ಚಿತ್ತಾಪುರ ವಿವಿಧ ಕ್ಷೇತ್ರಗಳ ಸಾಧಕರಿಗೆ ನಾಗಾವಿ ನಕ್ಷತ್ರ ಪ್ರಶಸ್ತಿಗೆ ಆಯ್ಕೆ: ಚಂದರ್ ಚವ್ಹಾಣ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾಷ್ಟ್ರಕೂಟರ ಕುಲ ದೇವತೆಯಾದ ತಾಯಿ ನಾಗಾವಿ ಯಲ್ಲಮ ದೇವಿಯ ಜಾತ್ರಾ ಮಹೋತ್ಸವ ನಿಮಿತ್ತ ನಾಗಾವಿ ನಾಡು ನಾಟ್ಯ ಸಂಘ ಉದ್ಘಾಟನಾ ಸಮಾರಂಭದ ಪ್ರಯುಕ್ತ ಚಿತ್ತಾಪುರ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ನಾಗಾವಿ ನಕ್ಷತ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ನಾಟ್ಯ ಸಂಘದ ಅಧ್ಯಕ್ಷ ಚಂದರ್ ಚವ್ಹಾಣ ತಿಳಿಸಿದ್ದಾರೆ.
ಮಾಧ್ಯಮ ಕ್ಷೇತ್ರ: ನಾಗಯ್ಯಸ್ವಾಮಿ ಅಲ್ಲೂರ, ವೀರೆಂದ್ರ ಕೊಲ್ಲೂರ, ಕಾಶಿನಾಥ ಗುತ್ತೇದಾರ, ಮಲ್ಲಿಕಾರ್ಜುನ ಮುಡಬುಳಕರ್, ರವಿಶಂಕರ್ ಬುರ್ಲಿ.
ಶಿಕ್ಷಣ ಕ್ಷೇತ್ರ: ನಿಂಗಪ್ಪ ಮಲ್ಕನ್ ಕಿಶನ್ ರಾಠೋಡ, ಸಾಬೇರಾ ಬೆಗಂ, ಶಾಮರಾವ್ ಗಾರಂಪಳ್ಳಿ.
ವೈದ್ಯಕೀಯ ಕ್ಷೇತ್ರ: ಡಾ.ಚಂದ್ರಶೇಖರ ಕಾಂತಾ, ಡಾ.ನಂದಾ ರಾಂಪೂರೆ, ಕೌಶಲ್ಯಬಾಯಿ ರಜಪುತ್ , ಶಿವಲಿಂಗ ಪಸ್ತಪೂರ.
ವಿದ್ಯುತ್ ಕ್ಷೇತ್ರ: ಶಂಕರರಾವ್ ದೇಶಪಾಂಡೆ, ಕಿಶನ್ ರಾಠೋಡ, ಶಂಕರ ರಾಠೋಡ.
ಪೌರಕಾರ್ಮಿಕ ಕ್ಷೇತ್ರ: ಮಲ್ಲಪ್ಪ ಮರಿಯಪ್ಪ, ಮಹಾನಂದಾ ರಾಮುಲು.
ಸಮಾಜಸೇವಾ ಕ್ಷೇತ್ರ: ವಿವೇಕ್ ಹಂಚಾಟೆ, ಮೊಹ್ಮದ ಇಬ್ರಾಹಿಮ್, ತಿಪ್ಪಣ್ಣ ವಗ್ಗರ್ ಅವರನ್ನು ಆಯ್ಕೆ ಮಾಡಲಾಗಿದೆ.
ಶ್ರೀಯುತರನ್ನು ಅ.17 ರಂದು ನಾಗಾವಿ ಜಾತ್ರಾ ಮಹೋತ್ಸವ ದಿನದಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಾಗಾವಿ ನಾಡು ನಾಟ್ಯ ಸಂಘದ ಉದ್ಘಾಟನೆ ಜೊತೆಗೆ ಅಕ್ಟೋಬರ್ 17 ಮತ್ತು 18 ರ ವರೆಗೆ ರಾತ್ರಿ ತಾಳಿ ಹರಿಯಲಿಲ್ಲ ಶೀಲ ಉಳಿಯಲಿಲ್ಲ ಉಚಿತ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು, ಸಾರ್ವಜನಿಕರು ಭಾಗವಹಿಸಬೇಕು ಎಂದು ಕೋರಿದ್ದಾರೆ.