ಚಿತ್ತಾಪುರದಲ್ಲಿ ಹೊಸ ವರ್ಷ ನಿಮಿತ್ತ ಬೇಕರಿ, ವೈನ್ಸ್, ಮಟನ್ ಚಿಕನ್ ಬಿಸಿನೆಸ್ ಭರ್ಜರಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಹೊಸ ವರ್ಷವನ್ನು ಸ್ವಾಗತಿಸಲು ಚಿಕ್ಕವರು ಹಿಡಿದು ದೊಡ್ಡವರು ಸೇರಿದಂತೆ ಯುವಕ, ಯುವತಿಯರು ಕೇಕ್ ಖರೀದಿಸಲು ಬೇಕರಿಗಳಿಗೆ ಮುಗಿ ಬಿದ್ದಿದ್ದರೆ, ಇನ್ನೊಂದೆಡೆ ಯುವಕರು ಮಧ್ಯ ಖರೀದಿಸಲು ಮಧ್ಯದ ಅಂಗಡಿಗಳಿಗೆ ಮುಗಿ ಬಿದ್ದಿರುವ ದೃಶ್ಯಗಳು ಮಂಗಳವಾರ ರಾತ್ರಿ ಕಂಡುಬಂತು.
ಅಲ್ಲದೇ ಮಟನ್ ಚಿಕನ್ ಅಂಗಡಿಗಳು ಫುಲ್ ರಶ್ ಇರುವುದು ಕಂಡು ಬಂದಿದೆ. 2025 ರ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಈ ಬಾರಿ ನಾಗಾವಿ ನಾಡು ಚಿತ್ತಾಪುರ ಪಟ್ಟಣದಲ್ಲಿ ಎಲ್ಲರೂ ಉತ್ಸುಕರಾಗಿದ್ದಾರೆ. ಇದರಿಂದ ವೈನ್ ಶಾಪ್, ಮಟನ್ ಚಿಕನ್ ಹಾಗೂ ಬೇಕರಿ ವ್ಯಾಪಾರಿಗಳಂತು ಫುಲ್ ಖುಷಿಯಲ್ಲಿ ಇದ್ದಾರೆ ಕಾರಣ ಭರ್ಜರಿ ಬಿಸಿನೆಸ್ ಆಗುತ್ತಿದೆ.
ಚಿತ್ತಾಪುರ ಪಟ್ಟಣದ ಮಟನ್ ಚಿಕನ್ ಮಾರ್ಕೇಟ್, ತರಕಾರಿ ಮಾರುಕಟ್ಟೆ ರಸ್ತೆ, ನಾಗಾವಿ ವೃತ್ತ, ಭುವನೇಶ್ವರಿ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ಲಾಡ್ಜಿಂಗ್ ಕ್ರಾಸ್, ಮಳಖೇಡ ರಸ್ತೆ ಸೇರಿದಂತೆ ಇತರೆ ರಸ್ತೆಗಳಲ್ಲಿ ಜನವೋ ಜನ ಇದರಿಂದ ಟ್ರಾಫಿಕ್ ಜಾಮ್ ಆಗಿದೆ.
ಹೊಸ ವರ್ಷದ ನಿಮಿತ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ವಿವಿಧ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಯಥಾಪ್ರಕಾರ ರಾತ್ರಿ 11 ಗಂಟೆಗೆ ಎಲ್ಲಾ ವೈನ್ಸ್ ಶಾಪಗಳನ್ನು ಮುಚ್ಚಿಸಲಾಗುವುದು ಹೊಸದಾಗಿ ಸಮಯವೇನು ವಿಸ್ತರಣೆ ಮಾಡಿಲ್ಲ ಎಂದು ಪಿಎಸ್ಐ ಶ್ರೀಶೈಲ್ ಅಂಬಾಟಿ ನಾಗಾವಿ ಎಕ್ಸಪ್ರೆಸ್ ಗೆ ತಿಳಿಸಿದ್ದಾರೆ.
ನಾಗಾವಿ ಎಕ್ಸಪ್ರೆಸ್ ಕಳಕಳಿ:
-ಸಾಧ್ಯವಾದರೆ ಕುಟುಂಬ ಸಮೇತ ಮನೆಯಲ್ಲಿಯೇ ಹೊಸ ವರ್ಷ ಸ್ವಾಗತಿಸಿ.
-ಹೊಸ ವರ್ಷದ ಸಂಭ್ರಮಾಚರಣೆಗೆ ಇತಿ ಮೀತಿ ಇರಲಿ, ಪೊಲೀಸರ ಕರ್ತವ್ಯಕ್ಕೆ ಪಟ್ಟಣದ ಜನರು ಸಹಕರಿಸಿ.
-ಹೊರಗಡೆ ಗೆಳೆಯರ ಜೊತೆ ಹೊಸ ವರ್ಷದ ಪಾರ್ಟಿ ಮಾಡಿದರೂ ಪರವಾಗಿಲ್ಲ ತಡರಾತ್ರಿ ಮಾಡದೆ ನಿಗದಿತ ಸಮಯದಲ್ಲಿ ಮನೆ ಸೇರಿಕೊಳ್ಳಿ.
-ದಯವಿಟ್ಟು ಕುಡಿದು ವಾಹನಗಳು ಚಲಿಸಬೇಡಿ, ಮಧ್ಯೆ ಸೇವನೆ ಪಾರ್ಟಿ ಮಾಡುವುದೇ ಹೊಸ ವರ್ಷ ಆಚರಣೆಯಲ್ಲ.
-ಮೋಜು ಮಸ್ತಿ ಮಾಡುವುದೇ ಹೊಸ ವರ್ಷ ಅಲ್ಲ, ಹೊಸ ಹೊಸ ಆಲೋಚನೆ ಮತ್ತು ವಿಚಾರಗಳ ಹಾಗೂ ಗುರಿ ಉದ್ದೇಶಗಳನ್ನು ಇಟ್ಟುಕೊಂಡು ಹೊಸ ಜೀವನದ ಕಡೆ ಹೆಜ್ಜೆ ಇಡಿ.
-ಹಳೆಯದನ್ನು, ಜೀವನದಲ್ಲಾದ ಕಹಿ ಘಟನೆಗಳನ್ನು ಮರೆತು ಹೊಸ ಯೋಜನೆಗಳನ್ನು ರೂಪಿಸಿಕೊಂಡು ಅದರಂತೆ ಮುನ್ನೆಡೆಯಿರಿ.
-ನಿತ್ಯದ ಬದುಕಿನಲ್ಲಿ ಹಗಲು ರಾತ್ರಿ ಎನ್ನುವುದು ಸಾಮಾನ್ಯ ಈ ನಡುವೆ ಎಲ್ಲರಿಗೂ ನಿತ್ಯ ಹೊಸ ದಿನಗಳೇ ಹೀಗಾಗಿ ವಿಶೇಷ ಏನಿಲ್ಲ.
-ದಯವಿಟ್ಟು ಯುವಕರು ಕುಡಿತಕ್ಕೆ ಬಲಿಯಾಗಬೇಡಿ ಏನೇ ಮಾಡಿದರೂ ಒಂದು ಚೌಕಟ್ಟಿನಲ್ಲಿ ನಿಮ್ಮ ಸಂಬ್ರಮ ಇರಲಿ, ನಿಮ್ಮ ಖುಷಿ ಇನ್ನೊಬ್ಬರಿಗೆ ತೊಂದರೆ ಆಗದಿರಲಿ.
-ಸಂಪಾದಕರು.