Oplus_0

ಚಿತ್ತಾಪುರ ಅಧಿಕಾರಿಗಳ, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಪಟ್ಟಣದ ರಸ್ತೆ ಕಾಮಗಾರಿ ಕಳಪೆ: ಚಂದರ್ ಚವ್ಹಾಣ ಆರೋಪ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪಟ್ಟಣದಲ್ಲಿ ಹಲವು ವರ್ಷಗಳ ಬಳಿಕ ಕಂಡ ಡಾಂಬರಿಕರಣ ರಸ್ತೆ, ಆದರೆ ಈ ರಸ್ತೆ ಯಾವ ಹಂತದಲ್ಲಿ ನಡಿತಾಯಿದೆ ಅಂದರೆ ಇಲ್ಲಿ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಜೇಬು ತುಂಬುವಂತಹ ಕೇಲಸ ನಡಿತಾಯಿದೆ ಎಂದು ಕರವೇ (ನಾರಾಯಣಗೌಡ ಬಣ) ತಾಲೂಕು ಅಧ್ಯಕ್ಷ ಚಂದರ್ ಚವ್ಹಾಣ ಆರೋಪಿಸಿದ್ದಾರೆ.

80 ಲಕ್ಷದ ಕಾಮಗಾರಿ 8 ತಿಂಗಳಲ್ಲೆ ಅಳಸಿಹೋಗುವಂತ (ಕಿತ್ತುಹೋಗುವಂತಹ) ಕಳಪೆ ರೀತಿಯಲ್ಲಿ ನಡಿತಾಯಿದೆ. ಚಿತ್ತಾಪುರ ಪಟ್ಟಣದ ರೈಲ್ವೆ ನಿಲ್ದಾಣದಿಂದ ನಾಗಾವಿ ಚೌಕ ವರಗೆ ಪ್ರಗತಿಯಲ್ಲಿರುವ ರಸ್ತೆ ಕಾಮಗಾರಿ ತರಾತುರಿಯಲ್ಲಿ ಕೆಲಸ ಮುಗಿಸುವ ಭರದಲ್ಲಿ ರಾತ್ರಿ 7.40 ರ ವರೆಗೆ ಕತ್ತಲಿನಲ್ಲಿ ಡಾಂಬರಿಕರಣ ಮಾಡುತ್ತಿರುವುದು ಕಳಪೆ ಕಾಮಗಾರಿಗೆ ಅವಕಾಶ ನೀಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ಇಲ್ಲಿಯ ಅಧಿಕಾರಿಗಳು ತಮ್ಮ ಮನ ಬಂದಂತೆ ರಸ್ತೆ ಕಾಮಗಾರಿ ಮಾಡುತ್ತಿದ್ದಾರೆ ಹೀಗಾಗಿ ಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಕಡೆ ಗಮನ ಹರಿಸಬೇಕು ಹಾಗೂ ಈ ರಸ್ತೆ ಕಾಮಗಾರಿ ತಡೆಹಿಡಿದು ಪರೀಶಿಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೋಳ್ಳಬೇಕು ಇಲ್ಲವಾದರೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!