Oplus_131072

ಚಿತ್ತಾಪುರ ಪಟ್ಟಣದ ಅಭಿವೃದ್ಧಿ ಕುಂಠಿತ ಬಿಜೆಪಿ ಆರೋಪ, ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಜ್ಜನಶೆಟ್ಟಿ ಆಗ್ರಹ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪಟ್ಟಣದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತಂದಿದ್ದಾರೆ ಆದರೆ ಅಭಿವೃದ್ಧಿ ಮಾತ್ರ ಕುಂಠಿತಗೊಂಡಿದೆ, ಕೆಲ ಕಾಮಗಾರಿಳು ಪೂರ್ಣಗೊಂಡಿವೆ ಆದರೆ ಉದ್ಘಾಟನೆ ಆಗಿಲ್ಲ ಇನ್ನೂ ಕೆಲ ಕಾಮಗಾರಿಗಳು ನೆನೆಗುದಿಯಲ್ಲಿವೆ ಪ್ರಗತಿಯಲ್ಲಿದ್ದ ಕಾಮಗಾರಿಗಳು ಕಳಪೆ ಮಟ್ಟದಲ್ಲಿ ನಡೆಯುತ್ತಿವೆ ಹಾಗೂ ಯಾತ್ರಿಕ ನಿವಾಸ, ವಿವಿಧ ಭವನಗಳು ಸೇರಿದಂತೆ ಎಲ್ಲ ಕಾಮಗಾರಿಗಳು ಅಪೂರ್ಣವಾಗಿವೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಆರೋಪಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪಟ್ಟಣದ ನಾಗಾವಿ ಹೊರವಲಯದಲ್ಲಿ ನಿರ್ಮಾಣವಾದ 1000 ಮನೆಗಳು 2016-17ನೇ ಸಾಲಿನಲ್ಲಿ ಹಂಚಿಕೆ ಕಾರ್ಯ ಮತ್ತು ಫಲಾನುಭವಿಗಳಿಂದ ಹಣ ಸಂದಾಯ (ಡಿ.ಡಿ) ಮೂಲಕ ಮಾಡಿಕೊಂಡಿರುತ್ತಾರೆ. ಇದಕ್ಕೆ ಸಂಬಂಧಿಸಿದ್ದಂತೆ ಶಾಸಕರು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಸಂದರ್ಭಗಳಲ್ಲಿ ಉದ್ಘಾಟನೆ ಮಾಡಿರುತ್ತಾರೆ. ಆದರೆ ವರ್ಷಗಳೇ ಕಳೆದರೂ ಸದರಿ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಿ ಹಕ್ಕು ಪತ್ರ ನೀಡಿರುವುದಿಲ್ಲ. ಈಗಾಗಲೇ ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಕಿಟಕಿ ಬಾಗಿಲು ಮುರಿದಿವೆ, ಕೂಡಲೇ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.

2015-16ನೇ ಸಾಲಿನಲ್ಲಿ ವಾಜಪೇಯ ನಗರ ನಿವೇಶನ ಯೋಜನೆ ಅಡಿಯಲ್ಲಿ ಚಿತ್ತಾಪುರ ಪಟ್ಟಣದ ಸರ್ವೇ ನಂ.241 ನಾಗಾವಿ ಹತ್ತಿರ ಹಂಚಿಕೆ ಮಾಡಿದ ನಿವೇಶನ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ ಬೇಕಾದ ಯಾವುದೇ ಮೂಲಭೂತ ಸೌಕಾರ್ಯಗಳಾದ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ರಸ್ತೆ, ಸಾಮೂಹಿಕ ಶೌಚಾಲಯಗಳು ಇತರೆ ಯಾವುದೇ ಸೌಲಭ್ಯಗಳು ಇಲ್ಲಿಯವರೆಗೆ ಒದಗಿಸಿರುವುದಿಲ್ಲ ಎಂದು ಹೇಳಿದರು.

