ಚಿತ್ತಾಪುರ ಸ್ಟೇಷನ್ ತಾಂಡಾದ 10 ನೇ ನಾಯಕರಾಗಿ ಆಯ್ಕೆಯಾದ ವೆಂಕಟೇಶ್ ಕನ್ನು ಅವರಿಗೆ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾದ 10 ನೇ ನಾಯಕರಾಗಿ ನೇಮಕಗೊಂಡಿರುವ ವೆಂಕಟೇಶ ಕನ್ನು ನಾಯಕ ರವರಿಗೆ ತುಕಾರಾಮ ಖೀರು ನಾಯಕ ರಾಠೋಡ ತಾಂಡಾ ವತಿಯಿಂದ ಹಾಗೂ ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಸಂತ ಸೇವಾಲಾಲ ಮಹಾರಾಜ ಮರಿಯಮ್ಮ ದೇವಿ ದೇವಸ್ಥಾನ ಟ್ರಸ್ಟ ಸಮಿತಿಯ ಅಧ್ಯಕ್ಷರು ಹಾಗೂ ನಾಗಾವಿ ಭಜನ ಮಂಡಳಿ ಅಧ್ಯಕ್ಷರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ಅನಿಲ ಶಂಕರ ಚವ್ಹಾಣ, ಟ್ರಸ್ಟ್ ಅಧ್ಯಕ್ಷ ನಾಗರಾಜ ಖುಬ್ಬು ರಾಠೋಡ, ನಾಗಾವಿ ಭಜನಾ ಮಂಡಳಿ ಅಧ್ಯಕ್ಷ ರಮೇಶ ನಾಗು ರಾಠೋಡ, ತಾಂಡಾದ ಡಾವ ಚಂದ್ರಾಮ ಶಂಕರ ಚವ್ಹಾಣ ಕಾರಭಾರಿ, ಕಿಶನ ರಾಠೋಡ, ಟ್ರಸ್ಟ ಗೌರವ ಅಧ್ಯಕ್ಷ ಸುರೇಶ ರೂಪಲಾ, ಶಿವಾ ಠಾಕ್ರು ರಾಠೋಡ, ವಿಠಲ ತುಳಜಾರಾಮ ರಾಠೋಡ, ದೇವಸ್ಥಾನ ಪೂಜಾರಿ ಅಶೋಕ ಗೋವಿಂದ ರಾಠೋಡ, ಯುವ ವಕೀಲ ಅಶ್ವಥ ರಾಠೋಡ ಸಾಗರ ಚವ್ಹಾಣ, ಜೈರಾಮ ರಾಠೋಡ, ಶಿವರಾಮ ಚವ್ಹಾಣ, ಮೋತಿಲಾಲ ರಾಠೋಡ, ಸಂತೋಷ ಚವ್ಹಾಣ ಹಾಗೂ ತಾಂಡಾದ ಹಲವಾರು ಮುಖಂಡರು ಉಪಸ್ಥಿತರಿದ್ದರು.