ಡಿ.27 ರಂದು ಚಿತ್ತಾಪುರದಲ್ಲಿ 20ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾ ಪಡಿಪೂಜೆ ಕಾರ್ಯಕ್ರಮ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಬಾಲಾಜಿ ಮಂದಿರದ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಡಿ.27 ರಂದು ಬೆಳಿಗ್ಗೆ 10 ಗಂಟೆಗೆ 20ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾ ಪಡಿಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಆದ್ದರಿಂದ ಶ್ರೀ ಅಯ್ಯಪ್ಪ ಸ್ವಾಮಿ ಮಾಲಾ ದಾರಿಗಳು ಮತ್ತು ಭಕ್ತಾದಿಗಳು ಭಾಗವಹಿಸಬೇಕು ಎಂದು ಆನಂದಕುಮಾರ್ ಗುರುಸ್ವಾಮಿ, ಚಂದ್ರಶೇಖರ ಗುರುಸ್ವಾಮಿ ಅವರು ತಿಳಿಸಿದ್ದಾರೆ ಕೋರಿದ್ದಾರೆ
ಮಧ್ಯಾಹ್ನ 1.00 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿ ಮಹಾ ಪ್ರಸಾದ (ಅನ್ನದಾನ) ಕಾರ್ಯಕ್ರಮ ಜರುಗಲಿದೆ. ಜನವರಿ 6 ಇರುಮುಡಿ ಪೂಜಾ ಹಾಗೂ ಅಯ್ಯಪ್ಪ ಸ್ವಾಮಿ ಯಾತ್ರೆ ಪ್ರಾರಂಭವಾಗಲಿದೆ ಹೀಗಾಗಿ ಅಯ್ಯಪ್ಪ ಸ್ವಾಮಿ ಕೃಪೆಗೆ ಪಾತ್ರರಾಗಿ ಅನ್ನ ಪ್ರಸಾದ ಸ್ವೀಕರಿಸಬೇಕು ಎಂದು ತಿಳಿಸಿದ್ದಾರೆ.
ಶ್ರೀಕಾಂತ್ ಲಂಭೋದರ ಗುರು ಸ್ವಾಮಿ ಹಾಗೂ ಅವರ ತಂಡದಿಂದ ಮಹಾ ಪಡಿ ಪೂಜೆ ನೆರವೇರಿಸುವವರು. ಕಾರ್ತಿಕ್ ನಾರಾಯಣಪೇಟ್ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ದೇವಿಂದ್ರಪ್ಪ ಗುರು ಸ್ವಾಮಿ ಮುಧೋಳ್, ರಂಗ ಗುರು ಸ್ವಾಮಿ ಸೇಡಂ, ಭುಗಪ್ಪ ಗುರು ಸ್ವಾಮಿ ಗುರುಮಿಠಕಲ್ ಸೇರಿದಂತೆ ಅನೇಕ ಗುರು ಸ್ವಾಮಿಗಳ ನೇತೃತ್ವದಲ್ಲಿ ಮಹಾ ಪಡಿಪೂಜೆ ನೆರವೇರಲಿದೆ. ಪೂಜೆಗೆ ಸೇವೆ ಸಲ್ಲಿಸುವವರು 8867093334, 9945835507 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.