ಚಿತ್ತಾಪುರ ಕೋಲಿ ಸಮಾಜವನ್ನು ಒಗ್ಗೂಡಿಸಿದ್ದು ತಿಪ್ಪಣ್ಣಪ್ಪ ಕಮಕನೂರ, ಒಡಕು ಮೂಡಿಸಿದ್ದು ಭೀಮಣ್ಣ ಸಾಲಿ: ನಾಟೀಕಾರ ತಿರುಗೇಟು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನಲ್ಲಿ ಕೋಲಿ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮಾಜವನ್ನು ಸಂಘಟಿಸಿ ಒಗ್ಗೂಡಿಸುವ ಕೆಲಸ ಕೋಲಿ ಗಂಗಾಮತ ಸಮಾಜದ ರಾಜ್ಯ ಗೌರವಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರು ಪ್ರಾಮಾಣಿಕ ಕೆಲಸ ಮಾಡಿದ್ದಾರೆ ಆದರೆ ಚಿತ್ತಾಪುರದಲ್ಲಿ ಹಿರಿಯ ಮುಖಂಡರೆಂದು ಎನ್ನಿಸಿಕೊಂಡ ಭೀಮಣ್ಣ ಸಾಲಿ ಅವರು ತಮ್ಮ ಸ್ವಾರ್ಥಕ್ಕಾಗಿ ಮತ್ತು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಮಾಜವನ್ನು ತಪ್ಪು ದಾರಿಗೆ ಎಳೆದು ಯುವಕರಲ್ಲಿ ಮಿಸ್ ಗೈಡ್ ಮಾಡಿ ಸಮಾಜದಲ್ಲಿ ವಿಷಬೀಜ ಬಿತ್ತಿ ಒಡಕ್ಕುಂಟು ಮಾಡಿ ಜಗಳ ಹೆಚ್ಚುವ ಕೆಲಸ ಮಾಡಿದ್ದಾರೆ ಎಂದು ಅಂಬಿಗರ ಚೌಡಯ್ಯ ನಿಗಮದ ಮಾಜಿ ನಿರ್ದೇಶಕ ಶರಣಪ್ಪ ನಾಟೀಕಾರ ತಿರುಗೇಟು ನೀಡಿದರು.
ಪಟ್ಟಣದ ಅಂಬಿಗರ ಚೌಡಯ್ಯ ವೃತ್ತದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ ಅವರು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ ಹೀಗಾಗಿ ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಸುಮ್ಮನೆ ಇರುವುದಿಲ್ಲ ಇದು ಎಚ್ಚರಿಕೆ ನೀಡಿದರು.
ಚಿತ್ತಾಪುರ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಆಯ್ಕೆ ಮಾಡುವಲ್ಲಿ ಮೊದಲಿಂದಲೂ ಜನರ ಸಹಮತದ ಮೇರೆಗೆ ಅಂತಿಮವಾಗಿ ತಿಪ್ಪಣ್ಣಪ್ಪ ಕಮಕನೂರ ಅವರ ಲೇಟರ್ ಪ್ಯಾಡ್ ಮೇಲೆಯೇ ಹೆಸರು ಘೋಷಣೆ ಮಾಡಲಾಗುತ್ತದೆ ಇದು ಎಲ್ಲರಿಗೂ ಗೊತ್ತಿದ್ದರೂ ವಿನಾಕಾರಣ ಅವರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ತಿಪ್ಪಣ್ಣಪ್ಪ ಕಮಕನೂರ ಅವರ ಲೇಟರ್ ಪ್ಯಾಡ್ ನಲ್ಲಿಯೇ ಈ ಹಿಂದೆ ಅಧ್ಯಕ್ಷರಾದರು ಈಗ ಮೌನ ವಹಿಸಿರುವುದು ದುರಂತ ನಾವು ಯಾರ ಲೇಟರ್ ಪ್ಯಾಡ್ ನಲ್ಲಿ ಅಧ್ಯಕ್ಷರಾಗಿದ್ದೇವೆ ಎಂಬುದು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಮಕನೂರ ಅವರು ತಮ್ಮ ಲೇಟರ್ ಪ್ಯಾಡ್ ನ್ನು ಸರಿಯಾಗಿಯೇ ಬಳಸಿದ್ದಾರೆ ಹೀಗಾಗಿ ಭೀಮಣ್ಣ ಸಾಲಿ ಅವರು ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.
