ಚಿತ್ತಾಪುರ ತಹಸೀಲ್ ಕಚೇರಿಯಲ್ಲಿ ಕಾಟಾಚಾರಕ್ಕೆ ನಡೆದ ವಿಶ್ವ ಮಾನವ ದಿನಾಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಹಸೀಲ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ನಿಮಿತ್ತ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಶಿರಸ್ತೇದಾರ ಸುನಿಲ್ ಯನಗುಂಟಿಕರ್ ಪೂಜೆ ಮಾಡಿ ಗೌರವ ನಮನಗಳು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ವಿಠ್ಠಲ್ ದ್ವಿದಸ, ರಮೇಶ್ ಜಗಲಿ ಸರ್ವೇಯರ್, ಪ್ರಶಾಂತ, ಶ್ರೀಕಾಂತ, ಪರಶುರಾಮ ಸೇರಿದಂತೆ ಇತರರು ಇದ್ದರು.
ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಹಾಗೂ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಯಾವುದೇ ಇಲಾಖೆಯ ಅಧಿಕಾರಿಗಳು ಭಾಗವಹಿಸದೇ ಅಸಡ್ಡೆ ಮನೋಭಾವನೆ ಪ್ರದರ್ಶಿಸಿದ್ದಾರೆ ಅಲ್ಲದೇ ಬೇಜವಾಬ್ದಾರಿ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ತಹಸೀಲ್ ಕಚೇರಿಯ ಬೆರಳೆಣಿಕೆಯಷ್ಟು ಸಿಬ್ಬಂದಿಗಳು ಸೇರಿ ಕಾಟಾಚಾರಕ್ಕೆ ಎಂಬಂತೆ ವಿಶ್ವ ಮಾನವ ದಿನಾಚರಣೆ ಮಾಡಿದ್ದಾರೆ.