ಚಿತ್ತಾಪುರ ಇಫ್ತಾರ್ ಕೂಟಕ್ಕೆ ಕಂಬಳೇಶ್ವರ ಶ್ರೀಗಳು ಚಾಲನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ತರಕಾರಿ ಮಾರುಕಟ್ಟೆಯ ಜನತಾ ವೃತ್ತದಲ್ಲಿ ಪವಿತ್ರ ರಂಜಾನ್ ಮಾಸದ ನಿಮಿತ್ತ ಮುಸ್ಲಿಂ ಸಮುದಾಯದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಇಫ್ತಾರ್ ಕೂಟಕ್ಕೆ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಸಮುದಾಯದ ಮುಖಂಡರಾದ ಭೀಮಣ್ಣ ಸಾಲಿ, ನಾಗರಾಜ ಭಂಕಲಗಿ, ಮಲ್ಲಿಕಾರ್ಜುನ ಪೂಜಾರಿ, ಪ್ರಭು ಗಂಗಾಣಿ, ಸಂತೋಷ ಪೂಜಾರಿ, ಅನೀಲ್ ವಡ್ಡಡಗಿ, ಎಂ.ಎ.ರಷೀದ್, ನಜೀರ್ ಆಡಕಿ, ಅಶ್ಫಾಕ್ ಮಿರ್ಜಾ, ಪಿಎಸ್ಐ ಚಂದ್ರಾಮಪ್ಪ ಸೇರಿದಂತೆ ನೂರಾರು ಯುವಕರು ಉಪಸ್ಥಿತರಿದ್ದರು.