ಚಿತ್ತಾಪುರ: ಕೃಷಿ ಯಂತ್ರೋಪಕರಣಗಳು ಹಾಗೂ ತುಂತುರ ನೀರಾವರಿ ಘಟಕಗಳ ವಿತರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕೃಷಿ ಇಲಾಖೆ ವತಿಯಿಂದ 2024-25 ನೇ ಸಾಲಿನ ವಿವಿಧ ಯೋಜನೆ ಅಡಿಯಲ್ಲಿ ರಿಯಾಯತಿ ದರದಲ್ಲಿ ಹೈಟಕ್ ಕೃಷಿ ಯಂತ್ರೋಪಕರಣಗಳು, ಕೃಷಿ ಸಂಸ್ಕರಣ ಘಟಕಗಳು ಹಾಗೂ ತುಂತುರ ನೀರಾವರಿ ಘಟಕಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿತರಿಸಿದರು.
ಚಿತ್ತಾಪುರ, ಶಹಾಬಾದ ಮತ್ತು ಕಾಳಗಿ ತಾಲೂಕಿನ ವಿವಿಧ ಗ್ರಾಮಗಳ ರೈತರಿಗೆ ಸಾಂಕೇತಿಕವಾಗಿ 6 ಜನ ರೈತರಿಗೆ ಬಹು ಬೆಳೆ ಒಕ್ಕಣೆ ಯಂತ್ರ, (ರಾಶಿ ಯಂತ್ರ), 5 ಜನ ರೈತರಿಗೆ ಬಿತ್ತುವ ಕೂರಿಗೆ, 2 ಜನ ರೈತರಿಗೆ ಭೂಮಿ ಸಿದ್ದತೆ ಉಪಕರಣ (ರೋಟೋವೇಟರ), 4 ಜನ ರೈತರಿಗೆ ಭೂಮ್ ಸ್ಟೇಯರ (ಕೀಟನಾಶಕ ಸಿಂಪರಣೆ ಯಂತ್ರ), ತಲಾ ಒಬ್ಬ ರೈತರಿಗೆ ನೇಗಿಲು ಮತ್ತು ಬೆಳೆ ಕಾಳು ವಿಂಗಡಿಸುವ ಯಂತ್ರ (ದಾಲ ಗ್ರೇಡರ್) ಹಾಗೂ ಸೂಕ್ಷ್ಮ ನೀರಾವರಿ ಯೋಜನೆ ಅಡಿಯಲ್ಲಿ 30 ಜನ ರೈತರಿಗೆ ತುಂತುರ ನೀರಾವರಿ (ಸ್ಟ್ರಿಂಕಲರ್ ಸಟ್) ರೈತರಿಗೆ ವಿತರಿಸಲಾಯಿತು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಶರಣಪ್ರಕಾಶ ಪಾಟೀಲ, ಶಾಸಕರಾದ ಅಲ್ಲಂಪ್ರಭು ಪಾಟೀಲ, ಎಂ.ವೈ.ಪಾಟೀಲ, ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ತಹಸೀಲ್ದಾರ್ ನಾಗಯ್ಯ ಹಿರೇಮಠ, ಕಾಂಗ್ರೆಸ್ ಮುಖಂಡರಾದ ಭೀಮಣ್ಣ ಸಾಲಿ, ನಾಗರೆಡ್ಡಿ ಪಾಟೀಲ ಕರದಾಳ, ರಮೇಶ್, ಶಿವಾನಂದ ಪಾಟೀಲ, ಮರಗೋಳ, ಶಿವರುದ್ರ ಭೀಣ್ಣಿ, ಜಯಪ್ರಕಾಶ ಕಮಕನೂರ, ಮನ್ಸೂರ್ ಪಟೇಲ್, ಮುಕ್ತಾರ್ ಪಟೇಲ್ ಮತ್ತು ಜಂಟಿ ಕೃಷಿ ನಿರ್ದೇಶಕ ಸಮದ ಪಟೇಲ್, ಉಪ ಕೃಷಿ ನಿರ್ದೇಶಕಿ ಅನಸೂಯಾ ಹೂಗಾರ, ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ ಮಾನಕಾರೆ, ಕೃಷಿ ಅಧಿಕಾರಿಗಳಾದ ಕರಣಕುಮಾರ, ಶ್ರೀನಿವಾಸ, ರವಿಂದ್ರಕುಮಾರ, ಸರೋಜಾ, ಮಲ್ಲಿಕಾರ್ಜುನ, ಸುರೇಖಾ, ಸುಷ್ಮಾ ಬಸವರಾಜ ಬಂಗರಗಿ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.