ಚಿತ್ತಾಪುರ ಮತಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಸಾರ್ವಜನಿಕ ಮಾಹಿತಿಗಾಗಿ ಪ್ರಕಟ: ತಹಸೀಲ್ದಾರ್ ಹಿರೇಮಠ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 40-ಚಿತ್ತಾಪುರ ವಿಧಾನಸಭಾ ಮತಕ್ಷೇತ್ರದ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅರ್ಹತಾ 1 ಜನವರಿ 2025 ಕ್ಕೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿ ಹಾಗೂ ಸೇವಾ ಮತದಾರರ ಅಂತಿಮ ಮತದಾರರ ಪಟ್ಟಿಯನ್ನು ಒಟ್ಟು 257 ಮತದಾನ ಕೇಂದ್ರಗಳಲ್ಲಿ ಹಾಗೂ ಈ ಕಾರ್ಯಾಲಯದ ಸೂಚನಾ ಫಲಕ ಮೇಲೆ ಸೋಮವಾರ ಸಾರ್ವಜನಿಕ ಮಾಹಿತಿಗಾಗಿ ಪ್ರಚೂರ ಪಡಿಸಲಾಗಿದೆ ಎಂದು ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅರ್ಹತಾ1 ಜನವರಿ 2025 ಕ್ಕೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿ (ಫೈನಲ್ ರೋಲ್)- ಪುರುಷ ಮತದಾರರು 124636, ಮಹಿಳಾ ಮತದಾರರು 126213, ತೃತೀಯ ಲಿಂಗಿಗಳು 16 ಒಟ್ಟು 250865 ಮತದಾರರು ಹಾಗೂ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅರ್ಹತಾ 1 ಜನವರಿ 2025 ಕ್ಕೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿ (ಸರ್ವೀಸ್ ವೋಟರ್ಸ್)- ಪುರುಷ ಮತದಾರರು 33, ಮಹಿಳಾ ಮತದಾರರು 1, ತೃತೀಯ ಲಿಂಗಿಗಳು 0 ಸೇರಿದಂತೆ ಒಟ್ಟು 34 ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.