Oplus_0

ಚಿತ್ತಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ, 6 ಕ್ಷೇತ್ರಗಳಿಗೆ ಅವಿರೋಧ ಆಯ್ಕೆ 6 ಕ್ಷೇತ್ರಗಳಿಗೆ ಚುನಾವಣೆ ಭರ್ಜರಿ ಗೆಲುವು, ಮುಖಂಡರಿಂದ ವಿಜಯೋತ್ಸವ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಸೋಮವಾರ ನಡೆದ ಚಿತ್ತಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಸದಸ್ಯರ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಒಟ್ಟು 12 ಸ್ಥಾನಗಳ ಪೈಕಿ 6 ಕ್ಷೇತ್ರಗಳ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರೆ ಇನ್ನುಳಿದ 6 ಕ್ಷೇತ್ರಗಳ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ದತ್ತಾತ್ರೇಯ ಮುದುಕಣ್ಣ ತಿಳಿಸಿದ್ದಾರೆ.

ಅವಿರೋಧವಾಗಿ ಆಯ್ಕೆಯಾದವರು: ಸುಮೀತ್ರಾಬಾಯಿ ಶರಣಪ್ಪ ಅಲ್ಲೂರಕರ್, ಶರಣಮ್ಮ ನರಸಪ್ಪ ಹೋಳಿಕಟ್ಟಿ (ಸಾಮಾನ್ಯ ಮಹಿಳೆ), ಸುವನರೆಡ್ಡಿ ಪೋತರೆಡ್ಡಿ (ಬಿಸಿಬಿ), ಶ್ರೀಶೈಲ್ ನಾಗಣ್ಣ ಸಾತನೂರು (ಎಸ್.ಟಿ), ಅರ್ಜುನ್ ಮಹಾದೇವಪ್ಪ ಸಾಲಹಳ್ಳಿ (ಬಿಸಿಎ), ನಾಗರಾಜ ರೇಷ್ಮಿ (ಸಾಲಗಾರ ಅಲ್ಲದ ಕ್ಷೇತ್ರ).

ಚುನಾವಣೆಯಲ್ಲಿ ಗೆಲುವು ಸಾಧಿಸಿದವರು: ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿರುವ ಮಲ್ಲರೆಡ್ಡಿ ಶಿವಶರಣಪ್ಪ ಗೋಪಸೇನ್ 313, ವಿಶ್ವರಾಜ ಹೊನ್ನಪ್ಪ 332, ಸಿದ್ದಣ್ಣ ಶಿವಶರಣಪ್ಪ 302, ಸಿದ್ರಾಮ ಬಸವರಾಜ ರೇಷ್ಮಿ 355, ಸೋಮಶೇಖರ ಶರಣಪ್ಪ 329 ಮತಗಳು ಪಡೆಯುವ ಮೂಲಕ ಇಡೀ ಪೇನಲ್ ಗೆಲುವು ಸಾಧಿಸಿದ್ದರೆ ಪ.ಜಾ ಕ್ಷೇತ್ರದಿಂದ ಅಶ್ವಥ್ ತುಕಾರಾಮ ರಾಠೋಡ 287 ಮತಗಳು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ.

ವಿಜಯೋತ್ಸವ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಬೆಂಬಲಿಗರು, ಮುಖಂಡರು ಗುಲಾಲ್ ಎರಚಿ, ಪಟಾಕಿ ಸಿಡಿಸಿ ಸಿಹಿ ಹಂಚಿಕೊಳ್ಳುವ ಮೂಲಕ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ರವೀಂದ್ರ ಸಜ್ಜನಶೆಟ್ಟಿ, ಶಿವರುದ್ರಪ್ಪ ಭೀಣ್ಣಿ, ನಾಗರಾಜ ಭಂಕಲಗಿ, ಆನಂದ ಪಾಟೀಲ ನರಿಬೋಳ, ಶ್ರೀನಿವಾಸರೆಡ್ಡಿ ಪಾಲಪ್, ಶಾಮ್ ಮುಕ್ತೇದಾರ, ಚಂದ್ರಶೇಖರ ಸಾತನೂರು, ಅಶೋಕ ನಿಪ್ಪಾಣಿ, ಚಂದ್ರಶೇಖರ ಉಟಗೂರ ಸುರೇಶ್ ಬೆನಕನಳ್ಳಿ, ಶರಣಪ್ಪ ನಾಟೀಕಾರ, ನಾಗರೆಡ್ಡಿ ಗೋಪಸೇನ್, ಮಲ್ಲಿಕಾರ್ಜುನ ಎಮ್ಮೆನೋರ್, ನಾಗರಾಜ ಹೂಗಾರ, ದೀಪಕ್ ಹೊಸ್ಸುರಕರ್, ರವೀಂದ್ರ ರೆಡ್ಡಿ ಭಂಕಲಗಿ, ಬಸವರಾಜ ಹೂಗಾರ, ರಾಮಲಿಂಗ ಬಾನರ್, ಭೀಮರಾಯ ಹೊತಿನಮಡಿ, ಭೀಮಾಶಂಕರ ಹೋಳಿಕಟ್ಟಿ, ಬಸ್ಸಯ್ಯ ಸ್ವಾಮಿ ಸಾತನೂರು, ಶ್ರೀಕಾಂತ್ ಸುಲೇಗಾಂವ್, ನಿಂಬಣ್ಣ ಪಾಟೀಲ, ಎಂ.ಡಿ.ಯುನುಸ್, ಸಂಜು ರಾಠೋಡ, ಸಂಜು ಕಾಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿಶೇಷವೆಂದರೆ ಈ ಚುನಾವಣೆಯಲ್ಲಿ ಯಾವುದೇ ರಾಜಕೀಯ ಮಾಡದೇ ಇರುವುದು ಕಂಡುಬಂದಿದ್ದು ಇದೊಂದು ಪಕ್ಷರಹಿತ ಚುನಾವಣೆ ಎನ್ನಬಹುದು. ಕಾಂಗ್ರೆಸ್ ಮಾತು ಬಿಜೆಪಿ ಮುಖಂಡರು ಸೇರಿ ಸಂಭ್ರಮಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!