ಚಿತ್ತಾಪುರದಲ್ಲಿ ಸಿಬಿಎಸ್ಇ ಶಾಲೆಯ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ | ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹಾಗೂ ಬೌದ್ಧಿಕ ಮಟ್ಟ ವೃದ್ಧಿ: ಬಿರಾದಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಸಾಮರ್ಥ್ಯ ಹೆಚ್ಚಳ ಹಾಗೂ ಬೌದ್ಧಿಕ ಮಟ್ಟ ವೃದ್ಧಿ ಆಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ಹೇಳಿದರು.
ಪಟ್ಟಣದ ಶ್ರೀಮತಿ ಮಹಾದೇವಮ್ಮ ಬಿ.ಪಾಟೀಲ ಸಿಬಿಎಸ್ಇ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ 14 ಮತ್ತು 17 ವರ್ಷದೊಳಗಿನ ಮಕ್ಕಳಿಗೆ ಆಯೋಜಿಸಿದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಬರೀ ಓದಿಗಷ್ಟೇ ಸೀಮಿತವಾಗದೇ, ಕ್ರೀಡೆಗಳಲ್ಲಿಯೂ ಭಾಗವಹಿಸಿ. ಉತ್ತಮ ಆರೋಗ್ಯ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಶೈಕ್ಷಣಿಕ ಅವಧಿಗಳಲ್ಲಿ ಕ್ರೀಡೆಗೂ ಸಮಯ ನೀಡಲಾಗಿದೆ ಎಂದು ಹೇಳಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆಗಳಿಂದ ಆರೋಗ್ಯ ಸುಧಾರಿಸುತ್ತದೆ. ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಸಾಧ್ಯ ಎಂದರು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಗೂ ಅವರಲ್ಲಿ ಕ್ರೀಡಾಸಕ್ತಿ ಬೆಳೆಸುವ ಉದ್ದೇಶದಿಂದ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಹೇಳಿದರು.
14 ವರ್ಷದ ಬಾಲಕರ ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ವಾಸವದತ್ತಾ ವಿದ್ಯಾವಿಹಾರ ಸೇಡಂ ಶಾಲೆ ಮಕ್ಕಳು ಪಡೆದುಕೊಂಡರು. ದ್ವಿತೀಯ ಸ್ಥಾನವನ್ನು ಡಿ.ಎ.ವಿ. ವಾಡಿ ಶಾಲೆಯ ಮಕ್ಕಳು ಅಲಂಕರಿಸಿದರು. ಅದೇ ರೀತಿ 14 ವರ್ಷದ ಬಾಲಕಿಯರ ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ವಿಕಟ್ ಸಾಗರ್ ವಿದ್ಯಾಮಂದಿರ ಛತ್ರಶಾಲಾ ಮಕ್ಕಳು ಪಡೆದುಕೊಂಡರು ಹಾಗೂ ದ್ವಿತೀಯ ಸ್ಥಾನವನ್ನು ಶ್ರೀಮತಿ ಮಹಾದೇವಮ್ಮಾ ಬಿ. ಪಾಟೀಲ ಚಿತ್ತಾಪುರ ಇವರು ಪಡೆದುಕೊಂಡರು.
17 ವರ್ಷದ ಬಾಲಕರ ವಾಲಿಬಾಲ್ ಪಂದ್ಯದಲ್ಲಿ, ಪ್ರಥಮ ಸ್ಥಾನವನ್ನು ಶ್ರೀಮತಿ ಮಹಾದೇವಮ್ಮ ಬಿ. ಪಾಟೀಲ ಸಿ.ಬಿ.ಎಸ್.ಇ. ಶಾಲೆ ಚಿತ್ತಾಪುರ ಪಡೆದುಕೊಂಡರು. ದ್ವಿತೀಯ ಸ್ಥಾನ ವಾಡಿ ಡಿ.ಎ.ವಿ. ಪಬ್ಲಿಕ್ ಸ್ಕೂಲ್ ಪಡೆದುಕೊಂಡರು. ಅದೇ ರೀತಿ 17 ವರ್ಷದ ಬಾಲಕಿಯರ ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಶ್ರೀಮತಿ ಮಹಾದೇವಮ್ಮ ಬಿ. ಪಾಟೀಲ ಸಿ.ಬಿ.ಎಸ್.ಇ. ಶಾಲೆ ಚಿತ್ತಾಪುರ ಪಡೆದುಕೊಂಡರು. ದ್ವಿತೀಯ ಸ್ನಾನ ಮಳಖೇಡ ಆದಿತ್ಯ ಬಿರ್ಲಾ ಶಾಲೆ ಪಡೆದುಕೊಂಡಿತ್ತು.
