ಚಿತ್ತಾಪುರ ತರಕಾರಿ ಮಾರುಕಟ್ಟೆ ಮಳಿಗೆಗಳು ಹಂಚಿಕೆಗೆ ರವಿ ಇವಣಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ತರಕಾರಿ ವ್ಯಾಪಾರಿಗಳ ಅನುಕೂಲಕ್ಕಾಗಿ ನಿರ್ಮಾಣವಾದ ತರಕಾರಿ ಮಾರುಕಟ್ಟೆ ಮಳಿಗೆಗಳು ಮಲಮೂತ್ರ ವಿಸರ್ಜನೆಗೆ ಹಾಗೂ ಕುಡುಕರ ತಾಣವಾಗಿ ಮಾರ್ಪಟ್ಟಿದೆ, ಕೂಡಲೇ ಮಳಿಗೆಗಳು ತರಕಾರಿ ವ್ಯಾಪಾರಿಗಳಿಗೆ ಹಂಚಿಕೆ ಮಾಡಬೇಕು ಎಂದು ಕನ್ನಡ ಸೇನೆ ತಾಲೂಕು ಅಧ್ಯಕ್ಷ ರವಿ ಇವಣಿ ಆಗ್ರಹಿಸಿದ್ದಾರೆ.
ತರಕಾರಿ ಮಾರುಕಟ್ಟೆ ಮಳಿಗೆಗಳು ನಿರ್ಮಾಣ ಮಾಡಿ ಎರಡು ವರ್ಷ ಸಮೀಪಿಸಿದರೂ ಸಹ ಉದ್ಘಾಟನೆ ಭಾಗ್ಯ ಕಂಡಿಲ್ಲ, ಓರಿಯಂಟ್ ಸಿಮೆಂಟ್ ಕಂಪೆನಿ ವತಿಯಿಂದ ನಿರ್ಮಾಣವಾಗಿದ್ದು ಸ್ಥಳೀಯ ಪುರಸಭೆ ನಿರ್ವಹಣೆ ಮಾಡಬೇಕಿದೆ, ಆದರೆ ಯಾವುದೇ ನಿರ್ವಹಣೆ ಮತ್ತು ಸೂಕ್ತ ಭದ್ರತೆ ಇಲ್ಲದೆ ಇರುವುದರಿಂದ ಕುಡುಕರ ಅಡ್ಡವಾಗಿದೆ ರಾತ್ರಿ ಹೊತ್ತು ಮಲಮೂತ್ರ ವಿಸರ್ಜನೆಗೆ ಅನುಕೂಲವಾಗಿದೆ ಹೀಗಾಗಿ ಅಲ್ಲಿನ ವಾತಾವರಣ ಹದಗೆಟ್ಟು ದುರ್ನಾತ ಹರಡುತ್ತಿದೆ ಆ ಮಾರ್ಗದಲ್ಲಿ ಮುಗು ಮುಚ್ಚಿಕೊಂಡು ಹೋಗಬೇಕಿದೆ ಇದರಿಂದ ಸಾರ್ವಜನಿಕರು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕೂಡಲೇ ತರಕಾರಿ ವ್ಯಾಪಾರಿಗಳಿಗೆ ಮಳಿಗೆಗಳು ಹಂಚಿಕೆ ಮಾಡುವ ಮೂಲಕ ತರಕಾರಿ ಮಾರುಕಟ್ಟೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.