ಚಿತ್ತಾಪುರ ಪತ್ರಕರ್ತನ ಮಗಳು ಸಹನಾ ಬಳ್ಳಾ ಶೇ.97.76 ಅಂಕ ಪಡೆದು ಶಾಲೆಗೆ ಟಾಪರ್, ವಿದ್ಯಾನಿಕೇತನ ಪ್ರೌಢ ಶಾಲೆಗೆ ದಾಖಲೆಯ ಫಲಿತಾಂಶ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕು ಸಂಧ್ಯಾಕಾಲ ಪತ್ರಿಕೆಯ ವರದಿಗಾರ ಚಂದ್ರಶೇಖರ ಬಳ್ಳಾ ಮಗಳು ಸಹನಾ ಬಳ್ಳಾ ಈಚೇಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 611 (ಶೇ.97.76) ಅಂಕ ಪಡೆಯುವ ಮೂಲಕ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.
2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ ಒಟ್ಟು 54 ವಿದ್ಯಾರ್ಥಿಗಳ ಪೈಕಿ 53 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 20 ವಿದ್ಯಾರ್ಥಿಗಳು ಶೇ.90 ಪ್ರತಿಶತಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ, 9 ವಿದ್ಯಾರ್ಥಿಗಳು ಶೇ.85 ಪ್ರತಿಶತಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ, 19 ವಿದ್ಯಾರ್ಥಿಗಳು ಶೇ.60 ಪ್ರತಿಶತಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ, 5 ವಿದ್ಯಾರ್ಥಿಗಳು ಶೇ.50 ಪ್ರತಿಶತಕ್ಕಿಂತ ಹೆಚ್ಚು ಅಂಕ ಪಡೆಯುವ ಮೂಲಕ ದಾಖಲೆಯ ಫಲಿತಾಂಶ ಪಡೆದು ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಹೊರಚೆಲ್ಲಿದೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯಗುರು ಹಾಗೂ ಶಿಕ್ಷಕ ವೃಂದ ಮತ್ತು ಆಡಳಿತ ಮಂಡಳಿಯ ಸರ್ವ ಸದಸ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳು ಸಲ್ಲಿಸಿದ್ದಾರೆ.