Oplus_0

ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಮಾತನಾಡಿದ ಗೃಹ ಸಚಿವ ಅಮೀತ್ ಶಾ ಸಂಪುಟದಿಂದ ವಜಾ ಮಾಡುವಂತೆ ಆಗ್ರಹಿಸಿ ಚಿತ್ತಾಪುರದಲ್ಲಿ ಬೃಹತ್ ಪ್ರತಿಭಟನೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಭಾರತ ರತ್ನ, ಸಂವಿಧಾನ ಶಿಲ್ಪಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮೀತ್ ಶಾ ಇವರ ವಿರುದ್ದ ಸೂಕ್ತ ಕ್ರಮ ಕೈಗೊಂಡು ಇವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡುವಂತೆ ಒತ್ತಾಯಿಸಿ ಶನಿವಾರ ಚಿತ್ತಾಪುರ ತಾಲೂಕಾ ದಲಿತ ಸಮನ್ವಯ ಸಮಿತಿ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಲಾಡ್ಜಿಂಗ್ ಕ್ರಾಸ್ ಹತ್ತಿರ ಸಮಾವೇಶಗೊಂಡು ಮಾನವ ಸರಪಳಿ ನಡೆಸಿ ಶಾ ಪ್ರತಿಕೃತಿ ದಹಿಸಿ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಭಾರತ ರತ್ನ, ಸಂವಿಧಾನ ಶಿಲ್ಪಿ, ವಿಶ್ವಮಾನವ ಡಾ. ಬಿ.ಆರ್.ಅಂಬೇಡ್ಕರರವರನ್ನು ಕುರಿತು ಹಗುರವಾಗಿ ಮಾತನಾಡಿದ ಕೇಂದ್ರ ಗೃಹ ಮಂತ್ರಿ ಅಮೀತ್ ಶಾ ಅವರು ಸಂಸತ್ತಿನಲ್ಲಿ ಸದನ ನಡೆಯುವಾಗ ಈ ದೇಶದ ಚರಿತ್ರೆ ಬರೆದ ಬಾಬಾ ಸಾಹೇಬ್ ಅಂಬೇಡ್ಕರ ಹೆಸರು ತೆಗೆದುಕೊಂಡು ಸುಮ್ಮನೆ ಕಾಲ ಹರಣ ಮಾಡುವ ಬದಲು ದೇವರ ಹೆಸರು ಸ್ಮರಿಸಿದರೆ ನಿಮಗೆ ಏಳು ಜನ್ಮದವರೆಗೆ ಸ್ವರ್ಗ ಸಿಗುತ್ತದೆ ಎಂದು ಹೇಳುವುದರ ಮೂಲಕ ವಿವಾದ ಸೃಷ್ಟಿಸಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಶಾ ಅವರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾನು ಚಹಾ ಮಾರುವ ಒಬ್ಬ ಸಾಮಾನ್ಯ ವ್ಯಕ್ತಿ ಈ ದೇಶದ ಪ್ರಧಾನಿಯಾಗಿರುವುದು ಭಾರತದ ಸಂವಿಧಾನದ ಕೊಡುಗೆ ಎಂದು ಹೇಳುತ್ತಾ ತಮ್ಮ ಸಚಿವ ಸಂಪುಟದಲ್ಲಿ ಗೃಹ ಮಂತ್ರಿಯಾಗಿ ಗಡಿಪಾರಾಗಿ ಸಂಸತ್ತಿನಲ್ಲಿಯೂ ಸಹ ಡಾ. ಬಾಬಾ ಸಾಹೇಬ್ ಅಂಬೇಡ್ಕರ ಬಗ್ಗೆ ಕೀಳಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಕಿಡಿಕಾರಿದರು.

ಈ ಹಿಂದೆ ಪೇಜಾವರ ಶ್ರೀಗಳು ಸಹ ಸಂವಿಧಾನದ ಬಗ್ಗೆ ಅವಹೇಳನ ಮಾಡಿರುವುದು ಕಂಡು ಸಂವಿಧಾನ ಬದಲಾವಣೆ ಮಾಡುವುದೇ ಮೂಲ ಉದ್ದೇಶ ಎಂಬುದು ಬದ್ದರಾಗಿ ಹೇಳುತ್ತಾ ಭಾರತದಲ್ಲಿ ಮತ್ತೆ ಮನುವಾದಿ ಜಾತಿವಾದಿ ವ್ಯವಸ್ಥೆಯಲ್ಲಿ ಸಂವಿಧಾನ ಜಾರಿಗೊಳಿಸಬೇಕೆಂದು ಬಿ.ಜೆ.ಪಿ ಮತ್ತು ಆರ್.ಎಸ್.ಎಸ್ ಒಂದು ಮೂಲ ಉದ್ದೇಶವಾಗಿದೆ ಎಂಬುದು ಎತ್ತಿ ತೋರಿಸುತ್ತಿದ್ದು, ಒಬ್ಬ ಕೋಮುವಾದಿ ಗುಂಡಾಗಿರಿ ಮಾಡುವವನಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಸಂಸತಿಗೆ ಆಯ್ಕೆಯಾಗಿ ದೇಶದಲ್ಲಿ ಅಶಾಂತಿ ನಿರ್ಮಿಸುವ ವಾತಾವರಣ ಸೃಷ್ಟಿ ಮಾಡುವವರಿಗೆ ಕೋಮುವಾದಿ ಪಕ್ಷ ಬೆಂಬಲಿಸುತ್ತಾ ಬಂದಿದೆ ಎಂದು ಹೇಳಿದರು.

