ಚಿತ್ತಾಪುರ: ಸೂರ್ಯಕಾಂತ ಬಟಗೀರಿ ನಿಧನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಸ್ಟೇಷನ್ ರಸ್ತೆಯ ನಿವಾಸಿ ಸೂರ್ಯಕಾಂತ ಸಿ. ಬಟಗೀರಿ (38) ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದು ತಾಯಿ ಮೂರು ಜನ ಸಹೋದರರು ಇಬ್ಬರು ಸಹೋದರಿಯರು ಮಡದಿ ಮತ್ತು ಇಬ್ಬರು ಮಕ್ಕಳನ್ನು ಸೇರಿದಂತೆ ಬಂಧುಬಳಗದವರನ್ನು ಅಗಲಿದ್ದಾರೆ.
ಮೃತರ ಅಂತಿಮ ಸಂಸ್ಕಾರ ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆಯ ಎದುರುಗಡೆ ಇರುವ ಸ್ವಂತ ಹೊಲದಲ್ಲಿ ನಾಳೆ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.