ಚಿತ್ತಾಪುರ ಬುದ್ಧ ವಿಹಾರದಲ್ಲಿ ಸಾಮ್ರಾಟ್ ಅಶೋಕ ಚಕ್ರವರ್ತಿ ಜಯಂತಿ ಆಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಬುದ್ಧ ವಿಹಾರದಲ್ಲಿ ದೇವಾನಾಂಪ್ರಿಯ ಸಾಮ್ರಾಟ್ ಅಶೋಕ ಚಕ್ರವರ್ತಿ ರವರ 2330ನೇ ಜಯಂತೋತ್ಸವ ನಿಮಿತ್ತ ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗೌರವ ನಮನಗಳು ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ಸಾಮ್ರಾಟ್ ಅಶೋಕನು ಕಾಳಿಂಗ ಯುದ್ದ ನಂತರ ಬುದ್ಧನ ಭೋಧನೆಗಳ ಅನುಯಾಯಿಯಾದರು ಅವರ ಆಳ್ವಿಕೆಯಲ್ಲಿ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ, ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್ ದೇಶಗಳಲ್ಲಿ ಸುಮಾರು 84000 ಸ್ತೂಪಗಳು ನಿರ್ಮಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ಅಶೋಕನು ತನ್ನ ಏಕೈಕ ಪುತ್ರಿ ಸಂಘಮಿತ್ರ ಮತ್ತು ಮಗ ಮಹೀಂದ್ರನನ್ನು ಶ್ರೀಲಂಕಾಕ್ಕೆ ಬೌದ್ಧ ಧರ್ಮವನ್ನು ಹರಡಲು ಕಳುಹಿಸಿದರು. ಮೂರನೆಯ ಬೌದ್ಧ ಪರಿಷತ್ತಿನ ಕೊನೆಯಲ್ಲಿ, ಅಶೋಕನು ಬೌದ್ಧ ಧರ್ಮ ಪ್ರಚಾರಕ್ಕಾಗಿ ವಿಶ್ವದ ಒಂಬತ್ತು ಭಾಗಗಳಿಗೆ ಬೌದ್ಧ ಧರ್ಮ ಪ್ರಚಾರಕರನ್ನು ಕಳುಹಿಸುವುದರ ಜೊತೆಗೆ ಅಶೋಕನು ಸಾಂಚಿ ಮತ್ತು ಮಹಾಬೋಧಿ ದೇವಾಲಯಗಳ ನಿರ್ಮಾಣದಲ್ಲಿ ಸಹಾಯ ಮಾಡಿದನು. ಇನ್ನೂರು ವರ್ಷಗಳ ಹಿಂದೆ, ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವರು ವಿಶ್ವದ ಮೊದಲ ಸಾಮಾನ್ಯ ಸಭೆಗಳನ್ನು ಕರೆದರು, ಅವರು ಸಮಸ್ಯೆ ಆಲಿಸಿದರು ತನ್ನ ಕೊನೆಯ ದಿನಗಳು ಸನ್ನತಿಯ ಕನಗನಹಳ್ಳಿಯಲ್ಲಿ ಕಳೆದರು ಎನ್ನುವುದಕ್ಕೆ ಸಾಕಷ್ಟು ಸಾಕ್ಷಿ ಆಧಾರಗಳು ಇವೆ ಎಂದರು.
ಈ ಸಂದರ್ಭದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಜಯಂತೋತ್ಸವ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್, ಶ್ರೀಕಾಂತ್ ಸಿಂಧೆ, ರಾಜಪ್ಪ ಹುಂಡೇಕರ್, ನಾಗೇಂದ್ರ ಬುರ್ಲಿ, ವಿಜಯ ಕಲ್ಲಕ, ಪ್ರಜ್ವಲ್ ಬೌದ್ಧಿ, ಸಾಗರ ಚಿಟ್ಟೇಕರ್, ರಾಜು ಬುಳಕರ್, ಲಕ್ಷ್ಮೀಕಾಂತ ಕಲಮೇರಿ, ವಿಶಾಲ್ ನಾಟಿಕಾರ್, ಬಸವರಾಜ ಮುಡಬೂಳಕರ್, ಅಂಬರೀಷ್ ರಂಗನೂರ ಸೇರಿದಂತೆ ಇತರರು ಇದ್ದರು.