ಪಟ್ಟಣದಲ್ಲಿ ಸುಮಾರು 6-8 ವರ್ಷಗಳ ಹಿಂದೆ ನಿರ್ಮಾಣವಾದ ಐ.ಡಿ.ಎಸ್.ಎಂ.ಟಿ ಯೋಜನೆಯಡಿ ಚಿತ್ತಾವಲಿ ವೃತ್ತ ಹತ್ತಿರ, ಭುವನೇಶ್ವರಿ ವೃತ್ತ ಇತರೇ ಕಡೆಗಳಲ್ಲಿ ವ್ಯಾಣಿಜ್ಯ ಮಳಿಗೆಗಳನ್ನು ಮತ್ತು 2-3 ವರ್ಷಗಳ ಹಿಂದೆ ಸರಕಾರಿ ಪದವಿ ಪೂರ್ವ ಕಾಲೇಜು ಎದುರಗಡೆ 14ನೇ ಹಣಕಾಸು ಯೋಜನೆ ಅಡಿಯಲ್ಲಿ ನಿರ್ಮಿಸಿದ ಸಾರ್ವಜನಿಕ ಶೌಚಾಲಯ, ಭುವೇಶ್ವರಿ ವೃತ್ತ ಹತ್ತಿರ ನಿರ್ಮಾಣವಾದ ತರಕಾರಿ ಮಾರುಕಟ್ಟೆ ಮಳಿಗೆಗಳು ಮತ್ತು ಕೆನಾರ ಬ್ಯಾಂಕ್ ಎದುರಗಡೆ ನಿರ್ಮಿಸಿದ ವ್ಯಾಣಿಜ್ಯ ಮಳಿಗೆ ಹಾಗೂ ಗೋಶಾಲೆ ಎದುರಿನ ಕನ್ನಡ ಭವನ ಸೇರಿದಂತೆ ಅನೇಕ ಕಟ್ಟಡಗಳು ನಿರ್ಮಾಣವಾಗಿ ವರ್ಷಗಳೇ ಕಳೆದರೂ ಅವುಗಳ ಉದ್ಘಾಟನೆ ಮತ್ತು ಸಾರ್ವಜನಿಕರಿಗೆ ಉಪಯೋಗ ಆಗಿಲ್ಲ ಇದಕ್ಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷವೇ ಕಾರಣ ಎಂದರು.

2023-24ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ದಿ ಮಂಡಳಿಯ ಮೈಕ್ರೋ ಯೋಜನೆ ಅಡಿಯಲ್ಲಿ ಲ್ಯಾಂಡ್ ಆರ್ಮಿ ವತಿಯಿಂದ ಚಿತ್ತಾಪುರ ಪಟ್ಟಣದ ಶಿವರಾಯಗೌಡ ಮನೆಯಿಂದ (ವ್ಹಾಯಾ ಅಂಬೇಡ್ಕರ್ ವೃತ್ತ ಮತ್ತು ಭುವನೇಶ್ವರಿ ವೃತ್ತ) ಜನತಾ ವೃತ್ತದವರೆಗೆ ಎಸ್.ಸಿ.ಪಿ.ಅನುದಾನದಲ್ಲಿ ನಡೆಯುತ್ತಿರುವ ಸಿ.ಸಿ.ರಸ್ತೆ ಕಾಮಗಾರಿ ಯಾವುದೇ ನೆಲ ಅಗೆತ, ನೀರು ಸಿಂಪಡಣೆ, ರೋಲಾರ ಮಾಡುವುದು ಇತರೇ ಯಾವುದೇ ನಿಯಮಗಳನ್ನು ಪಾಲಿಸದೇ ಸಂಪೂರ್ಣವಾಗಿ ಕಳಪೆ ಮಟ್ಟದಿಂದ ನಡೆಯುತ್ತಿದೆ.