ಕೋಲಿ ಸಮಾಜದ ಗೌರವಾಧ್ಯಕ್ಷ ಭೀಮಣ್ಣ ಸೀಬಾ ಮಾತನಾಡಿ, ತಿಪ್ಪಣ್ಣಪ್ಪ ಕಮಕನೂರ ಅವರು ಕೋಲಿ ಸಮಾಜದ ರಾಜ್ಯ ಮಟ್ಟದ ಒಬ್ಬ ಪ್ರಭಾವಿ ನಾಯಕರಾಗಿದ್ದು ಈಗ ವಿಧಾನ ಪರಿಷತ್ ಸದಸ್ಯರಾಗಿ ಕೋಲಿ ಸಮಾಜದ ಧ್ವನಿಯಾಗಿದ್ದಾರೆ ಹೀಗಾಗಿ ಇವರ ಬೆಳವಣಿಗೆ ಸಹಿಸಿಕೊಳ್ಳಕ್ಕಾಗದೇ ಹೊಟ್ಟೆ ಕಿಚ್ಚಿನಿಂದ ಭೀಮಣ್ಣ ಸಾಲಿ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ ಇದು ಇಲ್ಲಿಗೆ ನಿಲ್ಲಿಸಿ ನಿಮ್ಮ ಗೌರವ ಉಳಿಸಿಕೊಳ್ಳಿ ಇಲ್ಲದಿದ್ದರೆ ಸಮಾಜದ ಜನರಿಂದಲೇ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಆಯ್ಕೆ ಮಾಡುವಲ್ಲಿ ಒಮ್ಮೆ ಅಧ್ಯಕ್ಷ ಅಂತ ಮಾಡುತ್ತಾರೆ ಒಮ್ಮೆ ಕ್ಯಾನ್ಸಲ್ ಅಂತ ಹೇಳುತ್ತಾರೆ ಒಮ್ಮೆ ದಿಗ್ಗಾಂವ ಭಾಗದಲ್ಲಿ ಬಹಳಷ್ಟು ಅಧ್ಯಕ್ಷರಾಗಿದ್ದಾರೆ ಹೀಗಾಗಿ ದಂಡೋತಿ ಗುಂಡಗುರ್ತಿ ಭಾಗದವರಿಗೆ ಅಧ್ಯಕ್ಷ ಮಾಡಲಾಗುತ್ತದೆ ಎಂತೆಲ್ಲ ಹೇಳಿ ಸಮಾಜದಲ್ಲಿ ಗೊಂದಲ ಮೂಡಿಸಿ ಅಶಾಂತಿ ವಾತಾವರಣ ನಿರ್ಮಿಸಿದ್ದಾರೆ ಹೀಗಾಗಿ ಇವರೊಬ್ಬ ಅರೆಹುಚ್ಚರಂತೆ ನಡೆದುಕೊಳ್ಳುತ್ತಿದ್ದಾರೆ ಹೀಗಾಗಿ ತಾಲೂಕಿನಲ್ಲಿ ಇಬ್ಬರು ಅಧ್ಯಕ್ಷರಾಗಲು ಭೀಮಣ್ಣ ಸಾಲಿ ಅವರೇ ಕಾರಣ ಆಗಿದ್ದಾರೆ ಎಂದು ಟೀಕಿಸಿದರು.
ಮುಖಂಡ ತಮ್ಮಣ್ಣ ಡಿಗ್ಗಿ ಮಾತನಾಡಿ, ಕೋಲಿ ಸಮಾಜದಲ್ಲಿ ಒಡಕು ಮೂಡಿಸುತ್ತಿರುವ ಕೆಲ ಮುಖಂಡರ ಮಾತುಗಳಿಗೆ ಕಿವಿಗೊಡದೆ ಕೋಲಿ ಸಮಾಜದ ಅಧಿಕೃತ ತಾಲೂಕು ಅಧ್ಯಕ್ಷ ಶಿವಕುಮಾರ ಯಾಗಾಪೂರ ಅವರಿಗೆ ಬೆಂಬಲಿಸಬೇಕು. ಇವರ ನೇತೃತ್ವದಲ್ಲಿ ಜನವರಿ 21 ರಂದು ನಡೆಯಲಿರುವ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಯಶಸ್ವಿಗೆ ಸಹಕರಿಸಿ ಇವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ, ಮುಖಂಡರಾದ ಸಾಬಣ್ಣ ಡಿಗ್ಗಿ, ಕಾಶಪ್ಪ ಡೋಣಗಾಂವ, ಸಂತೋಷ ಇವಣಿ, ಸಾಬಣ್ಣ ಭರಾಟೆ, ಮಹಾದೇವ ಮುಗುಟಿ, ದಶರಥ ದೊಡ್ಡಮನಿ, ಮಹಾದೇವ ಕೊನಿಗೇರಿ ಸೇರಿದಂತೆ ಇತರರು ಇದ್ದರು.