ಭಾರತ ಪಾಕಿಸ್ತಾನ ಯುದ್ಧದಲ್ಲಿ ವೀರ ಮರಣ ಹೊಂದಿದ ಮುರುಳಿ ನಾಯಕಗೆ ಭಾವಪೂರ್ಣ ಶ್ರದ್ಧಾಂಜಲಿ, ಕ್ಯಾಂಡಲ್ ಮಾರ್ಚ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಭಾರತ ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರತ ಭಾರತೀಯ ವೀರಯೋಧ ಆಂಧ್ರಪ್ರದೇಶ ರಾಜ್ಯದ ಮುರುಳಿ ನಾಯಕ ಪಾಕಿಸ್ತಾನದ ಭಯೋತ್ಪಾದಕರ ಬಾಂಬ್ ದಾಳಿಗೆ ತುತ್ತಾಗಿ ವೀರ ಮರಣ ಹೊಂದಿದ ಹಿನ್ನೆಲೆ ಪಟ್ಟಣದ ಚಿತ್ತಾವಲಿ ವೃತ್ತದಿಂದ ಶನಿವಾರ ರಾತ್ರಿ ಕ್ಯಾಂಡಲ್ ಮಾರ್ಚ್ ಮೆರವಣಿಗೆ ನಡೆಸಿದ ಯುವಕರು ಕಪ್ಪಡಾ ಬಜಾರ್, ಜನತಾ ವೃತ್ತ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಲಾಡ್ಜಿಂಗ್ ಕ್ರಾಸ್ ಹತ್ತಿರ ಸಮಾವೇಶಗೊಂಡು ಒಂದು ನಿಮಿಷ ಮೌನಾಚರಣೆ ಸಲ್ಲಿಸಿದರು. ಮೆರವಣಿಗೆಯಲ್ಲಿ ಭಾರತ್ ಮಾತಾ ಕೀ ಜೈ, ಅಮರ್ ರಹೇ ಅಮರ್ ರಹೇ ಮುರಳಿ ನಾಯಕ ಅಮರ್ ರಹೇ ಘೋಷ ವಾಕ್ಯಗಳು ಮೊಳಗಿದವು.
ಈ ವೇಳೆ ಪುರಸಭೆ ಸದಸ್ಯ ಜಗದೀಶ್ ಡಿ ಚವ್ಹಾಣ ಮಾತನಾಡಿ, ಮುರುಳಿ ನಾಯಕ ಒಬ್ಬ ನವಯುವಕನಾಗಿದ್ದು ಚಿಕ್ಕ ವಯಸ್ಸಿನಲ್ಲೇ ದೇಶ ಸೇವೆಗೆ ಪ್ರಾಣ ತ್ಯಾಗ ಮಾಡಿದ ವೀರಯೋಧನಾಗಿದ್ದಾನೆ. ಇತನ ಅಗಲಿಕೆ ಭಾರತಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ದೇವರು ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ, ಅವರ ಕುಟುಂಬ ವರ್ಗದವರಿಗೆ ಬಂಧು ಮಿತ್ರರಿಗೆ ದುಖಃ ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.
ಭೋವಿ ವಡ್ಡರ ಸಮಾಜದ ಸರಪಂಚ್ ವಿಠಲ್ ಕಟ್ಟಿಮನಿ ಮಾತನಾಡಿ, ದೇಶದ ರಕ್ಷಣೆಗೆ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಮುರುಳಿ ನಾಯಕ ಅವರ ಅಗಲಿಕೆ ಮನಸಿಗೆ ತುಂಬಾ ನೋವುಂಟು ಮಾಡಿದೆ, ಇಂದು ದೇಶದ ಗಡಿಯಲ್ಲಿ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶವನ್ನು ಕಾಯುತ್ತಿದ್ದರಿಂದ ನಾವುಗಳು ನೆಮ್ಮದಿಯಿಂದ ಇದ್ದೇವೆ ಹೀಗಾಗಿ ದೇಶ ಕಾಯುವ ಯೋಧರ ಸೇವೆ ಅಮೋಘವಾಗಿದೆ ಎಂದು ಹೇಳಿದರು.
ಬಂಜಾರ ಸಮಾಜದ ಗೌರವಾಧ್ಯಕ್ಷ ಗೋಪಾಲ ಡಿ ರಾಠೋಡ, ಸೇವಾಲಾಲ್ ಜಗದಂಬಾ ದೇವಸ್ಥಾನದ ಅಧ್ಯಕ್ಷ ಶ್ರೀಕಾಂತ್ ರಾಠೋಡ, ಕಿರಣ್ ನಾಯಕ, ಚಂದರ್ ಚವ್ಹಾಣ, ಶಿವರಾಮ್ ಚವ್ಹಾಣ, ಸಂತೋಷ ರಾಠೋಡ, ಆಕಾಶ್ ಚವ್ಹಾಣ, ರಾಜು ಚವ್ಹಾಣ, ರಾಜು ರಾಠೋಡ, ಸಂಜಯ ಬುಳಕರ್, ಗೋಪಿ ಚವ್ಹಾಣ, ರಾಜು ರಾಠೋಡ, ಜಗದೀಶ್ ಪವಾರ, ವಿಶ್ವನಾಥ್ ರಾಠೋಡ, ಸುನೀಲ್ ರಾಠೋಡ, ರಾಮ ಚವ್ಹಾಣ, ಎಂ.ಡಿ ಯುನುಸ್, ವೆಂಕಟೇಶ್ ಚೌದರಿ, ವಾಲ್ಮೀಕಿ ಚವ್ಹಾಣ, ಗುರುನಾಥ ಚವ್ಹಾಣ, ಪ್ರೇಮ್ ಪವಾರ, ಅಶೋಕ್ ನಾಯಕ, ಅರ್ಜುನ್ ಚವ್ಹಾಣ, ಕಿರಣ್ ರಾಠೋಡ, ನಾಗು ರಾಠೋಡ, ಆನಂದ್ ಜಾಧವ, ರಾಮ ರಾಠೋಡ, ಶಂಕರ ನಾಯಕ, ಸಂಜಯ ನಾಯಕ, ಅಂತಯ್ಯ ಮುಕ್ತೇದಾರ, ಕುಮಾರ್ ರಾಠೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.