Oplus_131072

ಚಿತ್ತಾಪುರ ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳ ನೇಮಕ

ಚಿತ್ತಾಪುರ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿತ್ತಾಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿನ ಮಹಾಸಭಾ ಕಾರ್ಯಕ್ರಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ತಾಲೂಕು ಘಟಕಕ್ಕೆ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಈಗ ತಾಲೂಕು ಪದಾಧಿಕಾರಿಗಳ ಸಮ್ಮತಿ ಮೇರೆಗೆ ಪೂರ್ಣ ಪ್ರಮಾಣದ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ವೀರಶೈವ ಲಿಂಗಾಯತ ಸಮಾಜದ ಸಂಘಟನೆಗಾಗಿ ಎಲ್ಲ ಪದಾಧಿಕಾರಿಗಳು ಒಗ್ಗೂಡಿ ತಮಗೆ ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಸಮಾಜದ ಘನತೆ ಗೌರವ ಇನ್ನಷ್ಟು ಹೆಚ್ಚಿಸಬೇಕು ಎಂದು ಕಿವಿಮಾತು ಹೇಳಿದರು.

ನೂತನ ಪದಾಧಿಕಾರಿಗಳು:
ತಾಲೂಕು ಘಟಕ: ಶಾಂತಣ್ಣ ಚಾಳೀಕಾರ ಅಳ್ಳೋಳ್ಳಿ, ಬಸವರಾಜ ಕಿರಣಗಿ, ವೆಂಕಟಮ್ಮ ಪಾಲಪ್ (ಉಪಾಧ್ಯಕ್ಷರು), ಆನಂದ ಪಾಟೀಲ ನರಿಬೋಳ (ಪ್ರಧಾನ ಕಾರ್ಯದರ್ಶಿ), ಈಶ್ವರ ಬಾಳಿ ರಾವೂರ, ಪ್ರಸಾದ್ ಅವಂಟಿ, ಬಸವರಾಜ ಪಾಟೀಲ ಭಾಗೋಡಿ (ಕಾರ್ಯದರ್ಶಿಗಳು), ಚಂದ್ರಶೇಖರ ಬಳ್ಳಾ (ಕೋಶಾಧ್ಯಕ್ಷರು).

ತಾಲೂಕು ಯುವ ಘಟಕ:
ಬಸವಂತರಾವ್ ಮಾಲಿ ಪಾಟೀಲ್ ದಿಗ್ಗಾಂವ (ಗೌರವಾಧ್ಯಕ್ಷರು), ಅನೀಲಕುಮಾರ್ ವಡ್ಡಡಗಿ (ಅಧ್ಯಕ್ಷರು), ಮಲ್ಲು ಇಂದೂರ ಕಮರವಾಡಿ (ಪ್ರಧಾನ ಕಾರ್ಯದರ್ಶಿ), ನಿಂಬೆಣ್ಣಪ್ಪ ಪಾಟೀಲ ಇಟಗಿ (ಸಹ ಕಾರ್ಯದರ್ಶಿ), ಸಂತೋಷ ಹಾವೇರಿ (ಸಂಘಟನಾ ಕಾರ್ಯದರ್ಶಿ).

ನಗರ ಘಟಕ:
ಕೋಟೇಶ್ವರ ರೇಷ್ಮಿ (ಗೌರವಾಧ್ಯಕ್ಷರು), ಚಂದ್ರಶೇಖರ ಉಟಗೂರ (ಅಧ್ಯಕ್ಷರು), ವೀರಭದ್ರಪ್ಪ ಪಾಟೀಲ ಹುಮನಾಬಾದ್ (ಪ್ರಧಾನ ಕಾರ್ಯದರ್ಶಿ), ಸಾಯಿನಾಥ್ ನಿಪ್ಪಾಣಿ (ಸಂಘಟನಾ ಕಾರ್ಯದರ್ಶಿ), ವಿಶ್ವರೆಡ್ಡಿ ಗಡೆಸೂರ (ಸಹ ಕಾರ್ಯದರ್ಶಿ) ಅವರನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಅಂಬರೀಷ್ ಸುಲೇಗಾಂವ್, ಬಸವರಾಜ ಸಂಕನೂರ, ಬಸವರಾಜ ಹೂಗಾರ, ಕೋಟೇಶ್ವರ ರೇಷ್ಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!