Oplus_0

ಚಿತ್ತಾಪುರ ಪುರಸಭೆ ಸಾಮಾನ್ಯ ಸಭೆ, ಸದಸ್ಯರಿಗೆ ಮಾಹಿತಿ ನೀಡದೇ ವಾರ್ಡ್ ಗೆ ಬರುವಂತಿಲ್ಲ ಅಧ್ಯಕ್ಷರ ವಿರುದ್ಧವೇ ಸ್ವಪಕ್ಷದ ಸದಸ್ಯರ ಆಕ್ರೋಶ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಸದಸ್ಯರಿಗೆ ಮಾಹಿತಿ ನೀಡದೇ ವಾರ್ಡ್ ಗೆ ಬರುವಂತಿಲ್ಲ ಎಂದು ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್ ವಿರುದ್ಧ ಸ್ವಪಕ್ಷದ ಸದಸ್ಯರೇ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಮಂಗಳವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಮಹಿಳಾ ಮೀಸಲಾತಿಯಡಿ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದೀರಿ, ಹೀಗಾಗಿ ತಾವುಗಳೇ ಅಧಿಕಾರ ಚಲಾಯಿಸಬೇಕು. ಬೇರೆಯವರಿಗೆ ಅಧಿಕಾರ ಚಲಾಯಿಸಲು ಬಿಡಬಾರದು. ವಾರ್ಡ್ ಗಳ ಸದಸ್ಯರಿಗೆ ಮಾಹಿತಿ ಇಲ್ಲದೇ ವಾರ್ಡ್’ಗಳಿಗೆ ಭೇಟಿ ನೀಡುತ್ತಿದ್ದೀರಿ ಇದು ಎಷ್ಟರ ಮಟ್ಟಿಗೆ ಸರೀ? ಈ ರೀತಿಯ ಸರ್ವಾಧಿಕಾರಿ ಧೋರಣೆ ಅನುಸರಿಸುವುದು ಸರೀಯಲ್ಲ ಎಂದು ಸದಸ್ಯರಾದ ಶೀಲಾ ಕಾಶಿ, ಚಂದ್ರಶೇಖರ ಕಾಶಿ, ಮಹ್ಮದ್ ರಸೂಲ್ ಮುಸ್ತಫಾ, ಮಲ್ಲಿಕಾರ್ಜುನ ಕಾಳಗಿ, ಪಾಶಾ ಖುರೇಶಿ ಹೇಳಿದಾಗ, ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್ ಮಾತನಾಡಿ, ಸದಸ್ಯರ ಗಮನಕ್ಕೆ ಯಾಕೆ ತರಬೇಕು, ನಾನು ಅಧ್ಯಕ್ಷೆ ಇದ್ದೀನಿ ನನಗೆ ಭೇಟಿ ಕೊಡುವ ಹಕ್ಕಿದೆ ಎಂದು ಹೇಳಿದ ಕೂಡಲೇ 23 ವಾರ್ಡ್’ಗಳ ಸದಸ್ಯರ ಗಮನಕ್ಕೆ ತರದೇ ನೀವು ಒಬ್ಬರೇ ಭೇಟಿ ಕೊಡುವುದಾರೇ ಸದಸ್ಯರು ರಾಜೀನಾಮೆ ನೀಡಿ ಮನೆಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ನೀಡುತ್ತಿರುವ ಕಳಪೆ ಆಹಾರದಿಂದಲೇ ಬಾಣಂತಿಯರು ಸಾಯುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಚಂದ್ರಶೇಖರ ಕಾಶಿ ಗಂಭೀರ ಆರೋಪ ಮಾಡಿದಾಗ, ಸಿಡಿಪಿಓ ಆರತಿ ತುಪ್ಪದ್ ಮಾತನಾಡಿ, ನಾವು ಪ್ರತಿಯೊಂದು ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಆಹಾರವೇ ಪೊರೈಕೆ ಮಾಡುತ್ತಿದ್ದೇವೆ. ನಾವು ನೀಡುತ್ತೀರುವ ಆಹಾರದಿಂದಲೇ ಬಾಣಂತಿಯರು ಸಾಯುತ್ತಿದ್ದಾರೆ ಎಂದು ಹೇಳಬೇಡಿ ಎಂದು ಪ್ರತ್ಯುತ್ತರ ನೀಡಿದರು.

ಸದಸ್ಯರಾದ ಶೀಲಾ ಕಾಶಿ, ಚಂದ್ರಶೇಖರ ಕಾಶಿ, ಪಾಶಾ ಖುರೇಶಿ ಮಾತನಾಡಿ, ಮಹಿಳಾ ದಿನಾಚರಣೆಯ ಅರ್ಥ ಏನು? ನೀವು ಕೂಡ ಮಹಿಳೆ ಇದ್ದೀರಿ. ಮಹಿಳಾ ದಿನಾಚರಣೆ ದಿನದಂದು ಮಹಿಳೆಯರಿಗೆ ಗೌರವ ಕೊಡುವುದು ನಿಮ್ಮ ಕರ್ತವ್ಯ ಎಂದಾಗ ಸಿಡಿಪಿಓ ಮಾತನಾಡಿ, ನನ್ನ ಕಡೆಯಿಂದ ತಪ್ಪಾಗಿದೆ, ಕ್ಷಮಿಸಿ ಮುಂದೇ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಸದಸ್ಯ ನಾಗರಾಜ ಭಂಕಲಗಿ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಪೊರೈಕೆ ಮಾಡುವ ಮೊಟ್ಟೆಗಳು, ಪೂರಕ ಪೌಷ್ಠಿಕ ಆಹಾರ ಪದಾರ್ಥಗಳು ದನ ಕೂಡ ತಿನ್ನಲ್ಲ. ಅಂತಹ ಕಳಪೆ ಆಹಾರ ಪದಾರ್ಥಗಳನ್ನು ವಿತರಿಸುತ್ತಿದ್ದೀರಿ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಏನೇನು ಕೊಡುತ್ತಿದ್ದೀರಿ ಎನ್ನುವುದು ವಾರ್ಡಗಳ ಸದಸ್ಯರಿಗೆ ಮಾಹಿತಿಯೇ ಇಲ್ಲ ಎಂದಾಗ, ಸಿಡಿಪಿಓ ಮಾತನಾಡಿ, ಪ್ರತಿಯೊಬ್ಬ ಅಂಗನವಾಡಿ ಶಿಕ್ಷಕಿಯರಿಗೆ ಸದಸ್ಯರಿಗೆ ಮಾಹಿತಿ ನೀಡಲು ಆದೇಶ ಮಾಡುತ್ತೇನೆ ಎಂದರು.

