ಚಿತ್ತಾಪುರ ಭಕ್ತಸಮೂಹ ನಡುವೆ ವಿಜೃಂಭಣೆಯಿಂದ ನಡೆದ ಚಿತ್ತಾಷಹಾವಲಿ ಸಂದಲ್ ಮೆರವಣಿಗೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಐತಿಹಾಸಿಕ ಹಿಂದು ಮುಸ್ಲಿಂ ಭಾವೈಕತೆಯ ಸೂಫಿ ಸಂತ ಹಜರತ್ ಚಿತ್ತಾಷಹಾವಲಿ ದರ್ಗಾದ 798ನೇ ಜಾತ್ರಾ ಮಹೋತ್ಸವ (ಉರುಸ್) ಗಂಧದ (ಸಂದಲ್) ಮೆರವಣಿಗೆಯು ಭಕ್ತಸಮೂಹ ನಡುವೆ ಬಹು ವಿಜೃಂಭಣೆಯಿಂದ ಜರುಗಿತು.
ಮಂಗಳವಾರ ಬೆಳಗ್ಗೆ ಹಿಂದು ಭಕ್ತ ನಾಗಣ್ಣ ಮಾಸ್ಟರ್ ಬಳ್ಳಾ ಅವರ ಮನೆಯಲ್ಲಿ ಸಾಮೂಹಿಕ ಪಾರ್ಥನೆ, (ಪಾತೆಹಾ) ಜರುಗಿತು. ವಿಶೇಷ ಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ರಾತ್ರಿ 10ಕ್ಕೆ ಬಳ್ಳಾ ಮನೆಯಿಂದ ಗಲಾಫ್ ಮೆರವಣಿಗೆಯು ಮುತುವಲ್ಲಿ ಸೈಯದ ಮಿನಾಜೋದ್ದಿನ್ ಚಿಸ್ತಿ ಮನೆಗೆ ತಲುಪಿತು. ಅಲ್ಲಿ ವಿಶೇಷ ಪಾರ್ಥನೆ ಸಲ್ಲಿಸಿ ಮೌಲ್ವಿಗಳಿಂದ ಗಂಧಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ರಾತ್ರಿ 11.30ಕ್ಕೆ ಚಿಸ್ತಿ ಮನೆಯಿಂದ ಪ್ರಾರಂಭವಾದ ಗಂಧದ ಮೆರವಣಿಗೆಯು ತೆಳಗೇರಿ, ಭುವನೇಶ್ವರಿ ವೃತ್ತ, ಜನತಾ ವೃತ್ತ, ಕಿರಾಣಾ ಬಜಾರ್, ಕಪಡಾ ಬಜಾರ, ಚಿತ್ತಾವಲಿ ವೃತ್ತದ ಮೂಲಕ ಬೆಳಗ್ಗೆ 5 ಕೈ ಚಿತ್ತಾಷಹಾವಲಿ ದರ್ಗಾಕ್ಕೆ ತಲುಪಿತು. ದರ್ಗಾದ ಸಮಾಧಿಗೆ ಗಂಧದ ಲೇಪನ ಮಾಡಲಾಯಿತು. ನಂತರ ತಬರುಕ್ ವಿತರಿಸಲಾಯಿತು.
ಗಂಧದ ಮೆರವಣಿಗೆಯಲ್ಲಿ ಎರಡು ಒಂಟೆಗಳು, ಕುದುರೆ, ಯುವಕರ ಕಟ್ಟಿಗೆ ಆಟ, ಭಕ್ತಿ ಪ್ರಧಾನ ಹಾಡುಗಳು ಜನಮನ ಸೆಳೆದವು. ಸಿಪಿಐ ಚಂದ್ರಶೇಖರ ತಿಗಡಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಪಿಎಸ್ಐ ಚಂದ್ರಾಮಪ್ಪ, ಮುಖಂಡರಾದ ರಾಜಶೇಖರ ಬಳ್ಳಾ, ನಾಗರೆಡ್ಡಿ ಗೋಪಸೇನ್, ಚಂದ್ರಶೇಖರ ಕಡೇಚೂರ, ಸುರೇಶ ಅಳೋಳ್ಳಿ, ಮಲ್ಲರೆಡ್ಡಿ ಗೋಪಸೇನ್, ಮುತುವಲ್ಲಿ ಸೈಯದ್ ಮಿನಾಜೋದ್ದಿನ್ ಚಿಸ್ತಿ, ಸೈಯದ್ ಸೇಟ್, ನಿಜಾಮೋದಿನ್ ಚಿಸ್ತಿ, ರಫೀಕ ಚಿಸ್ತಿ, ಶಫೀಕ್ ಚಿಸ್ತಿ, ವಿಠಲ್ ಕಟ್ಟಿಮನಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ನಾಗರಾಜ ರೇಷ್ಮಿ, ತಿರುಪತಿ ಚವ್ಹಾಣ, ಮಹ್ಮದ್ ಇಬ್ರಾಹಿಂ, ಚಂದ್ರಶೇಖರ ಬಳ್ಳಾ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.