಜನಶೆಟ್ಟಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡರವರನ್ನು ವಿನಾಕಾರಣ ಉದ್ದೇಶಪೂರ್ವಕವಾಗಿ ಬಂಧಿಸಿರುವ ಪೊಲೀಸರ ಕ್ರಮ ಖಂಡನೀಯ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ತಿಳಿಸಿದ್ದಾರೆ.

ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿದ ಅವರು,  ಚಿತ್ತಾಪುರ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡರವರನ್ನು ಡಿಸೆಂಬರ್ 9 ರಂದು ನಡೆದ ಯಡ್ರಾಮಿ ಯುವತಿಯ ಅತ್ಯಾಚಾರ ಘಟನೆಯನ್ನು ಖಂಡಿಸಿ ಮಾಡಿದ ಪ್ರತಿಭಟನೆಯಲ್ಲಿ ಆರೋಪಿಯೆಂದು ಡಿಸೆಂಬರ್ 16 ರಂದು ಸ್ಟೇಷನ್ ಬಜಾರ್ ಪೊಲೀಸರು ಬಂಧಿಸಿರುತ್ತಾರೆ. ಆದರೆ ಆ ದಿನ  ಮಣಿಕಂಠ ರಾಠೋಡ ಸದರಿ ದಿನಾಂಕದಂದು ನಡೆದ ಹಿಂದೂ ಪರ ಸಂಘಟನೆಗಳ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಈ ಒಂದು ಪ್ರತಿಭಟನೆಯಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರಾದ ರೇವುನಾಯಕ ಬೆಳಮಗಿ, ಸುಭಾಷ ರಾಠೋಡ, ಅರವಿಂದ ಚವ್ಹಾಣ, ವಿಠಲ್ ಜಾಧವ ಸೇರಿದಂತೆ ಅನೇಕರು ಭಾಗವಹಿಸಿದರು. ಆದರೆ ಇದರಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಮುಖಂಡರು ಭಾಗವಹಿಸಿದರೂ ಸಹಿತ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಇವರನ್ನು ಮಾತ್ರ ಬಂದಿಸಿರುತ್ತಾರೆ. ಇದರ ಹಿಂದ ಕಾಣದ ಕೈಗಳ ಕೈವಾಡ ಇರುವ ಸಂಶಯವಿರುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರತಿಸಲ ಯಾವುದಾದರೊಂದು ಸುಳ್ಳು ನೇಪ ಹೇಳಿಕೊಂಡು ವಿನಾಕಾರಣ ಮಣಿಕಂಠ ರಾಠೋಡ ಇವರನ್ನು ಬಂದಿಸುತ್ತಿದ್ದಾರೆ. ಸದರಿಯವರ ಮೇಲೆ ದಾಖಲಾತಿರುವ ಯಾವುದೇ ಒಂದು ಪ್ರಕರಣಗಳು ಆರೋಪಿ ಎಂದು ಸಾಭಿತಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಇಲ್ಲದ ವ್ಯಕ್ತಿಯು ಗಲಬೆಗೆ ಪ್ರೋತ್ಸಾಹಿಸಿದ್ದ ಎಂದು ಬಂಧಿಸಿರುವುದು ಎಷ್ಟುರ ಮಟ್ಟಿಗೆ ಸರಿ ? ಈ ಒಂದು ವಿಷಯದ ಹಿಂದೆ ಯಾರಿದ್ದಾರೆ ? ಪೋಲಿಸರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆಯೇ ? ಎಂಬ ಪ್ರಶ್ನೆಗಳು ಇಂದು ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಈ ಬಂಧನದಿಂದ ಸರ್ಕಾರ ಏನನ್ನು ಹೇಳಲು ಹೊರಟಿದೆ ಎಂಬುದು ಗೊತ್ತಾಗುತ್ತಿಲ್ಲಾ ಎಂದರು.

ಕಾನೂನು ಪಾಲಿಸಬೇಕಾದ ಪೊಲೀಸರು ಈ ರೀತಿ ರಾಜಕೀಯ ಪ್ರೇರಿತವಾಗಿ ವರ್ತಿಸುವುದು ಸಂವಿಧಾನದ ವಿರೋಧಿ ನಡೆಯಾಗಿದೆ, ಇದನ್ನು ಭಾರತೀಯ ಜನತಾ ಪಕ್ಷ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!