ಚಿತ್ತಾಪುರ ಬಿಜೆಪಿಯಿಂದ ನಂದಾರೆಡ್ಡಿ ತರಕಸಪೇಟ್ ಉಚ್ಛಾಟನೆ: ಸಜ್ಜನಶೆಟ್ಟಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಭಾರತೀಯ ಜನತಾ ಪಕ್ಷದ ಕಾರ್ಯವೈಖರಿ ಹಾಗೂ ನಿರಂತರ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವುದರಿಂದ ನಂದಾರೆಡ್ಡಿ ತರಕಸಪೇಟ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ತಿಳಿಸಿದ್ದಾರೆ.
ಚಿತ್ತಾಪುರ ಮಂಡಲದ ನಾಲವಾರ ಮಹಾಶಕ್ತಿ ಕೇಂದ್ರದ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಮುಖ ಜವಾಬ್ದಾರಿ ಹೊಂದಿದ ನಂದಾರೆಡ್ಡಿ ತರಕಸಪೇಟ್ ರಾಜ್ಯಾಧ್ಯಕ್ಷರ ಹಾಗೂ ಜಿಲ್ಲಾಧ್ಯಕ್ಷರ ಕಾರ್ಯವೈಖರಿಯ ಬಗ್ಗೆ ವಿರೋಧ ವ್ಯಕ್ತವಡಿಸುವುದರಿಂದ ಹಾಗೂ ನಿರಂತರ ಪಕ್ಷವಿರೋಧ ಚಟುವಟಿಕೆಯಲ್ಲಿ ಭಾಗವಹಿಸಿ ಪಕ್ಷದ ಹೆಸರಿಗೆ ಧಕ್ಕೆ ತಂದಿರುವ ನಿಮಿತ್ತ ಇವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಜಿಲ್ಲಾಧ್ಯಕ್ಷರ ಆದೇಶ ಮೇರೆಗೆ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.