ಚಿತ್ತಾಪುರದಲ್ಲಿ ಭಗವಾನ್ ಬುದ್ಧರ ಭಾವಚಿತ್ರದ ಭವ್ಯ ಮೆರವಣಿಗೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಹಸೀಲ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಬುದ್ಧ ಪೌರ್ಣಿಮಾ ಪ್ರಯುಕ್ತ ಭಗವಾನ್ ಬುದ್ಧರ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.
ತಹಸೀಲ್ ಕಚೇರಿಯಿಂದ ಪ್ರಾರಂಭವಾದ ಮೆರವಣಿಗೆ ಸ್ಟೇಷನ್ ರಸ್ತೆ, ನಾಗಾವಿ ವೃತ್ತ, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಬುದ್ಧ ವಿಹಾರಕ್ಕೆ ತಲುಪಿ ಸಮಾವೇಶಗೊಂಡಿತ್ತು.
ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ಅಧಿಕಾರಿಗಳಾದ ಮೊಹಮ್ಮದ್ ಅಕ್ರಂ ಪಾಷಾ, ಮನೋಜಕುಮಾರ ಗುರಿಕಾರ, ಶಂಕರಗೌಡ, ಶಶಿಧರ ಬಿರಾದಾರ, ಪಂಡಿತ್ ಸಿಂದೆ, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್, ಬುದ್ಧ ಜಯಂತಿ ಸಮಿತಿ ಅಧ್ಯಕ್ಷ ಜಗನ್ನಾಥ ಮುಡಬೂಳಕರ್, ಮುಖಂಡರಾದ ಬಸವರಾಜ ಬೆಣ್ಣೂರಕರ್, ಮಲ್ಲಿಕಾರ್ಜುನ ಕಾಳಗಿ, ಉದಯಕುಮಾರ್ ಸಾಗರ, ದೇವಿಂದ್ರ ಕುಮಸಿ, ಮಲ್ಲಿಕಾರ್ಜುನ ಬೆಣ್ಣೂರಕರ್, ಮಲ್ಲಿಕಾರ್ಜುನ ಮುಡಬೂಳಕರ್, ಲೋಹಿತ್ ಮುದ್ದಡಗಿ, ರಾಜಪ್ಪ ಹುಂಡೇಕಾರ, ಶ್ರೀಕಾಂತ್ ಸಿಂಧೆ, ಸಂಜಯ ಬುಳಕರ್, ಬಸವರಾಜ ಮುಡಬೂಳಕರ್, ರಾಜು ದೊರೆ, ಸಂದಿಪ್ ಕಟ್ಟಿ, ನಾಗೇಂದ್ರ ಬುರ್ಲಿ, ಸುಭಾಷ್ ಕಲ್ಮರಿ, ದೇವು ಯಾಬಾಳ, ರವಿಸಾಗರ ಹೊಸಮನಿ, ರಾಜು ಬುಳಕರ್, ಪ್ರಜ್ವಲ್ ಬೌದ್ದಿ, ಶರಣು ತಲಾಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.