ಚಿತ್ತಾಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ಕೋಲಿ ಸಮಾಜದಿಂದ ತಹಸೀಲ್ದಾರ ಅವರಿಗೆ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಲಾಡ್ಜಿಂಗ್ ಕ್ರಾಸ್, ಇಂದಿರಾ ಕ್ಯಾಂಟಿನ್ ಹತ್ತಿರ ಇರುವ ನಿಜಶರಣ ಅಂಬಿಗರ ಚೌಡಯ್ಯ ನವರ ವೃತ್ತದಲ್ಲಿ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಮಂಗಳವಾರ ಕೋಲಿ ಸಮಾಜ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ ನೇತೃತ್ವದಲ್ಲಿ ಮುಖಂಡರು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಅಂಬಿಗರ ಚೌಡಯ್ಯ ನವರ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲು ಅನುಮತಿ ನೀಡಬೇಕು. ಹಾಗೂ ಲಾಡ್ಜಿಂಗ್ ಕ್ರಾಸ್ ಅನ್ನುವುದನ್ನು ತೆಗೆದು ಹಾಕಿ ಅಂಬಿಗರ ಚೌಡಯ್ಯ ನವರ ವೃತ್ತ ಎಂದು ನಾಮಕರಣ ಮಾಡಬೇಕು ಇದು ನಮ್ಮ ಸಮಾಜದ ಬಹುದಿನದ ಬೇಡಿಕೆಯಾಗಿದೆ ಎಂದು ಹೇಳಿದರು. ಇದೇ ಜನವರಿ 21 ರಂದು ಅಂಬಿಗರ ಚೌಡಯ್ಯ ನವರ ಜಯಂತಿ ಇರುವುದರಿಂದ ಕೂಡಲೇ ಪೂರ್ವಭಾವಿ ಸಭೆ ಕರೆಯಬೇಕು ಎಂದು ಮನವಿ ಮಾಡಿದ್ದಾರೆ.
ಈಗಾಗಲೇ ಚಿತ್ತಾಪುರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹಾಗೂ ಜಗಜ್ಯೋತಿ ಶ್ರೀ ಬಸವೇಶ್ವರ ಅವರ ಮೂರ್ತಿಗಳು ಸೇರಿದಂತೆ ಇತರೇ ಮೂರ್ತಿಗಳು ಇವೆ. ಆದರೆ ಅಂಬಿಗರ ಚೌಡಯ್ಯ ನವರ ಮೂರ್ತಿ ಇರುವುದಿಲ್ಲ ಇದು ಇಡೀ ನಮ್ಮ ಕೋಲಿ ಸಮಾಜಕ್ಕೆ ಬಹಳ ಬೇಸರವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಚಿತ್ತಾಪುರ ತಾಲ್ಲೂಕಿನಲ್ಲಿ ಕೋಲಿ ಸಮಾಜ ಅತಿ ಹೆಚ್ಚು ಜನಸಂಖ್ಯೆ ಇದೆ, ಆದರೆ ಅಂಬಿಗರ ಚೌಡಯ್ಯ ನವರ ಮೂರ್ತಿ ಇಲ್ಲ ಹೀಗಾಗಿ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿ ಕೂಡಲೇ ಕೋಲಿ ಸಮಾಜದ ಬಹುದಿನದ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕೋಲಿ ಸಮಾಜದ ಮುಖಂಡರಾದ ಸಂತೋಷ ನಾಟೀಕಾರ, ಕಾಶಪ್ಪ ಡೋಣಗಾಂವ, ಗುಂಡು ಐನಾಪುರ, ಶಿವುಕುಮಾರ ಸುಣಗಾರ, ಸಾಬಣ್ಣ ಭರಾಟೆ, ಸಾಬಣ್ಣ ಹೋಳಿಕಟ್ಟಿ, ದಶರಥ ದೊಡ್ಡಮನಿ, ಮಹಾದೇವ ಕೊನಿಗೇರಿ, ಸೂರ್ಯಕಾಂತ ಕೊಂಕನಳ್ಳಿ, ಆನಂದ ಯರಗಲ್, ಬೆಳ್ಳಪ್ಪ ಇಂಗನಕಲ್, ಈರಣ್ಣ ಕೊಳ್ಳಿ, ಸಾಬಣ್ಣ ಲಾಡ್ಲಾಪೂರ, ಮಲ್ಲಿಕಾರ್ಜುನ ಅಲ್ಲೂರಕರ್, ಸಿದ್ದು ಸಂಗಾವಿ, ಗೂಳಿ ಡಿಗ್ಗಿ, ರೇವಣಸಿದ್ದ ಬೆಣಮಿ, ಶರಣು ಅರಣಕಲ್, ಶರಣು ದೋಲಕ್ ಭಾಗೋಡಿ, ಮಹೇಶ್ ಸಾತನೂರು, ಮಾರುತಿ ದಂಡೋತಿ, ಸಂತೋಷ ಕೊಂಕನಳ್ಳಿ, ಮೌನೇಶ್ ರಾಜೋಳ್ಳಾ ಸೇರಿದಂತೆ ಇತರರು ಇದ್ದರು.