Oplus_0

ಕಾಂಗ್ರೆಸ್, ಬಿಜೆಪಿ ಮುಖಂಡರಿಂದ ವಿಜಯೋತ್ಸವ | ಚಿತ್ತಾಪುರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ದೇವಿಂದ್ರ ಅರಣಕಲ್, ಉಪಾಧ್ಯಕ್ಷರಾಗಿ ಅಶೋಕ ಹರನಾಳ ಅವಿರೋಧ ಆಯ್ಕೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಐದು ವರ್ಷಗಳ ಅವಧಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದೇವಿಂದ್ರ ಅರಣಕಲ್ ಭಾಗೋಡಿ ಹಾಗೂ ಉಪಾಧ್ಯಕ್ಷರಾಗಿ ಅಶೋಕ ಹರನಾಳ ವಾಡಿ ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಅಫಜಲಪುರ ಸಹಕಾರ ಅಭಿವೃದ್ಧಿ ಅಧಿಕಾರಿ ಹಾಗೂ ಚುನಾವಣಾಧಿಕಾರಿ ಚಾಂದ್ ಭಾಷಾ ಅನ್ಸಾರಿ ತಿಳಿಸಿದ್ದಾರೆ.

ಪಟ್ಟಣದ ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ದೇವಿಂದ್ರ ಅರಣಕಲ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ ಹರನಾಳ ಅವರು ನಾಮಪತ್ರ ಸಲ್ಲಿಸಿದರು. ಪ್ರತಿಸ್ಪರ್ಧಿ ಯಾವುದೇ ನಾಮಪತ್ರಗಳು ಬಾರದೆ ಇರುವುದರಿಂದ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಘೋಷಿಸಿದ್ದಾರೆ.

ಚುನಾವಣೆ ಪ್ರಕ್ರಿಯೆಯಲ್ಲಿ ನೂತನ ನಿರ್ದೇಶಕರಾದ ಈರಯ್ಯಾ ರೇವಣಸಿದ್ದಯ್ಯಾ ಬೆಣ್ಣೂರ ಬಿ, ಪೇಠಶಿರೂರ, ಭೀಮಾಶಂಕರ ಗುರಣ್ಣ ನಾಲವಾರ, ಅಬ್ದುಲ್ ರಶೀದ್ ಹಸನಸಾಬ್ ಯಾದಗೀರ ದಂಡೋತಿ, ಶ್ರೀನಿವಾಸ ರಾಘವೇಂದ್ರ ಕೊಡದೂರ, ರಾಚಪ್ಪಾ ನಿಂಗಪ್ಪ ಚಿತ್ತಾಪುರ, ವಿಜಯಕುಮಾರ ರೇವಣಸಿದ್ದಪ್ಪ ತೆಂಗಳಿ, ಗೌರಮ್ಮ ಮಲ್ಲಿನಾಥ ಕಮರವಾಡಿ, ಸುನಿತಾ ಅಶೋಕ ವಗ್ಗರ ರಾವೂರ, ಮಹೇಶ ಸಾಬಣ್ಣ ಧರಿ ಭಂಕೂರ, ಅಂಬರೀಷ ಚಂದ್ರಶೇಖರ ಸುಲೇಗಾಂವ ಚಿತ್ತಾಪುರ ಅವರು ಹಾಜರಿದ್ದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಹಾಗೂ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಬಿಜೆಪಿ ಮುಖಂಡರಾದ ಭೀಮರೆಡ್ಡಿ ಕುರಾಳ, ವೀರಣ್ಣ ಯಾರಿ, ಭೀಮಶ್ಯಾ ಜೀರೋಳ್ಳಿ, ಆನಂದ ಪಾಟೀಲ ನರಿಬೋಳ, ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ, ಶಿವರಾಮ್ ಚವ್ಹಾಣ, ಕಾಂಗ್ರೆಸ್ ಮುಖಂಡರಾದ ರಸೂಲ್ ಮುಸ್ತಫಾ, ನಾಗರೆಡ್ಡಿ ಗೋಪಸೇನ್, ಹಣಮಂತ ಸಂಕನೂರ್, ಸಂತೋಷ ಪೂಜಾರಿ, ದೇವು ಯಾಬಾಳ, ಮಹೇಶ್ ಜಾಯಿ, ಸಿದ್ದು ಭೋವಿ ಸೇರಿದಂತೆ ಇತರರು ಇದ್ದರು.

ಒಳ ಒಪ್ಪಂದ ಯಶಸ್ವಿ, ಮುಖಂಡರಿಂದ ವಿಜಯೋತ್ಸವ :

ಕಾಂಗ್ರೆಸ್ ಬಿಜೆಪಿ ನಾಯಕರ ನಡುವೆ ಚುನಾವಣಾ ಪೂರ್ವದಲ್ಲಿ ಆದ ಒಳ ಒಪ್ಪಂದದಂತೆ ಕಾಂಗ್ರೆಸ್ ಗೆ ಅಧ್ಯಕ್ಷ ಸ್ಥಾನ, ಬಿಜೆಪಿ ಗೆ ಉಪಾಧ್ಯಕ್ಷ ಸ್ಥಾನ ಒಲಿದಿದೆ. ಹೀಗಾಗಿ ಅವಿರೋಧ ಆಯ್ಕೆ ಫಲಿತಾಂಶ ಹೊರಬೀಳುತ್ತಿದ್ದಂತೆ ಎರಡು ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!