ಮಹಿಳಾ ಮಂಡಳಿ ಕಾರ್ಯ ಶ್ಲಾಘನೀಯ
ಚಿತ್ತಾಪುರದಲ್ಲಿ ಮಹಿಳಾ ಮಂಡಳಿಯಿಂದ ಗಣೇಶ ಪ್ರತಿಷ್ಠಾಪನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಸಂತೋಷ ನಗರದಲ್ಲಿ ಮಹಿಳೆಯರು ಒಗ್ಗೂಡಿ ಮಹಿಳಾ ಮಂಡಳಿ ರಚಿಸಿಕೊಂಡು ಗಣೇಶ ಪ್ರತಿಷ್ಠಾಪನೆ ಮಾಡಿರುವ ಕಾರ್ಯ ಶ್ಲಾಘನೀಯ ಎಂದು ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಹೇಳಿದರು.
ಪಟ್ಟಣದ ಸಂತೋಷ ನಗರದಲ್ಲಿ ಮಹಿಳಾ ಮಂಡಳಿ ವತಿಯಿಂದ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಗಣೇಶ ಉತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಎಲ್ಲಾ ಕಡೆ ಯುವಕರು ಸೇರಿಕೊಂಡು ಗಣೇಶ ಕೂಡಿಸುತ್ತಾರ ಆದರೆ ಇಲ್ಲಿ ಮಹಿಳೆಯರು ಸೇರಿ ಗಣೇಶ ಕೂಡಿಸಿ ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ವಿಷಯ ಎಂದರು.
ಪತ್ರಕರ್ತ ಕಾಶಿನಾಥ ಗುತ್ತೇದಾರ ಮಾತನಾಡಿ, ಸ್ವಾತಂತ್ರ್ಯ ಚಳುವಳಿಯಲ್ಲಿ ಜನರನ್ನು ಒಗ್ಗೂಡಿಸಲು ಬಾಲ್ ಗಂಗಾಧರ ತಿಲಕ್ ಅವರು ಗಣೇಶ ಉತ್ಸವವನ್ನು ಜಾರಿಗೆ ತಂದಿದ್ದಾರೆ ಅಂದಿನಿಂದ ಇಂದಿನವರೆಗೂ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಬಹಿರಂಗವಾಗಿ ಗಣೇಶ ಉತ್ಸವವನ್ನು ಬಹಳ ಅದ್ದೂರಿಯಾಗಿ ಸಂಭ್ರಮದಿಂದ ಆಚರಿಸುತ್ತಾ ಬರಲಾಗಿದೆ, ಆದರೆ ಸಂತೋಷ ನಗರದಲ್ಲಿ ಮಹಿಳೆಯರೇ ಒಗ್ಗೂಡಿ ಒಂದು ತಂಡವನ್ನಾಗಿ ಮಾಡಿಕೊಂಡು ಗಣೇಶ ಪ್ರತಿಷ್ಠಾಪನೆ ಮಾಡಿರುವುದು ವಿಶೇಷ ಮತ್ತು ಇಡೀ ತಾಲೂಕಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಿಎಸ್ಐ ಚಂದ್ರಾಮಪ್ಪ ಸಮಾರಂಭವನ್ನು ಉದ್ಘಾಟಿಸಿದರು. ಪುರಸಭೆ ಸದಸ್ಯರಾದ ವಿನೋದ ಗುತ್ತೇದಾರ, ಅನ್ನಪೂರ್ಣ ಕಲ್ಲಕ್, ಪತ್ರಕರ್ತ ರವಿಶಂಕರ್ ಬುರ್ಲಿ, ಕಾಂಗ್ರೆಸ್ ಮುಖಂಡ ಬೆಂಜಿ ಮೋಹನ್, ಮಹಿಳಾ ಮಂಡಳಿ ಗೌರವಾಧ್ಯಕ್ಷೆ ಕಾಶಿಬಾಯಿ ಗುತ್ತೇದಾರ, ಅಧ್ಯಕ್ಷೆ ಶ್ರೀದೇವಿ ತಳವಾರ, ಉಪಾಧ್ಯಕ್ಷೆ ಅಂಬುಬಾಯಿ, ಶ್ರೀದೇವಿ ಗುತ್ತೇದಾರ, ಖ್ಯಾದಮ್ಮ ಬುರ್ಲಿ, ಲಕ್ಷ್ಮೀಬಾಯಿ ತಳವಾರ, ನೀಲಮ್ಮ, ಜ್ಯೋತಿ, ಲಕ್ಷ್ಮೀ, ಆಶಾ ಗುತ್ತೇದಾರ, ಮೀನಾಕ್ಷಿ, ಶೀಲಾ, ಸಿದ್ದಪ್ಪ ಬುರ್ಲಿ, ಬಸವರಾಜ ಮುಡಬೂಳಕರ್, ಮಂಜುನಾಥ, ಸಾಬಣ್ಣ ಮಾಲಗತ್ತಿ, ವಿಶ್ವನಾಥ, ಮಲ್ಲಯ್ಯಸ್ವಾಮಿ, ಬಸು ಮಾಲಗತ್ತಿ, ಶಾಂತಕುಮಾರ್ ಆಲೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪೂಜಾ ಮುಡಬೂಳ ಸ್ವಾಗತಿಸಿದರು, ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ಶರಣಯ್ಯ ಸ್ವಾಮಿ ನೃತ್ಯ ಎಲ್ಲರಿಗೂ ಆಕರ್ಷಿತವಾಯಿತು.