Oplus_0

ಚಿತ್ತಾಪುರ ಆರಕ್ಷಕ ವೃತ್ತ ನಿರೀಕ್ಷಕರ ಕಾರ್ಯಾಲಯದ ನಕಲಿ ಪತ್ರದ ತನಿಖೆಗೆ ಆಗ್ರಹ, ಓರಿಯಂಟ್ ಸಿಮೆಂಟ್ ಕಂಪೆನಿಯ ಮುಖ್ಯಸ್ಥ ಸತ್ಯಬ್ರರ್ತ್ ವಿರುದ್ಧ ಹೋರಾಟಕ್ಕೆ ಸಿದ್ಧತೆ: ಅಶ್ವಥ್ ರಾಠೋಡ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಇಟಗಾ ಗ್ರಾಮದ ಹತ್ತಿರ ಇರುವ ಓರಿಯಂಟ್ ಸಿಮೆಂಟ್ ಕಂಪೆನಿಯಿಂದ ನಕಲಿ ಪತ್ರ ಸೃಷ್ಟಿಸಿ, ಕೆಎ32 ಎಬಿ2200 ನಂಬರಿನ ಲಾರಿ ಲೋಡ್ ಮಾಡುವುದನ್ನು ತಡೆಹಿಡಿದು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ ಕಂಪೆನಿಯ ಮುಖ್ಯಸ್ಥ ಸತ್ಯಬ್ರರ್ತ್ ವಿರುದ್ಧ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ, ಯುವ ನ್ಯಾಯವಾದಿ ಅಶ್ವಥ್ ರಾಠೋಡ ತಿಳಿಸಿದ್ದಾರೆ.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರಕ್ಷಕ ವೃತ್ತ ನಿರೀಕ್ಷಕರ ಕಾರ್ಯಾಲಯದಿಂದ ಹೋದ ನಕಲಿ ಪತ್ರವನ್ನು ಎಫ್.ಎಸ್.ಎಲ್ ಗೆ ಕಳುಹಿಸಿ ಸಮಗ್ರ ತನಿಖೆ ನಡೆಸಿದಾಗ ಮಾತ್ರ ಸತ್ಯಾ ಸತ್ಯತೆ ಹೊರಬರಲಿದೆ, ಫೇಕ್ ಲೇಟರ್ ಮಾಡುವುದಕ್ಕೆ ಯಾರ ಕುಮ್ಮಕ್ಕು ಹಾಗೂ ಯಾರ ಪಾತ್ರ ಇದೆ ಎಂಬುದು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಓರಿಯಂಟ್ ಸಿಮೆಂಟ್ ಕಂಪನಿಯಲ್ಲಿ ಉತ್ಪಾದಿಸುವ ಸಿಮೆಂಟನ್ನು ದಿನನಿತ್ಯ ಲಾರಿ ಹಾಗೂ ಬ್ಲಂಕರ್‌ಗಳ ಮುಖಾಂತರ ಸಾಗಾಟ ಮಾಡುತ್ತಿದ್ದು ಇರುತ್ತದೆ. ಲಾರಿ ನಂ ಕೆಎ32 ಎಬಿ2200 ಗೆ ತಮ್ಮ ಕಂಪನಿಯಲ್ಲಿ ಉತ್ಪಾದಿಸುವ ಸಿಮೆಂಟನ್ನು ಅಧಿಕ ಭಾರ ಮತ್ತು ಪರವಾನಿಗೆ ಇಲ್ಲದೆ ಓಡಾಡುತ್ತಿದೆ. ಅಂತಾ ದೂರುಗಳು ಬರುತ್ತಿದ್ದು, ಆದ್ದರಿಂದ ತಮ್ಮ ಕಂಪನಿಯಲ್ಲಿ ಸದರಿ ಲಾರಿಯನ್ನು ಲೊಡಿಂಗ್ ಮಾಡುವುದನ್ನು ತಡೆಯಬೇಕು ಎಂದು ಆರಕ್ಷಕ ವೃತ್ತ ನಿರೀಕ್ಷಕರ ಕಾರ್ಯಾಲಯದಿಂದ 1 ಅಕ್ಟೋಬರ್ 2024 ರಂದು ಓರಿಯಂಟ್ ಸಿಮೆಂಟ್ ಕಂಪೆನಿಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ ಈ ಕುರಿತು ಆರಕ್ಷಕ ವೃತ್ತ ನಿರೀಕ್ಷಕರ ಕಾರ್ಯಾಲಯಕ್ಕೆ ಮಾಹಿತಿ ಹಕ್ಕು ಕಾಯ್ದೆ ಪ್ರಕಾರ 6 ನವೆಂಬರ್ 2024 ರಂದು ಅರ್ಜಿ ಸಲ್ಲಿಸಿದಾಗ ನಮಗೆ 25 ನವೆಂಬರ್ 2024 ರಂದು ಸದರಿ ಅರ್ಜಿ ಈ ಕಚೇರಿಯಿಂದ ಹೋದ ಬಗ್ಗೆ ನಮೂದು ಇರುವುದಿಲ್ಲ ಎಂದು ಉತ್ತರ ನೀಡಿದ್ದಾರೆ ಹಾಗೂ ಸದರಿ ಲಾರಿ ಲೋಡ್ ಮಾಡುವುದನ್ನು ಬ್ಲಾಕ್ ಮಾಡುವಂತೆ ಹಾಗೂ ವಾಹನವನ್ನು ಲೋಡ್ ಮಾಡುವುದನ್ನು ತಡೆಹಿಡಿಯುವಂತೆ ಚಿತ್ತಾಪುರ ಪೊಲೀಸ್ ಠಾಣೆಯಿಂದ ಯಾವುದೇ ರೀತಿಯ ಪತ್ರ ವ್ಯವಹಾರ ಮಾಡಿರುವುದಿಲ್ಲ ಎಂದು ಅರಕ್ಷಕ ಉಪ ನಿರೀಕ್ಷಕರು ಕೂಡ 5 ನವೆಂಬರ್ 2024 ರಂದು ಹಿಂಬರಹ ನೀಡಿದ್ದಾರೆ.

ಹೀಗಿರುವಾಗ ಕಂಪೆನಿಗೆ ನಕಲಿ ಪತ್ರ ಯಾರು ಕಳುಹಿಸಿದ್ದಾರೆ ಎಂಬುದು ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಚಿತ್ತಾಪುರದಲ್ಲಿ ಅನೇಕ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಅದನ್ನು ತಡೆಯುವುದನ್ನು ಬಿಟ್ಟು ನಕಲಿ ಪತ್ರ ನೀಡಿ ನಮಗೆ ವಿನಾಕಾರಣ ತೊಂದರೆ ನೀಡಿದ್ದಾರೆ ಇದರಿಂದ ನಮಗೆ ಸಾಕಷ್ಟು ನಷ್ಟ ಉಂಟಾಗಿದೆ ಎಂದು ಹೇಳಿದರು. ಈ ವಿಷಯ ನಮ್ಮ ಪಕ್ಷದ ನಾಯಕರ ಗಮನಕ್ಕೆ ತಂದು ಬರುವ ಒಂದು ವಾರದಲ್ಲಿ ಕಂಪೆನಿ ವಿರುದ್ಧ ಬಹುದೊಡ್ಡ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!