ಚಿತ್ತಾಪುರ ತಾಲೂಕು ಸರಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ, ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಫಲಿತಾಂಶಕ್ಕಾಗಿ ಎಲ್ಲಾ ಶಿಕ್ಷಕರು ಕೈಜೋಡಿಸಿ: ಸೂರ್ಯಕಾಂತ ಮದಾನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಫಲಿತಾಂಶಕ್ಕಾಗಿ ಎಲ್ಲಾ ಶಿಕ್ಷಕರು ಕೈಜೋಡಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಸೂರ್ಯಕಾಂತ ಮದಾನೆ ಹೇಳಿದರು.
ಪಟ್ಟಣದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಚಿತ್ತಾಪುರ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ ಮತ್ತು ಕ್ಯಾಲೆಂಡರ್ ಬಿಡುಗಡೆ, ತಾಲೂಕು ಸರಕಾರಿ ನೌಕರರ ಸಂಘದ ಚುನಾಯಿತ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಹಾಗೂ ಸಾವಿತ್ರಿಬಾಯಿ ಫುಲೆ ಜಯಂತ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಚಿತ್ತಾಪುರ ಶೈಕ್ಷಣಿಕವಾಗಿ ದೊಡ್ಡ ತಾಲೂಕಾಗಿದ್ದು ಕಳೆದ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.56 ಬಂದಿದೆ ಈ ಬಾರಿ ಅದಕ್ಕೂ ಹೆಚ್ಚು ಫಲಿತಾಂಶ ಬರುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಮಾತನಾಡಿ, ಸಂಬಳದ ಶಿಕ್ಷಕರಾಗಬೇಡಿ ಜ್ಞಾನವನ್ನು ಹೆಚ್ಚಿಸುವ ಶಿಕ್ಷಕರಾಗಿ ಅಂದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಆಗಲು ಸಾಧ್ಯ ಎಂದು ಹೇಳಿದರು.
ಸಂಸ್ಕಾರ ಸಹಿತ ಶಿಕ್ಷಣ ನೀಡಬೇಕಿದೆ ಈ ನಿಟ್ಟಿನಲ್ಲಿ ಶಿಕ್ಷಕರು ಸೇವೆ ಸಲ್ಲಿಸಿ ಎಂದು ಕಿವಿಮಾತು ಹೇಳಿದರು. ಸಮಾಜದ ಮೂಢನಂಬಿಕೆಗಳ ವಿರುದ್ಧ ಹಾಗೂ ಶಿಕ್ಷಣದ ಪರ ಸೇವೆ ಸಲ್ಲಿಸಿದ ಏಕೈಕ ಮಹಿಳೆ ಸಾವಿತ್ರಿಬಾಯಿ ಫುಲೆ ಆಗಿದ್ದಾರೆ. ಜ್ಯೋತಿ ಬಾ ಫುಲೆ ಅವರು ಸಾವಿತ್ರಿಬಾಯಿ ಫುಲೆ ಅವರಿಗೆ ಸ್ಪೂರ್ತಿಯಾಗಿದ್ದರು ಎಂದು ಬಣ್ಣಿಸಿದರು.
ಶಾಲಾ ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ಶಾಂತಗೌಡ ಪಾಟೀಲ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ, ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಸೇಡಂ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ ನಾಯ್ಕೋಡಿ, ಜಿಲ್ಲಾ ಕಾರ್ಯದರ್ಶಿ ಬಾಬು ಮೌರ್ಯ, ಪದವಿಧರ ಶಿಕ್ಷಕರ ಸಂಘದ ಅಧ್ಯಕ್ಷೆ ಗೀತಾ, ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಶರಣಪ್ಪ ಮಂಠಾಳೆ, ಸಾವಿತ್ರಿಬಾಯಿ ಫುಲೆ ಸಂಘದ ಜಿಲ್ಲಾಧ್ಯಕ್ಷೆ ಸೇವಂತ ಚವ್ಹಾಣ, ಮುಖ್ಯ ಗುರುಗಳು ಹಾಗೂ ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ನಾಗುಬಾಯಿ ಮಲಘಾಣ, ದೇವಿಂದ್ರ ರೆಡ್ಡಿ ದುಗನೂರ, ಪ್ರೌಢ ಶಾಲಾ ಮುಖ್ಯ ಗುರುಗಳು ಸಂಘದ ಅಧ್ಯಕ್ಷ ಚಂದ್ರಾಮ ಅಮನಗಡೆ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜೇಂದ್ರ ಪ್ರಸಾದ, ರವೀಂದ್ರ ರೆಡ್ಡಿ, ಗಂಗಾಧರ ಎಸ್. ಕೋಡ್ಲಾ, ರಮೇಶ ಬಟಗೇರಿ, ಮೊಹ್ಮದ ಜಾವೀದ್, ವೀರಭದ್ರಪ್ಪ ಗುರುಮಿಠಕಲ್, ಸಂತೋಷ ಕೊಮಟೆ, ಹುಸೇನ ಪಾಶಾ ಎಂ. ಇನಾಮದಾರ, ಸ್ವರ್ಣಲತಾ ರೆಡ್ಡಿ ದುಗನೂರ, ಸುಭಾಷ ಪವಾರ, ಸುಮಂಗಲಾ ಜಾಧವ,ಷಶರಣಪ್ಪ ಐಕೂರ, ಈಶ್ವರ ಸಂಕನೂರ, ಸಾಬಣ್ಣ ಎಮ್. ಜಕಮನರ್, ಲಕ್ಷ್ಮಣ ಬಿ. ಕೋನಾಪೂರ, ಶಿವಲೀಲಾ ಕಲಗುರ್ತಿ, ಅನುರಾಧಾ, ಯಾಸ್ಮಿನ ಬೇಗಂ, ಜಯಶ್ರೀ ಕಾಳನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಲೀಲಾ ಕಲಗುರ್ಕಿ ಸ್ವಾಗತಿಸಿದರು, ಅಬ್ದುಲ್ ಸಲೀಂ ಪ್ಯಾರೆ ನಿರೂಪಿಸಿದರು, ಆದಪ್ಪ ಬಗಲಿ ವಂದಿಸಿದರು.