ಚಿತ್ತಾಪುರ ಕೋಲಿ ಸಮಾಜದ ಅಧ್ಯಕ್ಷ ಶಿವುಕುಮಾರ ಯಾಗಾಪೂರ ಅವರಿಗೆ ತೊನಸನಳ್ಳಿ ಶ್ರೀ ಮಲ್ಲಣ್ಣಪ್ಪ ಮಹಾಸ್ವಾಮಿಗಳಿಂದ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕು ಕೋಲಿ ಸಮಾಜದ ಅಧ್ಯಕ್ಷರಾದ ಶಿವುಕುಮಾರ ಯಾಗಾಪೂರ ಅವರಿಗೆ ತೊನಸನಳ್ಳಿ ಅಲ್ಲಮಪ್ರಭು ಸಂಸ್ಥಾನ ಮಠದ ಪೀಠಾಧಿಪತಿ ಮಲ್ಲಣ್ಣಪ್ಪ ಮಹಾಸ್ವಾಮಿಗಳು ಸನ್ಮಾನಿಸಿ ಆಶೀರ್ವಾದ ಮಾಡಿದರು.
ಈ ವೇಳೆ ಮಾತನಾಡಿದ ಶ್ರೀಗಳು, ಶಿವುಕುಮಾರ ಯಾಗಾಪೂರ ಒಬ್ಬ ಯುವ ಉತ್ಸಾಹಿ ಮತ್ತು ಎಲ್ಲರನ್ನೂ ಸಮನಾಗಿ ತೆಗೆದುಕೊಂಡು ಹೋಗುವ ಕ್ರಿಯಾಶೀಲ ಹಾಗೂ ಸಮಾಜದ ಸಂಘಟನೆ ಬಗ್ಗೆ ಕಾಳಜಿಯುಳ್ಳ ವ್ಯಕ್ತಿಗೆ ಎಲ್ಲರೂ ಸೇರಿ ತಾಲೂಕು ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವುಕುಮಾರ ಯಾಗಾಪೂರ ಕಾಲಾವಧಿಯಲ್ಲಿ ಸಮಾಜದ ಸಂಘಟನೆ ಮತ್ತಷ್ಟು ಬಲಿಷ್ಠವಾಗಲಿ, ಹಾಗೂ ತಾಲೂಕಿನಲ್ಲಿ ಅಂಬಿಗರ ಚೌಡಯ್ಯ ನವರ ಮೂರ್ತಿಗಳು ಪ್ರತಿಷ್ಠಾಪನೆ ಕಾರ್ಯ ಆಗಲಿ ಈ ನಿಟ್ಟಿನಲ್ಲಿ ಸಮಾಜ ಸೇವೆ ಸಲ್ಲಿಸುವ ಅವಕಾಶ ಬಂದಿರುವುದು ಅವರಲ್ಲಿನ ಸಾಮರ್ಥ್ಯಕ್ಕೆ ಹಾಗೂ ಪರಿಶ್ರಮಕ್ಕೆ ಒದಗಿ ಬಂದ ಭಾಗ್ಯವಾಗಿದೆ ಎಂದು ಹೇಳಿದರು.
ಸಮಾಜದ ಸಂಘಟನೆ ಅನ್ನುವುದು ಸರಳ ಕೆಲಸ ಅಲ್ಲ ಅದೊಂದು ಬಹು ದೊಡ್ಡ ಕೆಲಸವಾಗಿದೆ. ಹೀಗಾಗಿ ಎಲ್ಲರೂ ಶಿವುಕುಮಾರ ಯಾಗಾಪೂರ ಅವರಿಗೆ ಸಹಕರಿಸುವ ಮೂಲಕ ಸಮಾಜದ ಸಂಘಟನೆ ಮಾಡುವ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೋಲಿ ಸಮಾಜದ ಮುಖಂಡರಾದ ತಮ್ಮಣ್ಣ ಡಿಗ್ಗಿ, ದಶರಥ ದೊಡ್ಡಮನಿ, ಶರಣು ಭಾಗೋಡಿ, ಉಮೇಶ್ ಸೇರಿದಂತೆ ಇತರರು ಇದ್ದರು.