Oplus_131072

ಚಿತ್ತಾಪುರದಲ್ಲಿ ಶರಣಬಸವೇಶ್ವರ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟನೆ, ಜೀವನದಲ್ಲಿ ಸಾಮರಸ್ಯ ಮೂಡಿಸಲು ಎಲ್ಲರೂ ಒಂದಾಗಿರಬೇಕು: ಡಾ.ಲಿಂಗರಾಜಪ್ಪ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪ್ರಸ್ತುತ ಕಾಲದಲ್ಲಿ ಕುಟುಂಬ ವ್ಯವಸ್ಥೆ ನಶಿಸಿ ಹೋಗುತ್ತಿದೆ. ಕುಟುಂಬ ವ್ಯವಸ್ಥೆ ಎನ್ನುವುದು ಬಹಳ ಸೂಕ್ಷ್ಮವಾಗಿದ್ದು ಜೀವನದಲ್ಲಿ ಸಾಮರಸ್ಯ ಮೂಡಿಸಲು ಎಲ್ಲರೂ ಒಂದಾಗಿರಬೇಕು ಎಂದು ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಅಧ್ಯಕ್ಷ ಡಾ.ಲಿಂಗರಾಜಪ್ಪ ಅಪ್ಪ ಕಲಬುರಗಿ ಹೇಳಿದರು.

ಪಟ್ಟಣದ ವರುಣ ನಗರದ ದೇವಸ್ಥಾನದ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಚಿತ್ತಾಪುರ ಹಾಗೂ ಶ್ರೀ ಶರಣಬಸವೇಶ್ವರ ದೇವಸ್ಥಾನ ಜೀರ್ಣೋದ್ದಾರ ಹಾಗೂ ಸೇವಾ ಟ್ರಸ್ಟ್ ಇವರ ಸಹಯೋಗದೊಂದಿಗೆ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ದೇವಸ್ಥಾನ ಅಭಿವೃದ್ಧಿಯ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಡಾಬಾ ಹೊಟೇಲ್ ನಲ್ಲಿ ಊಟ ಮಾಡುತ್ತಿರುವುದರಿಂದ ಪ್ರೀತಿ ವಿಶ್ವಾಸ ಕಡಿಮೆ ಆಗುತ್ತಿದೆ ಹೀಗಾಗಿ ಮನೆಯಲ್ಲಿ ಕುಟುಂಬದವರ ಸಮೇತ ಎಲ್ಲರೂ ಸೇರಿ ಊಟ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಆಹಾರ, ಆರೋಗ್ಯ ಮತ್ತು ಜ್ಞಾನ ಈ ಮೂರು ವ್ಯಾಪಾರ ಅಲ್ಲ ಇವು ಸೇವೆಗಳಾಗಿವೆ. ಒಳ್ಳೆಯ ಆಹಾರ ಸೇವನೆ ಮಾಡಿದಾಗ ಒಳ್ಳೆಯ ಆರೋಗ್ಯ ನಿರ್ಮಾಣವಾಗಲಿದೆ, ಜನನ ಮರಣ ನಮ್ಮ ಕೈಯಲ್ಲಿ ಇಲ್ಲ ಆದರೆ ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳವುದು ನಮ್ಮ ಕೈಯಲ್ಲಿದೆ ಎಂದು ಹೇಳಿದರು.

ಗ್ರಾಮ ಬೆಳೆಯಬೇಕಾದರೆ, ಒಳ್ಳೆಯ ಗ್ರಾಮ ಆಗಬೇಕಾದರೆ ಪೊಲೀಸ್, ಆಸ್ಪತ್ರೆ ಮತ್ತು ಕೋರ್ಟ್ ಕಚೇರಿ ಇರಬಾರದು ಎಂದು ಹೇಳಿದ ಅವರು, ಅಹಂ ಭಾವನೆ ಬಂದಾಗ ಇವು ಸಾಲು ಸಾಲಾಗಿ ಬರುತ್ತವೆ ಎಂದರು.

ಪ್ರತಿಯೊಂದು ಜೀವರಾಶಿಗೆ ಒಳ್ಳೆಯದಾಗಬೇಕು ಎಂಬುದು ನಮ್ಮ ಉದ್ದೇಶ ಈ ನಿಟ್ಟಿನಲ್ಲಿ ಕಡಿದು ತಿನ್ನುವ ಪ್ರವೃತ್ತಿ ತಡೆಹಿಡಿಯುವ ಪ್ರಯತ್ನ ನಡೆಯುತ್ತಿದೆ ಇದರಿಂದ ದೂರ ಇರಿ ಎಂದು ಮನವಿ ಮಾಡಿದರು. ಎಲ್ಲ ಪ್ರಾಣಿಗಳಿಗೆ ಬದುಕುವ ಹಕ್ಕು ಇದೆ ಹೀಗಾಗಿ ಪ್ರಾಣಿ ಕೊಂದು ಹೊಟ್ಟೆ ತುಂಬಿಸಿಕೊಳ್ಳುವ ಪ್ರವೃತ್ತಿ ಸರಿಯಲ್ಲ ಎಂದು ಹೇಳಿದರು.

ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಪುರಾಣ ಆಲಿಸುವುದರಿಂದ ಪುಣ್ಯ ಪ್ರಾಪ್ತಿ ಹಾಗೂ ಪ್ರವಚನ ಆಲಿಸುವುದರಿಂದ ಜೀವನದಲ್ಲಿ ಪರಿವರ್ತನೆ ಆಗಲಿದೆ ಈ ನಿಟ್ಟಿನಲ್ಲಿ ಮನದ ಮೈಲಿಗೆ ಸ್ವಚ್ಛತೆ ಆಗಬೇಕಾದರೆ ಪ್ರವಚನ ಆಲಿಸಬೇಕು, ಪ್ರವಚನಕ್ಕೆ ಪರಿವರ್ತನೆ ಮಾಡುವ ದೊಡ್ಡ ಶಕ್ತಿ ಇದೆ ಎಂದು ಹೇಳಿದರು.

ದಿಗ್ಗಾಂವ ಶ್ರೀ ಸಿದ್ದವೀರ ಶಿವಾಚಾರ್ಯರು, ಮಾಲಗತ್ತಿ ಶ್ರೀ ಚನ್ನಬಸವ ಶರಣರು, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಗೌರವಾಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ್ ದೇಶಮುಖ, ಮುಖಂಡರಾದ ಚಂದ್ರಶೇಖರ ಸಜ್ಜನಶೆಟ್ಟಿ, ರಮೇಶ್ ಮರಗೋಳ, ಚಂದ್ರಶೇಖರ ಅವಂಟಿ, ಶಿವಲಿಂಗಪ್ಪ ವಾಡೇದ್, ಶಾಂತಣ್ಣ ಚಾಳೀಕಾರ, ಆನಂದ ಪಾಟೀಲ ನರಿಬೋಳ, ಚಂದ್ರಶೇಖರ ಬಳ್ಳಾ, ಬಸವರಾಜ ಪಾಟೀಲ ಭಾಗೋಡಿ, ಪ್ರಸಾದ್ ಅವಂಟಿ, ಬಸವರಾಜ ಕಿರಣಗಿ ವಾಡಿ, ವೆಂಕಟಮ್ಮ ಪಾಲಪ್, ರವೀಂದ್ರ ಸಜ್ಜನಶೆಟ್ಟಿ, ಮಲ್ಲರೆಡ್ಡಿ ಗೋಪಸೇನ್, ನಿರ್ಮಲಾ ಭಂಗಿ, ಕೋಟೇಶ್ವರ ರೇಷ್ಮಿ, ಲಕ್ಷ್ಮೀಬಾಯಿ ಮಟ್ಟಿ, ಬಸವರಾಜ ಕಾಳಗಿ, ಪ್ರಕಾಶ್ ಹಂಚನಾಳ, ವಿಶ್ವಾರಾಧ್ಯ ನೆನಕ್ಕಿ, ರೇವಣಸಿದ್ದಪ್ಪ ರೋಣದ್, ಶಿವುಕುಮಾರ ಪೂಜಾರಿ, ಬಸವರಾಜ ಸಂಕನೂರ, ಮಂಜುಳಾ ಹೂಗಾರ, ರೇಣುಕಾ ಝಳಕಿ, ಅಂಬರೀಷ್ ಸುಲೇಗಾಂವ, ಸಂತೋಷ ಹಾವೇರಿ, ಮಹಾದೇವ ಅಂಗಡಿ, ಮಹೇಶ್ ಬಟಗೀರಿ, ಸಿದ್ದು ರೇಷ್ಮಿ, ರಮೇಶ್ ಕಾಳನೂರ, ಶಾಂತಕುಮಾರ್ ಹತ್ತಿ, ಎಸ್.ಎನ್.ಪಾಟೀಲ, ನಾಗರಾಜ ಕಡಬೂರ, ಬಸವರಾಜ ಹೂಗಾರ, ಮಂಜು ಶಾಸ್ತ್ರಿ ಸೇರಿದಂತೆ ಇತರರು ಇದ್ದರು.

ವೀರುಪಾಕ್ಷಯ್ಯ ಶಾಸ್ತ್ರೀಗಳು ಪ್ರವಚನ ನೀಡಿದರು, ಪ್ರಾಣೇಶ್ ಶಹಾಪೂರ ತಬಲಾ ಸಾಥ್ ನೀಡಿದರು, ಪ್ರತಿಕಾ ಪಾರಂಪಳ್ಳಿ ಭರತ್ ನಾಟ್ಯ ಮಾಡಿದರು, ಮಹೇಶ ನರಬೋಳಿ ಪ್ರಾರ್ಥಿಸಿದರು, ವಿರೇಶ್ ಕರದಾಳ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಮುಖಂಡರು ಪತ್ರಕರ್ತ ದಿ.ನಾಗಯ್ಯ ಸ್ವಾಮಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!