ಸ್ಪರ್ಧೆಯ ಎಲ್ಲಾ ವಿಜೇತ ಮಕ್ಕಳಿಗೆ ಕಾಲೇಜಿನ ಪ್ರಾಂಶುಪಾಲರು ಪ್ರಮಾಣ ಪತ್ರ ಮತ್ತು ಪಾರಿತೋಷಕವಾದ ಕಪ್ ನ್ನು ವಿತರಿಸಿ ಅದೇ ರೀತಿ ಎಲ್ಲಾ ಸ್ಪರ್ದಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿದರು.
ಪಂದ್ಯಾವಳಿಯಲ್ಲಿ ಆರ್ಯನ್ ಸಿಬಿಎಸ್ಇ ಪಬ್ಲಿಕ್ ಸ್ಕೂಲ್ ಕಲಬುರಗಿ, ವೇಧಾ ಪಬ್ಲಿಕ್ ಸ್ಕೂಲ್ ಕಲಬುರಗಿ, ಶ್ಲೋಕಾ ಬಿರ್ಲಾ ಪಬ್ಲಿಕ್ ಸ್ಕೂಲ್ ಕಲಬುರಗಿ, ವಿಕೆಟ್ ಸಾಗರ್ ವಿದ್ಯಾಮಂದಿರ ಛತ್ರಶಾಲಾ, ಓರಿಯಂಟ್ ಡಿಎವಿ ಜ್ಞಾನ ಮಂದಿರ ದಿಗ್ಗಾಂವ, ಡಿಎವಿ ಸ್ಕೂಲ್ ವಾಡಿ, ವಿದ್ಯಾಮಂದಿರ ಸಿಬಿಎಸ್ಇ ಸ್ಕೂಲ್ ಸೇಡಂ, ವಾಸವದತ್ತಾ ವಿದ್ಯಾವಿಹಾರ ಸಿಬಿಎಸ್ಇ ಸ್ಕೂಲ್ ಸೇಡಂ, ಆದಿತ್ಯ ಬಿರ್ಲಾ ಮಳಖೇಡ, ಶ್ರೀಮತಿ ಮಹಾದೇವಮ್ಮಾ ಬಿ. ಪಾಟೀಲ ಸಿ.ಬಿ.ಎಸ್.ಇ ಶಾಲೆ ಚಿತ್ತಾಪುರ ಶಾಲೆಗಳು ಭಾಗವಹಿಸಿದ್ದವು. ಸದರಿ ಕಾರ್ಯಕ್ರಮದಲ್ಲಿ ಎಲ್ಲಾ ಒಂಭತ್ತು ಶಾಲೆಯ ದೈಹಿಕ ಶಿಕ್ಷಕರು ಭಾಗಿಯಾಗಿದ್ದರು.
ಪ್ರಾಚಾರ್ಯ ಶ್ರೀದೇವಿ ಆರ್. ಗಂಜಿ, ಉಪ ಪ್ರಾಚಾರ್ಯ ಟಿ. ಬನ್ನಮ್ಮ ಜೆ. ರೆಡ್ಡಿ, ಎಮ್. ಬಿ. ಪಾಟೀಲ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪಿ.ಯು. ಕಾಲೇಜಿನ ಪ್ರಾಚಾರ್ಯ ತ್ರಿವೇಣಿ ವಿ. ಪಾಟೀಲ ಸೇರಿದಂತೆ ಸದರಿ ಕಾರ್ಯಕ್ರಮದಲ್ಲಿ ಎಲ್ಲಾ ಒಂಭತ್ತು ಶಾಲೆಯ ದೈಹಿಕ ಶಿಕ್ಷಕರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಕು. ಶೋಭಿತಾ ಬಸವರಾಜ ನಿರೂಪಿಸಿದರು, ಕು.ಭವಾನಿ ಪ್ರಮೋದ ರೆಡ್ಡಿ ಸ್ವಾಗತಿಸಿದರು, ಕು.ಶಿವಲೀಲಾ ಭೋಜಪ್ಪಾ ಪ್ರಮಾಣ ವಚನ ಬೋಧಿಸಿದರು, ಸ್ಫೂರ್ತಿ ಶರಣಗೌಡ ಪಾಟೀಲ ವಂದಿಸಿದರು.

