ಚಿತಾಪುರ: ಭಗವದ್ಗೀತೆ ಪಾರಾಯಣ ಪಠಣ ಸಮಾರೋಪ
ನಾಗಾವಿ ಎಕ್ಸಪ್ರೆಸ್
ಚಿತಾಪುರ: ಸತತ ಏಳು ದಿನಗಳ ಕಾಲ ನಡೆದ ಭಗವದ್ಗೀತಾ ಪಾರಾಯಣದ ಸಮಾರೋಪ ಸಮಾರಂಭವನ್ನು ಭಕ್ತಿಯಿಂದ ಜರುಗಿತು.
ಪಟ್ಟಣದ ವೆಂಕಟೇಶ್ವರ ದೇವಸ್ಥಾನ ಗಣೇಶ ದೇವಸ್ಥಾನ ಮತ್ತು ರಾಘವೇಂದ್ರ ದೇವಸ್ಥಾನದಲ್ಲಿ ಡಿಸೆಂಬರ್ 4 ರಿಂದ 10 ರವರೆಗೆ ಸತತವಾಗಿ ಏಳು ದಿನಗಳ ಕಾಲ ವಿಪ್ರ ಬಾಂಧವರಿಂದ ಭಗವದ್ಗೀತೆಯ 1 ನೇ ಅಧ್ಯಾಯದಿಂದ 18 ನೇ ಅಧ್ಯಾಯದ ಪಠಣೆಯ ಪಾರಾಯಣ ಕಾರ್ಯಕ್ರಮವನ್ನು ಭಕ್ತಿಯಿಂದ ನೆರವೇರಿಸಿದರು. ಬುಧವಾರ ಭಗವದ್ಗೀತಾ ಪಾರಾಯಣದ ಸಮಾರೋಪ ಸಮಾರಂಭವನ್ನು ಒಂಬತ್ತನೇ ಅಧ್ಯಾಯದ ಪಠಣೆ ಮಾಡುವ ಮೂಲಕ ನೆರವೇರಿಸಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ದೇವಸ್ಥಾನದ ಅರ್ಚಕರಾದ ಗುರುರಾಜ್ ಆಚಾರ್ಯ, ವಿಪ್ರ ಸಮಾಜದ ತಾಲೂಕು ಅಧ್ಯಕ್ಷ ಗಿರೀಶ್ ಜಾನಿ, ಗೌರವ ಅಧ್ಯಕ್ಷ ವಿಶ್ವನಾಥ್ ಅಫಜಲಪುರ ಸೇರಿದಂತೆ ಸಮಾಜದ ಮಹಿಳೆಯರು ಮತ್ತು ಮುಖಂಡರು ಇದ್ದರು.