Oplus_131072

ಚಿತ್ತಾಪುರ ಲಾಡ್ಜಿಂಗ್ ಕ್ರಾಸ್, ಪ್ರಮುಖ ರಸ್ತೆಗಳಲ್ಲಿ ಧೂಳಿನ ಸಮಸ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಆಗ್ರಹ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ ಪಟ್ಟಣದ ಲಾಡ್ಜಿಂಗ್ ಕ್ರಾಸ್ ಹತ್ತಿರ ನಿತ್ಯವು  ಫ್ಯಾಕ್ಟರಿಗೆ ಹೋಗುವ ಸರಣಿ ಲಾರಿ-ಟ್ರಕ್ ಗಳ ಹಾವಳಿಯಿಂದಾಗಿ ಧೂಳು ತುಂಬಿದ ವಾತಾವರಣ ನಿರ್ಮಾಣವಾಗಿದೆ ಹೀಗಾಗಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕೂಡಲೇ ಧೂಳಿನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ವಿಭಾಗೀಯ ಸಂಚಾಲಕ ನಾಗೇಶ ಹಲಿಗಿ ಆಗ್ರಹಿಸಿದ್ದಾರೆ.

ಭಾರಿ ಧೂಳಿನ ಕಾರಣದಿಂದಾಗಿ ಸಾರ್ವಜನಿಕರು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಆದರೆ ಪಟ್ಟಣದ ಮುಖ್ಯ ವೃತ್ತ ಮಾರ್ಗವಾಗಿರುವುದರಿಂದ ಅನಿವಾರ್ಯವಾಗಿ ಜನರು ಉಸಿರನ್ನು ಬಿಗಿ ಹಿಡಿದು ಹೋಗುವಂತಾಗಿದೆ.

ಧೂಳಿನ ಕಣವನ್ನು ನಿಯಂತ್ರಿಸುವ ಪ್ರಯತ್ನವಾಗಿ ನೀರು ಸಿಂಪಡಣೆ ಮತ್ತಿತರ ಕಾರ್ಯಗಳನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲಿ, ಫ್ಯಾಕ್ಟರಿಯ ಅಧಿಕಾರಿಗಳಾಗಲಿ ಮಾಡುತ್ತಿಲ್ಲ. ಇದರಿಂದ ಸಾರ್ವಜನಿಕರು ಯಾರಿಗೆ ಹೇಳೋದು ತಮ್ಮ ಗೋಳು ಎಂದು ನಿತ್ಯವೂ ಶಾಪ ಹಾಕಿಕೊಂಡು ಹೋಗುತ್ತಿದ್ದಾರೆ.

ಕೆಲವೆ ದಿನಗಳಲ್ಲಿ ಇದಕ್ಕೆ ಸಂಬಂಧಪಟ್ಟ ಇಲಾಖಾಧಿಕಾರಿಗಳಾಗಲಿ ಫ್ಯಾಕ್ಟರಿಯ ಅಧಿಕಾರಿಗಳಾಗಲಿ ಧೂಳಿನ ಸಮಸ್ಯೆ ಕುರಿತು ಪರಿಹಾರ ಕಾರ್ಯಗಳನ್ನು ಮಾಡದೆ ಹೋದರೆ ಲಾಡ್ಜಿಂಗ್ ಕ್ರಾಸ್ ಬಳಿ ಲಾರಿ ಟ್ರಕ್ ಗಳನ್ನು ತಡೆ ಹಿಡಿದು ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!