ಸದರಿ ರಸ್ತೆಯು ಎಸ್.ಸಿ.ಪಿ.ಅನುದಾನದಲ್ಲಿ ನಡೆಯುತ್ತಿದ್ದು ನಿಯಮದ ಪಕ್ರಾರ ಇದು ಪರಿಶಿಷ್ಟ ಜಾತಿಯ ಜನಾಂಗ ಇರುವ ಪ್ರದೇಶದಲ್ಲಿ ನಡೆಯಬೇಕು ಆದರೆ ಇದು ಸಾಮಾನ್ಯ ಜನ ಇರುವ ಮತ್ತು ವಾಣಿಜ್ಯ ಮಳಿಗೆಗಳು ಮಧ್ಯ ಮಾಂಸಾದ ಅಂಗಡಿಗಳು ಹಾಗೂ ತರಕಾರಿ ಮಾರುಕಟ್ಟೆ ಹೀಗೆ ಹಲವು ವಾಣಿಜ್ಯ ಸಂಬಂಧಿತ ಪ್ರದೇಶದಲ್ಲಿ ಕಾಮಗಾರಿಯು ನಡೆಯುತ್ತಿದ್ದು ಈ ಕುರಿತು ಸದರಿ ಪ್ರದೇಶದಲ್ಲಿ 190 ರಿಂದ 200 ವರೆಗೆ ಪರಿಶಿಷ್ಟ ಜಾತಿಯ ಮನೆಗಳು ಇರುತ್ತವೆ ಎಂದು ಸುಳ್ಳು ವರದಿಯನ್ನು ಸಂಬಂಧಪಟ್ಟ ಇಲಾಖೆಗೆ ನೀಡಿರುವ ಅಧಿಕಾರಿಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ತುಂಬಾ ಆಗಿದೆ ಈಗಾಗಲೇ ದನ ಕರುಗಳು, ಕುರಿಗಳನ್ನು ಬೇಟೆ ಯಾಡಿ ತಿನ್ನುತ್ತಿವೆ ಅವುಗಳಿಂದ ಚಿಕ್ಕ ಮಕ್ಕಳ ಮೇಲೆ ದಾಳಿ ಮಾಡುವ ಸಂಭವವಿರುತ್ತದೆ ಕೂಡಲೇ ಪುರಸಭೆ ಅಧಿಕಾರಿಗಳು ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಸಜ್ಜನಶೆಟ್ಟಿ ಆಗ್ರಹಿಸಿದರು. ಕಾಂಗ್ರೆಸ್ ನವರ ಒಳ ಜಗಳದಿಂದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನೆನೆಗುದಿಗೆ ಬಿದ್ದು ಈಗ ಕೋರ್ಟ್ ನಿಂದು ಚುನಾವಣೆ ನಡೆಸಲು ಆದೇಶ ಬಂದಿದೆ, ಬೇಗ ಚುನಾವಣೆ ಮಾಡಿ ಅಭಿವೃದ್ಧಿ ಕೆಲಸಗಳು ನಡೆಯಲಿ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್, ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಮಂಡಲ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾಲಗತ್ತಿ, ಪುರಸಭೆ ಸದಸ್ಯರಾದ ನಾಗರಾಜ ಭಂಕಲಗಿ, ರಮೇಶ್ ಬೊಮ್ಮನಳ್ಳಿ, ಶಾಮಣ್ಣ ಮೇಧಾ, ಮಾಜಿ ಸದಸ್ಯ ಸುರೇಶ್ ಬೆನಕನಳ್ಳಿ, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ದೀಪಕ್ ಹೊಸ್ಸುರಕರ್, ನ್ಯಾಯವಾದಿ ಅಶ್ವಥ್ ರಾಠೋಡ, ವಕ್ತಾರ ಶಿವರಾಮ್ ಚವ್ಹಾಣ, ಅಂಬರೀಷ್ ರಂಗನೂರ್ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!