ಚಿತ್ತಾಪುರದಲ್ಲಿ ಅದ್ದೂರಿ ಮೆರವಣಿಗೆಯೊಂದಿಗೆ ಈದ್ ಮಿಲಾದ್ ಹಬ್ಬ ಆಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಸೋಮವಾರ ಸಡಗರ ಸಂಭ್ರಮದಿಂದ ಮೆರವಣಿಗೆ ನಡೆಸುವ ಮೂಲಕ ಆಚರಿಸಿದರು.
ಐತಿಹಾಸಿಕ ಹಜರತ್ ಚಿತ್ತಷಹಾ ವಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಚಿತ್ತಾವಲಿ ವೃತ್ತದಲ್ಲಿ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮೆರವಣಿಗೆಗೆ ಚಾಲನೆ ನೀಡಿದರು. ಚಿತ್ತಾವಲಿ ವೃತ್ತದಿಂದ ಪ್ರಾರಂಭವಾದ ಮೆರವಣಿಗೆ ಹೋಳಿ ಕಟ್ಟಿ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ತಹಸೀಲ್ ಕಚೇರಿ ರಸ್ತೆ, ಸ್ಟೇಷನ್ ರಸ್ತೆ, ನಾಗಾವಿ ವೃತ್ತ, ಜನತಾ ವೃತ್ತ, ಕಪ್ಪಡಾ ಬಜಾರ್ ಮೂಲಕ ಪುನಃ ಚಿತ್ತಾವಲಿ ವೃತ್ತಕ್ಕೆ ಆಗಮಿಸಿ ಸಮಾಪ್ತಿಗೊಂಡಿತ್ತು.
ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಐ ಶ್ರೀಶೈಲ್ ಅಂಬಾಟಿ, ಪತ್ರಕರ್ತ ಕಾಶಿನಾಥ ಗುತ್ತೇದಾರ, ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಕಾಳಗಿ, ಸೂರ್ಯಕಾಂತ ಪೂಜಾರಿ, ನಾಗರೆಡ್ಡಿ ಗೋಪಸೇನ್, ಭೀಮಸಿಂಗ್ ಚವ್ಹಾಣ, ಮಹ್ಮದ್ ಎಕ್ಬಾಲ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಎಂ.ಡಿ.ಯುನುಸ್, ಮೋಸಿನ್ ಚೈನು, ಆಸೀಫ್ ಶೇಖ್, ಮನಾನ್ ನಾಗಾಯಿ, ಸದ್ದಾಮ್, ಇಮ್ರಾನ್ ಖುರೇಷಿ, ಬಾಬಾ ಎಂಐಎಂ, ಇಬ್ರಾಹಿಂ ಎ.ಟು.ಝೆಡ್ ಹುಸೇನ್, ಇಮಾಮ್ ಅಲಿ ಸೇರಿದಂತೆ ನೂರಾರು ಯುವಕರು, ಮುಸ್ಲಿಂ ಬಾಂಧವರು ಇದ್ದರು.
“ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನದ ಪ್ರಯುಕ್ತ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಗುತ್ತದೆ. ಮಹಮ್ಮದ್ ಪೈಗಂಬರ್ ಏಕತೆ ಸಹಿಷ್ಣತೆ ಹಾಗೂ ಸಹೋದರತೆಗೆ ಒತ್ತುಕೊಟ್ಟರು. ಇಡೀ ಜಗತ್ತಿಗೆ ಶಾಂತಿ ಮತ್ತು ಸಮಾನತೆಯ ಸಂದೇಶವನ್ನು ಸಾರಿದವರು.”-ಮುಕ್ತಾರ್ ಪಟೇಲ್ ಅಧ್ಯಕ್ಷರು, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ.