Oplus_0

ಚಿತ್ತಾಪುರದಲ್ಲಿ ಭಾರಿ ಮಳೆ ಸಂಚಾರಕ್ಕೆ ಸಂಚಕಾರ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದಲ್ಲಿ ಮಂಗಳವಾರ ರಾತ್ರಿ ಭರ್ಜರಿ ಮಳೆಯಿಂದಾಗಿ ಚರಂಡಿಗಳು ತುಂಬಿ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದರಿಂದ ಸಂಚಾರಕ್ಕೆ ಸಂಚಕಾರ ಉಂಟಾಗಿದೆ.

ಚರಂಡಿಗಳು ಅಷ್ಟೇ ಅಲ್ಲ ಸಣ್ಣ ಪುಟ್ಟ ಹಳ್ಳ ಕೊಳ್ಳಗಳು ಹಾಗೂ ರಸ್ತೆಯಲ್ಲಿನ ತಗ್ಗು ದಿನ್ನೆಗಳು ತುಂಬಿದ್ದರಿಂದ ದ್ವಿಚಕ್ರ ವಾಹನಗಳ ಸವಾರರು ಬಿದ್ದು ಅನಾಹುತಕ್ಕೆ ತುತ್ತಾದ ಘಟನೆಗಳೂ ಕೂಡ ಜರುಗಿವೆ ಎಂದು ತಿಳಿದು ಬಂದಿದೆ.

ಪಟ್ಟಣದ ಪ್ರಮುಖ ಶಹಾಬಾದ ರಸ್ತೆ ಹಾಗೂ ಮಳಖೇಡ ರಸ್ತೆಗಳು ಸೇರಿದಂತೆ ಆಂತರಿಕ ರಸ್ತೆಗಳಲ್ಲಿ ಮಳೆ ನೀರು ಹರಿಯುತ್ತಿದ್ದರಿಂದ ರಸ್ತೆಗಳ ತುಂಬಾ ನೀರು ಹರಿಯುತ್ತಿದ್ದರಿಂದ ಹಳ್ಳದಂತೆ ಭಾಸವಾಗಿದೆ.

Spread the love

Leave a Reply

Your email address will not be published. Required fields are marked *

error: Content is protected !!