ಚಿತ್ತಾಪುರ ಸರ್ವರ್ ಸಮಸ್ಯೆಯಿಂದ ಜಾತಿ ಗಣತಿಗೆ ತೊಡಕು, ನಿಗಧಿತ ಅವಧಿಯೊಳಗೆ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳುವುದು ಅನುಮಾನ.. ?
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನಿವೃತ್ತ ನ್ಯಾಯಮೂರ್ತಿ ಡಾ.ಎಚ್.ಎನ್.ನಾಗಮೋಹನದಾಸ್ ಏಕಸದಸ್ಯ ಆಯೋಗವು ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ನಡೆಸುತ್ತಿದ್ದು ತಾಲೂಕಿನಲ್ಲಿ ಮೇ.5 ರಿಂದಲೇ ಆರಂಭ ಗೊಂಡಿದ್ದು. ಸಮೀಕ್ಷೆಯ ಸರ್ವರ್ ಸಮಸ್ಯೆಯಿಂದ ಗಣತಿಗೆ ತೊಡಕಾಗಿದೆ.
ಇದು ಗಣತಿದಾರರಿಗೆ ಹಾಗೂ ಮಾಹಿತಿ ನೀಡುವವರಿಗೆ ಕಿರಿಕಿರಿಯನ್ನುಂಟು ಮಾಡಿರುವುದು ಒಂದೆಡೆ ಆದರೆ, ಇನ್ನೊಂದೆಡೆ ನಿಗಧಿತ ಅವಧಿಯೊಳಗೆ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳುವುದು ಅನುಮಾನ ಮೂಡಿದೆ.
ಪಟ್ಟಣದ 72 ನೇ ಬೂತ್ ನಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಸಮೀಕ್ಷೆ ಆರಂಭಿಸಿದ್ದು, 1 ಕುಟುಂಬದ ನೋಂದಣಿ ಮಾತ್ರ ಆಗಿದೆ. ನಂತರ ಕಾಡಿದ ಸರ್ವರ್ ಸಮಸ್ಯೆಯಿಂದ ಮಧ್ಯಾಹ್ನ 2 ಗಂಟೆವರೆಗೂ ನೋಂದಣಿ ಮಾಡಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಮನೆ ಮನೆಗೆ ತೆರಳಿದ ಸಮೀಕ್ಷಾದಾರರು ನೋಂದಣಿ ಪ್ರಕ್ರಿಯೆ ಮಾಡಿದರೂ ಸರ್ವರ್ ಸಿಗದ ಕಾರಣ ಅಪ್ಲೌಡ್ ಆಗದೆ ಪರದಾಡುವ ಪರಿಸ್ಥಿತಿ ಕಂಡು ಬಂದಿದೆ.
ಪರಿಶಿಷ್ಟ ಜಾತಿಯಲ್ಲಿನ ಜಾತಿಗಳ ಜಾತಿಗಣತಿಯ ವೇಳೆ ಎಲ್ಲ ಕಡೆ ಸರ್ವರ್ ಡೌನ್ ಹೆಸರಿನಲ್ಲಿ ಗಣತಿಯೇ ಕುಂಟಿತಗೊಳ್ಳುತ್ತಿದೆ, 100ರಷ್ಟು ಸಮೀಕ್ಷೆಗೆ ತೊಡಕಾಗಬಹುದು ತುರ್ತಾಗಿ ಸಮಸ್ಯೆ ಬಗೆಹರಿಸಿ ಇಲ್ಲವಾದಲ್ಲಿ ಕಾಲಾವಧಿ ವಿಸ್ತರಿಸಬೇಕು ಎಂಬುದು ಗಣತಿದಾರರ ಆಗ್ರಹವಾಗಿದೆ.
ತಾಲೂಕಿನಲ್ಲಿ ಸರ್ವರ್ ಸಮಸ್ಯೆಯಿಂದ ನಿತ್ಯ ಶೇ.100 ಪ್ರತಿಶತ ನೋಂದಣಿ ಆಗುತ್ತಿಲ್ಲ, ಶೇ.70 ರಿಂದ ಶೇ.80 ಪ್ರತಿಶತ ನೋಂದಣಿ ಆಗುತ್ತಿದೆ. ನೋಂದಣಿ ಕಾರ್ಯ ಮೂರು ಹಂತಗಳಲ್ಲಿ ನಡೆಯಲಿದೆ ಮೇ 5 ರಿಂದ 17ರ ವರೆಗೆ ಮೊದಲ ಹಂತದಲ್ಲಿ ಸಮೀಕ್ಷೆದಾರರು ಮನೆ ಮನೆ ಭೇಟಿ ಮೂಲಕ ಸಮೀಕ್ಷೆ ಮಾಡಿ, ಮಾಹಿತಿ ದಾಖಲಿಸಲಿದ್ದಾರೆ, ಮೇ 19 ರಿಂದ 21ರ ವರೆಗೆ 2ನೇ ಹಂತದಲ್ಲಿ ಸಮೀಕ್ಷೆಯಲ್ಲಿ ಉಳಿದವರಿಗಾಗಿ ಮತಗಟ್ಟೆ ಮಟ್ಟದಲ್ಲಿ ಸಮೀಕ್ಷೆದಾರರು ವಿಶೇಷ ಶಿಬಿರ ಆಯೋಜಿಸಿ ಮಾಹಿತಿ ಸಂಗ್ರಹಿಸಿ, ದಾಖಲಿಸುತ್ತಾರೆ. 3ನೇ ಹಂತದಲ್ಲಿ ಮೇ 19 ರಿಂದ 23ರ ವರೆಗೆ ಸಮೀಕ್ಷೆಯಲ್ಲಿ ಹಾಜರಾಗದ, ಬಿಟ್ಟು ಹೋದ ಪರಿಶಿಷ್ಟ ಜಾತಿಯ ಜನರು ಸ್ವತಃ ತಾವೇ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಸಮಾಜ ಕಲ್ಯಾಣಾಧಿಕಾರಿ ಚೇತನ್ ಗುರಿಕಾರ ತಿಳಿಸಿದ್ದಾರೆ.
“ಸರ್ವರ್ ಸಮಸ್ಯೆಯಿಂದ ನೋಂದಣಿಗೆ ತೊಡಕಾಗಿರುವ ಮಾಹಿತಿ ತಿಳಿದುಬಂದಿದೆ, ಇದು ಸ್ಥಳೀಯ ಸಮಸ್ಯೆ ಅಲ್ಲ ರಾಜ್ಯ ಮಟ್ಟದ ಸಮಸ್ಯೆ ಇದೆ ಇನ್ನು ಎರಡು ದಿನದಲ್ಲಿ ಸರಿಯಾಗಬಹುದು”.- ಚೇತನ್ ಗುರಿಕಾರ ಸಮಾಜ ಕಲ್ಯಾಣಾಧಿಕಾರಿ ಚಿತ್ತಾಪುರ.