ಸದಸ್ಯರಾದ ನಾಗರಾಜ ಭಂಕಲಗಿ, ಶೀಲಾ ಕಾಶಿ, ಮಲ್ಲಿಕಾರ್ಜುನ ಕಾಳಗಿ, ರಮೇಶ ಬೊಮ್ಮನಳ್ಳಿ ಅವರು ಮಾತನಾಡಿ, ಲ್ಯಾಂಡ್ ಆರ್ಮಿ ಅವರು ಕಟ್ಟಿರುವ ಯಾತ್ರಿಕ ನಿವಾಸದಲ್ಲಿ ಯಾರು ಬೇಕು ಅವರು ಬರ್ತಾರೇ, ದೇವರು ಮಾಡಿ ಹೋಗುತ್ತಿದ್ದಾರೆ. ಅದು ಯಾತ್ರಿಕ ನಿವಾಸವೇ ಅನ್ನಿಸುತ್ತಿಲ್ಲ. ಅಲ್ಲಿ ಯಾವುದೇ ಮೂಲ ಸೌಕರ್ಯಗಳೇ ಇಲ್ಲ. ಲ್ಯಾಂಡ್ ಆರ್ಮಿಯಿಂದ ನಡೆಯುತ್ತಿರುವ ಪ್ರತಿಯೊಂದು ಕಾಮಗಾರಿಗಳು ಸಂಪೂರ್ಣ ಕಳಪೆ ಮಟ್ಟದಿಂದ ನಡೆಯುತ್ತಿವೆ‌. ಏನಾದರು ಮಾಹಿತಿ ಕೇಳಲು ದೂರವಾಣಿ ಕರೆ ಮಾಡಿದರೇ ಕರೆಗಳು ಸ್ವೀಕರಿಸಲ್ಲ. ಒಂದು ವೇಳೆ ಕರೆ ಸ್ವೀಕರಿಸಿದರ ಉಡಾಫೇ ಉತ್ತರ ನೀಡುತ್ತಾರೆ. ಅವರಿಗೆ ಹೀಗೆ ಬಿಟ್ಟರೇ ಊರೇ ಕೊಳ್ಳೆ ಹೊಡೆದು ಹೋಗುತ್ತಾರೆ. ಹೀಗಾಗಿ ಲ್ಯಾಂಡ್ ಆರ್ಮಿಗೆ ಕೆಲಸ ಕೊಡಬಾರದು ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆಯಿರಿ ಎಂದರು. ಸದಸ್ಯ ರಮೇಶ್ ಬೊಮ್ಮನಳ್ಳಿ ಮಾತನಾಡಿ ಪಟ್ಟಣದಲ್ಲಿ ರೈತರು ಹಾಗೂ ಕೂಲಿಕಾರ್ಮಿಕರು ಹೆಚ್ಚಿದ್ದಾರೆ ಹೀಗಾಗಿ ತೆರಿಗೆ ಹೆಚ್ಚಿಸಬೇಡಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಕಲ್ಲಕ್, ಉಪಾಧ್ಯಕ್ಷೆ ಆತೀಯಾ ಬೇಗಂ, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಸದಸ್ಯರಾದ ಮಲ್ಲಿಕಾರ್ಜುನ ಕಾಳಗಿ, ಚಂದ್ರಶೇಖರ ಕಾಶಿ, ಪಾಶಾಮಿಯ್ಯಾ ಖುರೇಶಿ, ಶೀಲಾ ಕಾಶಿ, ನಾಗರಾಜ ಭಂಕಲಗಿ, ರಮೇಶ ಬಮ್ಮನಳ್ಳಿ, ಮಹ್ಮದ್ ರಸೂಲ್ ಮುಸ್ತಫಾ, ಶೃತಿ ಪೂಜಾರಿ, ವಿನೋದ ಗುತ್ತೇದಾರ, ಜಗದೀಶ ಚವ್ಹಾಣ, ಶ್ರೀನಿವಾಸ್ ರೆಡ್ಡಿ ಪಾಲಪ್ ಶಿವರಾಜ ಪಾಳೇದ್, ಸಂತೋಷ ಚೌದರಿ, ಪ್ರಭು ಗಂಗಾಣಿ, ಶ್ಯಾಮ್ ಮೇಧಾ, ಬೇಬಿಬಾಯಿ ಸುಭಾಷ್, ಕಾಶಿಬಾಯಿ ಬೆಣ್ಣೂರಕರ್, ಶಹನಾಜ್ ಬೇಗಂ, ಸುಶೀಲಾ ದೇವಸುಂದರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಪುರಸಭೆ ಕಚೇರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!