Oplus_0

ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ಯೋಜನೆಗೆ ಚಾಲನೆ

ಚಿತ್ತಾಪುರ ಪಟ್ಟಣದಲ್ಲಿಯೇ ಅತೀ ಹೆಚ್ಚು ಮಕ್ಕಳ ದಾಖಲಾತಿ ಹೊಂದಿದ ಬಸವ ನಗರ ಶಾಲೆ: ಕಾಳಗಿ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪಟ್ಟಣದ ಬಸವ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪಟ್ಟಣದಲ್ಲಿಯೇ ಅತಿ ಹೆಚ್ಚು ಮಕ್ಕಳ ದಾಖಲಾತಿ ಇರುವ ಶಾಲೆ, ಇದಕ್ಕೆ ಇಲ್ಲಿನ ಮುಖ್ಯಗುರುಗಳ ಪಾತ್ರ ಪ್ರಮುಖವಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಲ್ಲಿಕಾರ್ಜುನ ಕಾಳಗಿ ಹೇಳಿದರು.

ಪಟ್ಟಣದ ಬಸವ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮೊಟ್ಟೆ, ಬಾಳೆಹಣ್ಣು ಮತ್ತು ಚಿಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಪ್ರತಿ ನಿತ್ಯ ಮಕ್ಕಳ ದಾಖಲಾತಿ ಮೇಲೆ ನಿಗಾ ಇಡುವ ಮೂಲಕ ಗೈರು ಹಾಜರಾದ ಮಕ್ಕಳ ಮನೆಗೆ ಹೋಗಿ ಮಕ್ಕಳ ಹಾಗೂ ಪಾಲಕರ ಮನವೋಲಿಸುವ ಕೆಲಸ ಮಾಡುವ ಮುಖ್ಯಗುರು ದೇವಪ್ಪ ನಂದೂರಕರ್ ಅವರ ಶಿಕ್ಷಣದ ಅಭಿಮಾನ ಮೆಚ್ಚುವಂಥದ್ದು ಎಂದು ಹೇಳಿದರು.

ಪತ್ರಕರ್ತ ಕಾಶಿನಾಥ ಗುತ್ತೇದಾರ ಮಾತನಾಡಿ, ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಪ್ರಸ್ತುತ ವಾರದ ಆರು ದಿನಗಳಿಗೂ ಮೊಟ್ಟೆ, ಬಾಳೆಹಣ್ಣು ಮತ್ತು ಚಿಕ್ಕಿ ವಿತರಿಸುವ ವಿನೂತನ ಕಾರ್ಯಕ್ರಮ ಜಾರಿಗೊಳಿಸಿದೆ ಆದ್ದರಿಂದ ಮಕ್ಕಳು ಇದರ ಸದುಪಯೋಗ ಪಡಿಸಿಕೊಂಡು ನಿತ್ಯ ಶಾಲೆಗೆ ಬರಬೇಕು ಎಂದು ಹೇಳಿದರು.

ಎಸ್ಡಿಎಂಸಿ ಅಧ್ಯಕ್ಷೆ ಮಂಜುಳಾ ಅಚ್ಚಿಗೇರಿ, ಶಿಕ್ಷಕಿ ಲಲಿತಾದೇವಿ ಸಜ್ಜನಶೆಟ್ಟಿ, ಮಲ್ಲಮ್ಮ ಆರ್.ಪಿ, ಅಡುಗೆ ಸಹಾಯಕರಾದ ಪರವೀನ್ ಸುಲ್ತಾನ್, ರೇಣುಕಾ, ಶಾಂತಮ್ಮ ಸೇರಿದಂತೆ ಶಾಲಾಮಕ್ಕಳು ಇದ್ದರು.

ಮುಖ್ಯಗುರು ದೇವಪ್ಪ ನಂದೂರಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕಿ ಶ್ರೀದೇವಿ ಕೋಬಾಳಕರ್ ನಿರೂಪಿಸಿ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!