Oplus_131072

ತಾಲೂಕು ಆಡಳಿತ ವತಿಯಿಂದ ಜಯಂತಿ ಆಚರಣೆ, ರಾಷ್ಟ್ರಮಟ್ಟದ ಬುದ್ಧನ ಪ್ರಯೋಗ ಶಾಲೆ ವಿಶ್ವವಿದ್ಯಾಲಯ ಚಿತ್ತಾಪುರದಲ್ಲಿ ಆಗಬೇಕು: ಡಾ. ನವಲೆ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ದಕ್ಷಿಣ ಭಾರತದ ಬಹುದೊಡ್ಡ ಬೌದ್ಧ ಕೇಂದ್ರವಾಗಿದ್ದ ಇಲ್ಲಿ ರಾಷ್ಟ್ರಮಟ್ಟದ ಬುದ್ಧನ ಪ್ರಯೋಗ ಶಾಲೆ ವಿಶ್ವವಿದ್ಯಾಲಯ ಚಿತ್ತಾಪುರದಲ್ಲಿ ಆಗಬೇಕು ಎಂದು ಕಲಬುರಗಿಯ ಮನೋವಿಜ್ಞಾನಿ ಡಾ.ದಿಲೀಪಕುಮಾರ ಎಸ್. ನವಲೆ ಹೇಳಿದರು.

ಪಟ್ಟಣದ ಬಸ್ ನಿಲ್ದಾಣ ಎದುರುಗಡೆ ಇರುವ ಬುದ್ಧ ವಿಹಾರದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಭಗವಾನ್ ಬುದ್ಧ ರವರ 2569 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಅವರು, ಪ್ರಸ್ತುತ ದಿನಮಾನಗಳಲ್ಲಿ ವಾಸ್ತವಿಕತೆಗೆ ಮನ್ನಣೆ ನೀಡದೇ ಕಲ್ಪನಾತೀತ ಜಗತ್ತಿನ ವೈಭವೀಕರಣ ನಡೆಯುತ್ತಿದೆ. ಭಗವಾನ್ ಬುದ್ಧರು  ತಮ್ಮ ಮಾತನ್ನು ಪರಿಶೀಲಿಸಿ ಸತ್ಯ ಎನ್ನಿಸಿದರೆ ಪುರಸ್ಕರಿಸಿ ಇರದಿದ್ದರೆ ತಿರಸ್ಕರಿಸಿ ಎಂದು ಹೇಳಿರುವರು ಎಂದು ತಿಳಿಸಿದರು.

ಬುದ್ಧರು ಎಲ್ಕರಿಗೂ ಸ್ವಯಂ ಜಾಗೃತರಾಗಿರಲು ತಿಳಿಸಿದ್ದಾರೆ. ಅವರ ಪಂಚಶೀಲ ತತ್ವಗಳು, ಅಪರಿಮಿತಗಳು ಲೋಕಕಲ್ಯಾಣಕ್ಕಾಗಿ ಉಪಯುಕ್ತವಾಗಿವೆ. ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ನೈಜ ಇತಿಹಾಸ ಅರಿಯುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ, ಮಾನವನ ದುಃಖಕ್ಕೆ ಆಸೆಯೇ ಕಾರಣ ಎಂದ ಭಗವಾನರು ಬಹಳ ಸರಳವಾಗಿ ಅಷ್ಟಾಂಗ ಮಾರ್ಗಗಳ ಬಗ್ಗೆ ತಿಳಿಸಿದ್ದಾರೆ. ಆಗ್ನೇಯ ಮತ್ತು  ಪೂರ್ವ ಭಾಗದಲ್ಲಿ ಅವರ ಸರಳ ಭೋದನೆ ಮನದಲ್ಲಿ ಮನೆಮಾಡಿವೆ. ವಿಶ್ವದ ಬೆಳಕು ಭಗವಾನ್ ಬುಧ್ಧರು ಎಂದು ಹೇಳಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಭಂತೇಜಿ ಧಮ್ಮನಾಗ ಅವರು ಬುಧ್ಧ ಪೂಜೆ ಮತ್ತು ಬುಧ್ಧ ವಂದನೆ ಸಲ್ಲಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಲ್ಲಿಕಾರ್ಜುನ ಕಾಳಗಿ, ಸದಸ್ಯ ಜಗದೀಶ ಚವ್ಹಾಣ ಮಾತನಾಡಿದರು. ವೇದಿಕೆಯಲ್ಲಿ ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ಮುಡಬೂಳಕರ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಮ್ ಪಾಶಾ, ತೋಟಗಾರಿಕೆ ಅಧಿಕಾರಿ ಶಂಕರಗೌಡ ಪಾಟೀಲ್, ಪಿಎಸ್ಐ ಶ್ರೀಶೈಲ್ ಅಂಬಾಟಿ ಇದ್ದರು.

ಪ್ರಮುಖರಾದ ಉದಯಕುಮಾರ್ ಸಾಗರ, ಲಿಂಗಪ್ಪ ಮಲ್ಕನ್, ಮಲ್ಲಿಕಾರ್ಜುನ ಮುಡಬೂಳಕರ್, ಶ್ರೀಕಾಂತ್ ಶಿಂಧೆ, ದೇವಿಂದ್ರ ಕುಮಸಿ, ಸಂಜಯ ಬುಳಕರ್, ಲೋಹಿತ್ ಮುದ್ದಡಗಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಸಂಜಯ ಬುಳಕರ್, ವಿಠಲ್ ಕಟ್ಟಿಮನಿ, ದೇವಿಂದ್ರ ಅರಣಕಲ್, ಬಸವರಾಜ ಮುಡಬೂಳಕರ್, ಕಾರ್ತಿಕ್, ಕುಶಾಲ, ರಾಜಪ್ಪ ಹುಂಡೇಕರ್, ಸಂದೀಪ್ ಕಿಟ್ಟಿ, ಅಂಬರೀಷ್ ಮತ್ತಿಮುಡ್, ಶರಣು ತಲಾಟಿ ಸೇರಿದಂತೆ ಇತರರು ಇದ್ದರು.

ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ಪ್ರಾಸ್ತಾವಿಕ ಮಾತನಾಡಿದರು. ಟಿಪಿಒ ಶಿವಶರಣಪ್ಪ ಮಂಠಾಳೆ ನಿರೂಪಿಸಿದರು, ನಾಗರಾಜ ಓಂಕಾರ್ ವಂದಿಸಿದರು. ನಂತರ ಅನ್ನ ಸಂತರ್ಪಣೆ ನಡೆಯಿತು.

Spread the love

Leave a Reply

Your email address will not be published. Required fields are marked *

error: Content is protected !!