ಚಿತ್ತಾಪುರ ಸರ್ಕಾರಿ ಶಾಲೆಗಳಿಗೆ ಆಹಾರ ಧಾನ್ಯ ಸರಬರಾಜು ಮಾಡುವ ಗುತ್ತಿಗೆದಾರ ವಿರುದ್ಧ ಕ್ರಮಕ್ಕೆ ಕರವೇ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳಿಗೆ ಆಹಾರ ಧಾನ್ಯಗಳು ಸರಬುರಾಜು ಮಾಡುತ್ತಿರುವ ಗುತ್ತಿಗೆದಾರರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಗುತ್ತಿಗೆ ಪರವಾನಿಗೆ ರದ್ದು ಮಾಡಬೇಕು ಎಂದು ಆಗ್ರಹಿಸಿ ಕರವೇ ನಾರಾಯಣ ಗೌಡ ಬಣ ತಾಲೂಕು ಅಧ್ಯಕ್ಷ ಚಂದರ್ ಚವ್ಹಾಣ ಆಗ್ರಹಿಸಿದ್ದಾರೆ.
ಈ ಕುರಿತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದ ಅವರು, ಚಿತ್ತಾಪುರ ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳಿಗೆ ಆಹಾರ ದಾನ್ಯಗಳು ಸರಬುರಾಜು ಮಾಡುತ್ತಿರುವ ಗುತ್ತಿಗೆದಾರರು ಪ್ರತಿ ತಿಂಗಳು ಸರಬರಾಜು ಮಾಡುತ್ತಿರುವ ಧವಸ ದಾನ್ಯಗಳು ಗೋದಾಮಿನಿಂದ ತರುವ ಮುಂಚೆ ಪ್ರತಿಯೊಂದು ಚೀಲದಿಂದ 10 ರಿಂದ 15 ಕೆ.ಜಿ. ತೆಗೆದು ಇಟ್ಟುಕೊಳ್ಳುತ್ತಾರೆ. ಗೋಧಿ, ಹಾಲಿನ ಪೌಡರ, ಇನ್ನಿತರ ದವಸ ದಾನ್ಯಗಳು ಕಳ್ಳ ಸಂತೆಯಲ್ಲಿ ಮಾರಾಟ ಮಾಡಿಕೊಳ್ಳುತ್ತಾರೆ. ಇದರಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಮತ್ತು ಗೋದಾಮ ವ್ಯವಸ್ಥಾಪಕರು ಕೂಡ ಶ್ಯಾಮಿಲು ಆಗಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕೂಡಲೇ ಸರಕಾರಿ ಶಾಲೆಗಳಿಗೆ ಆಹಾರ ದಾನ್ಯಗಳು ಸರಬುರಾಜು ಮಾಡುತ್ತಿರುವ ಗುತ್ತಿಗೆದಾರರ, ಸಹಾಯಕ ನಿರ್ದೇಶಕರ ಹಾಗೂ ಗೋದಾಮ ವ್ಯವಸ್ಥಾಪಕರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಗುತ್ತಿಗೆ ಪರವಾನಿಗೆ ರದ್ದು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ನಿರ್ಲಕ್ಷ ತೋರಿದಲ್ಲಿ ಮುಂಬರುವ ದಿನಗಳಲ್ಲಿ ಕರ್ನಾಟಕ ರಕ್ಷಣ ವೇದಿಕೆ ಚಿತ್ತಾಪುರ ತಾಲೂಕು ಘಟಕದಿಂದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಮಹಿಳಾ ಘಟಕದ ಅಧ್ಯಕ್ಷೆ ಈಶ್ವರಮ್ಮ ಯಾದವ್, ಮುಖಂಡರಾದ ಶೇರ್ ಅಲಿ, ಗಣೇಶ ರಾಠೋಡ, ರಾಹುಲ್ ಶಾಸ್ತ್ರಿ, ನಂದಾ ನಾಯಕ, ಅರ್ಜುನ್ ಕಟ್ಟಿಮನಿ, ಮಾನಪ್ಪ ಹಾದಿಮನಿ, ಅಪ್ಸರ್ ಸೇಟ್ ನಾಲವಾರ, ಅರುಣ್ ಸಿಂಧೆ ಇಂಗಳಗಿ, ದೇವಪ್ಪ ಮಾರ್ನಳ್ಳಿ, ಪ್ರೇಮ್ ಜೋಶಿ, ಮಜೀದ್ ಅಡ್ಡಾವಾಲೆ, ಭರತ್ ಭಂಗಿ ಭಾಗೋಡಿ, ಪ್ರಿಯಾಂಕಾ ದಿಗ್ಗಾಂವ ಸೇರಿದಂತೆ ಇತರರು ಇದ್ದರು.