ಚಿತ್ತಾಪುರದಲ್ಲಿ ಪಿಯು ವಿದ್ಯಾರ್ಥಿಗಳಿಗಾಗಿ ನಾಟಕ ಪ್ರದರ್ಶನ
ನಾಟಕಗಳ ಸದುಪಯೋಗ ಪಡೆದುಕೊಳ್ಳಲು ಕರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಪಠ್ಯ ಪುಸ್ತಕದಲ್ಲಿನ ಪಿಯು ಪ್ರಥಮ ವರ್ಷದ ಬೆಪ್ಪತಕ್ಕಡಿ ಬೋಳೇಶಂಕರ ಹಾಗೂ ದ್ವಿತೀಯ ವರ್ಷದ ಕೃಷ್ಣೇಗೌಡನ ಆನೆ ವಿಷಯ ಕುರಿತು ಎರಡು ನಾಟಕಗಳ ಪ್ರದರ್ಶನ ಆಯೋಜಿಸಲಾಗಿದ್ದು ಇದರ ಲಾಭ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಹೇಳಿದರು.
ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕಾಲೇಜು ರಂಗಪಯಣ ಕಲಬುರ್ಗಿ ಹಾಗೂ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕ ಚಿತ್ತಾಪುರ ಇವರ ಸಹಯೋಗದಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ಬೆಪ್ಪತಕ್ಕಡಿ ಬೋಳೇಶಂಕರ ಮತ್ತು ಕೃಷ್ಣೇಗೌಡನ ಆನೆ ನಾಟಕ ಪ್ರದರ್ಶನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಇದ್ದಾಗ ಮಾತ್ರ ವಿಷಯ ಗ್ರಹಿಕೆ ಆಗಲು ಸಾಧ್ಯ ಈ ನಿಟ್ಟಿನಲ್ಲಿ ನಾಟಕದ ಪ್ರತಿಯೊಂದು ಸನ್ನಿವೇಶ ಹಾಗೂ ಸಾಂದರ್ಭಿಕ ವಿಷಯಗಳ ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಡಾ.ಸಂದೀಪ್ ಬಿ.ಮಾಳಗಿ ಮಾತನಾಡಿ, ಪಿಯು ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಉದ್ದೇಶದಿಂದ ನಾಟಕಗಳು ಆಯೋಜಿಸಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಜಿಲ್ಲಾಧ್ಯಕ್ಷ ರಾಜಕುಮಾರ್ ಗಟ್ಟು, ಪತ್ರಕರ್ತ ಕಾಶಿನಾಥ ಗುತ್ತೇದಾರ, ಉಪನ್ಯಾಸಕರಾದ ಶ್ಯಾಮ ಭಟ್, ಶರಣಬಸಪ್ಪ ಹಾಶೆಟ್ಟಿ, ಖಾಜಾ ಪಟೇಲ್, ತಮ್ಮಣ್ಣ ಟಿ.ಎಚ್, ಮಲ್ಲಿಕಾರ್ಜುನ ಮದನಕರ್, ಮೋಯಿನ್ ಸಾತನೂರು, ಬಸವರಾಜ, ಶಿವಕುಮಾರ, ಜ್ಯೋತಿ ಪಟ್ಟೇದಾರ ಸೇರಿದಂತೆ ವಿವಿಧ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದ್ದರು. ಬಸವರಾಜ ಎಸ್.ಹೊಟ್ಟಿ ಸ್ವಾಗತಿಸಿದರು, ತಾಲೂಕು ಅಧ್ಯಕ್ಷ ಚನ್ನವೀರ ಕಣಗಿ ದಿಗ್ಗಾಂವ ನಿರೂಪಿಸಿದರು.