ಭಾರತದ ಸಂವಿಧಾನ ಜಗತ್ತಿಗೆ ಮಾದರಿಯಾದ ಸಂವಿಧಾನವಾಗಿದ್ದು, ಸಂವಿಧಾನವನ್ನು ವಿರೋಧಿಸುವ ಅವರು ಯಾರೇ ಆಗಿರಲಿ ಅಂತಹವರ ಭಾರತದ ಪೌರತ್ವ ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದರು.

ಸರ್ವೋಚ್ಚ ನ್ಯಾಯಾಲಯದ ಹೇಳಿಕೆಯನ್ನು ಪಾಲಿಸದೆ ಇಂಥ ದುಷ್ಟ ಭಕ್ತ ಭ್ರಷ್ಟ ಗಡಿಪಾರು, ದೇಶದ್ರೋಹಿ ಜಾತಿವಾದಿ, ಮನುವಾದಿ, ದಲಿತ ವಿರೋಧಿ, ಸ್ತ್ರೀ ವಿರೋಧಿ, ಜ್ಯಾತ್ಯಾತೀತ ರಾಷ್ಟ್ರದಲ್ಲಿ ಜಾತಿಯ ವಿಷ ಬೀಜ ಬಿತ್ತಿ ದೇಶ ಅಲ್ಲೊಲ್ ಕಲ್ಲೋಲ್ ಮಾಡುವ ವ್ಯಕ್ತಿಯನ್ನು ಕೂಡಲೇ ಗೃಹಮಂತ್ರಿ ಸ್ಥಾನದಿಂದ ವಜಾ ಮಾಡಬೇಕು ಹಾಗೂ ಮುಂದೆ ಈ ರೀತಿ ದಲಿತ ಸಮುದಾಯಕ್ಕೆ ಅವಮಾನ ಮಾಡದಂತೆ ತಡೆಯಬೇಕು. ಮುಂದಿನ ದಿನಗಳಲ್ಲಿ ಅಂಬೇಡ್ಕರ ಇವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವವರನ್ನು ಗಡಿಪಾರು ಮಾಡಬೇಕು ಎಂದು  ಆಗ್ರಹಿಸಿ ರಾಷ್ಟ್ರಪತಿಯವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.

ದಲಿತ ಮುಖಂಡರಾದ ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಬೆಣ್ಣೂರಕರ್, ಶ್ರೀಕಾಂತ್ ಶಿಂಧೆ, ಮಲ್ಲಿಕಾರ್ಜುನ ಕಾಳಗಿ, ದೇವಿಂದ್ರ ಕುಮಸಿ, ಲೋಹಿತ್ ಮುದ್ದಡಗಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಮಹೇಶ ಕಾಶಿ, ಉದಯಕುಮಾರ ಸಾಗರ, ಸಾಬಣ್ಣ ಕಾಶಿ, ಶಿವಮೂರ್ತಿ ಪಾಮನೋರ, ವಿಠಲ್ ಕಟ್ಟಿಮನಿ, ಆನಂದ ಮೊಗಲಾ, ಸಂಜಯ ಬುಳಕರ್, ರಮೇಶ ಕವಡೆ, ಬಸವರಾಜ ಮುಡಬೂಳಕರ್, ಸುಭಾಶ್ಚಂದ್ರ ಪವಾರ, ಸುಭಾಷ ಕಲ್ಮರಿ, ಬಾಬು ಕಾಶಿ, ಶರಣು ಡೋಣಗಾಂವ, ವಿಜಯಕುಮಾರ ಯಾಗಾಪೂರ, ನಾಗೀಂದ್ರ ಬುರ್ಲಿ, ಭೀಮಸಿಂಗ್ ಚವ್ಹಾಣ, ಜಗನ್ನಾಥ ಮುಡಬೂಳಕರ್, ಜಗದೀಶ್ ಚವ್ಹಾಣ, ರವಿಸಾಗರ ಹೊಸಮನಿ, ಮಾರುತಿ ಹುಳಗೋಳಕರ್, ಶರಣು ಮರಗೋಳ, ಭೀಮಾಶಂಕರ ಹೋಳಿಕಟ್ಟಿ, ಅಂಬರೀಷ್ ಮತ್ತಿಮುಡ್, ಶಿವರಾಜ ಕಲ್ಲಕ್, ವಿಶ್ವನಾಥ ಬೀದಿಮನಿ, ಗುರುಲಿಂಗ ದಿಗ್ಗಾಂವ, ಕಾರ್ತಿಕ್ ಕಲ್ಲಕ್, ಲಖನ್ ಚವ್ಹಾಣ, ಕುಶಾಲ್ ನಾಟೀಕಾರ, ಸಚೀನ್ ದೊಡ್ಡಮನಿ, ಅನೀಲ್ ಚವ್ಹಾಣ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!