ಭಾರತ ಪಾಕ್ ಯುದ್ಧದ ಹಿನ್ನೆಲೆ ಮಾದಾರ ಚೆನ್ನಯ್ಯ ಜಯಂತೋತ್ಸವ ಮೇ.30 ಕ್ಕೆ ಮುಂದೂಡಿಕೆ: ಬೊಮ್ಮನಳ್ಳಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಾಯಕ ಪ್ರೀಯ ಮಾದಾರ ಚೆನ್ನಯ್ಯ ಅವರ 975 ನೇ ಜಯಂತೋತ್ಸವ ಸಮಾರಂಭವನ್ನು ಮೇ.13 ರಂದು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿತ್ತು ಆದರೆ ಪ್ರಸ್ತುತ ಭಾರತ ಪಾಕಿಸ್ತಾನ ಯುದ್ಧ ನಡೆಯುತ್ತಿದ್ಜು ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ ಇಂತಹ ದುಖಃದ ಸಮಯದಲ್ಲಿ ಜಯಂತಿ ಆಚರಣೆ ಮಾಡುವುದು ಸೂಕ್ತವಲ್ಲ ಎಂದು ನಿರ್ಧರಿಸಿ ಜಯಂತಿ ಆಚರಣೆ ಮುಂದೂಡಲಾಗಿದ್ದು ಇದೇ ಮೇ.30 ರಂದು ಆಚರಿಸಲು ನಿರ್ಣಯಿಸಲಾಗಿದೆ ಎಂದು ಜಯಂತೋತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಯಂತಿ ಕಾರ್ಯಕ್ರಮದ ನಿಮಿತ್ತ ಈಗಾಗಲೇ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು ಮತ್ತು ಎಲ್ಲಾ ಕಡೆ ಇರುವ ನಮ್ಮ ಸಮಾಜದ ಜನರನ್ನು ಜಯಂತಿಗೆ ಅಹ್ವಾನ ಮಾಡಲಾಗಿತ್ತು ಆದರೆ ದೇಶದಲ್ಲಿ ಒಳ್ಳೆಯ ವಾತಾವರಣ ಇಲ್ಲ ನಮ್ಮ ಸೈನಿಕರು ವೀರಮರಣ ಹೊಂದಿದ್ದಾರೆ ಹೀಗಾಗಿ ಜಯಂತಿ ಕಾರ್ಯಕ್ರಮ ಮುಂದೂಡಲಾಗಿದೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಮಿತಿ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಮಾತನಾಡಿ, ಪ್ರಸ್ತುತ ಪರಿಶಿಷ್ಟ ಜಾತಿ ಸಮೀಕ್ಷೆ ಕಾರ್ಯ ನಡೆಯುತ್ತಿದೆ ಇಂತಹ ಸಂದರ್ಭದಲ್ಲಿ ಮಾದಾರ ಚೆನ್ನಯ್ಯ ಜಯಂತೋತ್ಸವ ಮಾಡುವುದು ಅಷ್ಟು ಸಮಂಜಸವಲ್ಲ ಹೀಗಾಗಿ ಸಮೀಕ್ಷೆ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
30 ವರ್ಷಗಳ ಹೋರಾಟದ ಪರಿಣಾಮ ಈಗ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಸಮೀಕ್ಷೆ ಕಾರ್ಯ ನಡೆಯುತ್ತಿದೆ ಹೀಗಾಗಿ ನಮ್ಮ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಈ ನಿಟ್ಟಿನಲ್ಲಿ ಜಾತಿ ಕಲಂ 61 ರಲ್ಲಿ ಮಾದಿಗ ಎಂದು ಬರೆಸಬೇಕು ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾದಿಗ ಸಮಾಜದ ಮುಖಂಡರಾದ ದೇವಿಂದ್ರಪ್ಪ ಹಾದಿಮನಿ, ದೀಪಕ್ ಹೊಸ್ಸುರಕರ್, ಶ್ರೀಕಾಂತ್ ಹೊಸ್ಸಳ್ಳಿಕರ್, ಬಸವರಾಜ ಮುಡಬೂಳ, ಸಾಬಣ್ಣ ಪೇಂಟರ್, ವಿನ್ನುಕುಮಾರ ಜಡಿ ಇದ್ದರು.