Oplus_0

ಚಿತ್ತಾಪುರ ಪಟ್ಟಣದಲ್ಲಿ ನಡೆಯುತ್ತಿರುವ ಕಳಪೆ ಮಟ್ಟದ ರಸ್ತೆ ಕಾಮಗಾರಿಯನ್ನು ತಡೆಹಿಡಿಯಲು ಪುರಸಭೆ ಸದಸ್ಯರ ಆಗ್ರಹ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪಟ್ಟಣದಲ್ಲಿ ಲ್ಯಾಂಡ್ ಆರ್ಮಿ ಇಲಾಖೆ ವತಿಯಿಂದ ನಡೆಯುತ್ತಿರುವ ಕಳಪೆ ಮಟ್ಟದ ರಸ್ತೆ ಕಾಮಗಾರಿಯನ್ನು ಕೂಡಲೇ ತಡೆಹಿಡಿಯಬೇಕು ಎಂದು ಆಗ್ರಹಿಸಿ ಪುರಸಭೆ ಸದಸ್ಯರಾದ ರಮೇಶ ಬೊಮ್ಮನಳ್ಳಿ, ಪ್ರಭು ಗಂಗಾಣಿ, ಶಾಮಣ್ಣ ಮೇಧಾ, ಸುಶೀಲಾಬಾಯಿ ದೇವಸುಂದ ಹೊಸ್ಸುರಕರ್ ಅವರು ಕೆ.ಆ‌ರ್.ಐ.ಡಿ.ಎಲ್ ಉಪ ನಿದೇರ್ಶಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಪಟ್ಟಣದಲ್ಲಿ ರಾಯಪ್ಪ ಚಾಳಿ ಯಿಂದ ಭುವನೇಶ್ವರಿ ವೃತ್ತದವರೆಗೆ ಲ್ಯಾಂಡ ಆರ್ಮಿ ಇಲಾಖೆ ವತಿಯಿಂದ ಸಿ.ಸಿ.ರಸ್ತೆ ಕಾಮಗಾರಿಯು ನಡೆಯುತ್ತಿದೆ. ಇದು ಈಗಾಗಲೇ ರಾಯಪ್ಪ ಚಾಳಿಯಿಂದ ಅಂಬೇಡ್ಕರ ವೃತ್ತದ ವರೆಗೆ ತಲುಪಿದ್ದು ಈ ಕಾಮಗಾರಿಯು ಸಂಪುರ್ಣ ಕಳಪೆ ಮಟ್ಟದಿಂದ ಕೂಡಿರುತ್ತದೆ. ಕಾಂಕ್ರೀಟಿನಲ್ಲಿ ಸಿಮೇಂಟನ್ನು ನಿಗದಿಪಡಿಸಿದಕ್ಕಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಅಂದಾಜು ಪ್ರತಿಯಲ್ಲಿ ನಿಗದಿಪಡಿಸಿದ ಅಗಲಕ್ಕಿಂತ ಹೆಚ್ಚು ಅಗಲವಾಗಿ ನಿರ್ಮಿಸುತ್ತಿರುವ ರಸ್ತೆಗೆ ಭೂ ಅಗೆತ, ನೀರು ಸಿಂಪಡಣೆ, ರೂಲರ್ ತಿರುಗಿಸುವುದು ಯಾವುದನ್ನು ಮಾಡದೇ ನೇರವಾಗಿ ನೆಲದಮೇಲೆ ಸಿ.ಸಿ.ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಇದರಿಂದ ರಸ್ತೆ ನಿರ್ಮಾಣವಾಗಿ ಕೆಲವೇ ದಿನಗಳಲ್ಲಿ ಹಾಳಾಗಿ ಹೋಗಿ ಸರ್ಕಾರದ ಹಣ ಪೋಲು ಮಾಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ಸದರಿ ಕಾಮಗಾರಿ ವೀಕ್ಷಣೆಗಾಗಿ ಯಾವುದೇ ಸಂಬಂಧಪಟ್ಟ ಅಭಿಯಂತರರು ಮತ್ತು ಅಧಿಕಾರಿಗಳು ಸ್ಥಳದಲ್ಲಿ ಇರದೇ ಹೋಗಿದ್ದರಿಂದ ಕಾಮಗಾರಿಯು ಸಂಪೂರ್ಣ ಕಳಪೆಯಾಗಿ ನಡೆಯುತ್ತಿದೆ. ಆದ್ದರಿಂದ ಸದರಿ ನಿರ್ಮಿಸಿದ ರಸ್ತೆಯನ್ನು ಪರಿಶೀಲಿಸಿ ಅದನ್ನು ಕಿತ್ತು ಹಾಕಿ ಮತ್ತೊಮ್ಮೆ ಉತ್ತಮ ಗುಣಮಟ್ಟದಲ್ಲಿ ರಸ್ತೆ ನಿರ್ಮಿಸಬೇಕು ಮತ್ತು ಈಗ ನಡೆಯುವ ಮುಂದಿನ ಕಾಮಗಾರಿಯನ್ನು ತಕ್ಷಣದಿಂದಲೇ ತಡೆಹಿಡಿದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

“ಚಿತ್ತಾಪುರ ಪಟ್ಟಣದಲ್ಲಿ ಕಳಪೆ ಮಟ್ಟದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದರೂ ಪುರಸಭೆಯ ಅಧಿಕಾರಿಗಳು ಕಂಡು ಕಾಣದಂತೆ ಇರುವುದು ದುರಂತ, ಕೂಡಲೇ ಮೇಲಾಧಿಕಾರಿಗಳು ರಸ್ತೆ ಕಾಮಗಾರಿ ತಡೆಹಿಡಿಯಬೇಕು”.-ಶಾಮಣ್ಣ ಮೇಧಾ ಪುರಸಭೆ ಸದಸ್ಯರು.

Spread the love

Leave a Reply

Your email address will not be published. Required fields are marked *

error: Content is protected !!