ಚಿತ್ತಾಪುರ ತಾಲೂಕು ಡಿಎಸ್ಎಸ್ ಪದಾಧಿಕಾರಿಗಳ ಆಯ್ಕೆ
ದಲಿತ ಸಂಘರ್ಷ ಸಮಿತಿ ಜನಪರ ಸಂಘಟನೆ: ಮರಿಯಪ್ಪ ಹಳ್ಳಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ದಲಿತ ಸಂಘರ್ಷ ಸಮಿತಿ ಜನಪರ ಸಂಘಟನೆ ಆಗಿದೆ ಎಂದು ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದ್ದಾರೆ.
ಚಿತ್ತಾಪುರ ತಾಲೂಕು ದಲಿತ ಸಂಘರ್ಷ ಸಮಿತಿ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ ಸುಮಾರು 30-40 ವರ್ಷಗಳಿಂದ ಜನಪರವಾದ ಹೋರಾಟ ಮಾಡುತ್ತಾ ಬಂದ ದಲಿತ ಸಂಘರ್ಷ ಸಮಿತಿ ಜನಪರ ಸಂಘಟನೆ ಆಗಿದೆ ಎಂದರು.
ಇಲ್ಲಿ ಹಲವಾರು ಜನರ ತ್ಯಾಗ ಮತ್ತು ಪರಿಶ್ರಮದಿಂದ ಸಂಘಟನೆ ಬಲಿಷ್ಠವಾಗಿದೆ. ಚಿತ್ತಾಪುರ ತಾಲೂಕಿನಲ್ಲಿ ಅರ್ಥಪೂರ್ಣ ರೀತಿಯಲ್ಲಿ ಸ್ಥಳೀಯ ನಾಯಕರು ತಮ್ಮದೇ ಯಾದ ಕೊಡುಗೆಯನ್ನು ಸಂಘಟನೆಗೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಇಂದಿನ ಯುವಕರು ಬುದ್ಧ, ಬಸವ, ಅಂಬೇಡ್ಕರವರ ವಿಚಾರಧಾರೆ ಇಟ್ಟುಕೊಂಡು ಸಮಾಜಮುಖಿಯಾಗಿ ಕಾರ್ಯಪ್ರವೃತ್ತರಾಗಬೇಕಾಗಿದೆ. ಸಂಘಟನೆಯ ತಾತ್ವಿಕತೆ, ಶಿಸ್ತನ್ನು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮೈಗೂಡಿಸಿಕೊಂಡು ನಡೆಯಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಸಂಚಾಲಕರಾದ ಮರೆಪ್ಪ ಮೇತ್ರೆ, ಸಂಘಟನಾ ಸಂಚಾಲಕ ರಮೇಶ ಕವಡೆ, ಉಪ ವಿಭಾಗೀಯ ಸಂಚಾಲಕ ಉದಯಕುಮಾರ ಸಾಗರ, ಮುಖಂಡರಾದ ಡಾ. ಶಿವಕುಮಾರ ಸಂಗನ್, ಮಲ್ಲಿಕಾರ್ಜುನ ಗೌಡಹಳ್ಳಿ ಮತ್ತು ಮಲ್ಲಣ್ಣ ಮಸ್ಕಿ, ತಾಲೂಕು ದ.ಸಂ.ಸ. ಹಾಗೂ ದ.ವಿ.ಒ. ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ದಲಿತ ಸಂಘರ್ಷ ಸಮಿತಿ, ದಲಿತ ವಿದ್ಯಾರ್ಥಿ ಒಕ್ಕೂಟ ತಾಲ್ಲೂಕ ಶಾಖೆ ಹಾಗೂ ದಲಿತ ಸಂಘರ್ಷ ಸಮಿತಿ ನಗರ ಶಾಖೆ, ಮತ್ತು ಚಿತ್ತಾಪುರ ಹೋಬಳಿ ಶಾಖೆಯ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತ್ತು.
ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು: ಶಿವಮೂರ್ತಿ ಪಾಮನೂರ ಯರಗಲ್ (ಸಂಚಾಲಕರು), ನಾಗೇಂದ್ರ ಬುರ್ಲಿ (ಆಂತರಿಕ ಶಿಸ್ತು), ಭೀಮರಾಯ ಕೊಂಚೂರಕರ (ದಲಿತ, ಹಿಂದುಳಿದ, ಅಲ್ಪಸಂಖ್ಯಾತ), ಧರ್ಮಣ್ಣ ಕಟ್ಟಿಮನಿ (ನೌಕರರ ವಿಭಾಗ), ರವಿಚಂದ್ರ ದೇವಿ (ಕಾರ್ಮಿಕ ವಿಭಾಗ) ಸಂಘಟನಾ ಸಂಚಾಲಕರು.ನವಾಬ ಮುನಿಸಿ ಖಜಾಂಚಿ, ಕಾರ್ಯಕಾರಿ ಸಮಿತಿ ಸದ್ಯಸರು: ನಿಂಗಪ್ಪ ಮುಗಳಕರ, ಮಾಹದೇವಪ್ಪ ಕುಂಬಾರ, ಲಕ್ಷಣ ಆಮಕರ, ಜೈಭೀಮ ಶರ್ಮ, ಬಸಂತ ವರ್ಮ.
ತಾಲೂಕ ದಲಿತ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳು: ಪವನ ಉದಯಕುಮಾರ ಸಾಗರ (ಸಂಚಾಲಕರು), ದಶರಥ ಹಾದಿಮನಿ ಮೊಗಲಾ, ಅರ್ಜುನ ಕಟ್ಟಿಮನಿ, ನಿಂಗಪ್ಪ ರಾಜೋಳ (ಸಂಘಟನಾ ಸಂಚಾಲರು), ಸಚೀನ ದೊಡ್ಡಮನಿ (ಖಜಾಂಚಿ) ಕಾರ್ಯಕಾರಿ ಸಮಿತಿ ಸದಸ್ಯರು ತಿಪ್ಪಣ್ಣ ದೊಡ್ಡಮನಿ, ಮಹೇಶ ಕಮಲಾಪೂರ.
ಚಿತ್ತಾಪೂರ ಹೋಬಳಿ ಸಂಚಾಲಕರು ಸಾಬಣ್ಣ ಜಡಿ ಡೋಣಗಾಂವ. ಚಿತ್ತಾಪುರ ನಗರ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು: ಸಂಚಾಲಕರು ಕಾರ್ತಿಕ ಆನಂದ ಕಲ್ಲಕ್ (ಸಂಚಾಲಕರು), ನಿತೀನ ಸಾಬಣ್ಣ ಟುಬಾಕ, ಹುಸನಪ್ಪ ಚೂರಿ (ಸಂಘಟನಾ ಸಂಚಾಲಕರು), ನಾಗರಾಜ ಮುಡಬೂಳ (ಖಜಾಂಚಿ).