ಚಿತ್ತಾಪುರದಲ್ಲಿ ಕ್ರಿಸ್ ಮಸ್ ಸೌಹಾರ್ದ ಕೂಟ, ಪರಸ್ಪರ ನಂಬಿಕೆ, ವಿಶ್ವಾಸದ ತಳಹದಿಯಲ್ಲಿ ಒಂದಾಗಿ ಬಾಳುವುದೇ ಹಬ್ಬಗಳ ಆಶಯ: ಫಾದರ್ ಫ್ರೇಡ್ರಿಕ್ ಡಿಸೋಜಾ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪರಸ್ಪರ ನಂಬಿಕೆ, ವಿಶ್ವಾಸದ ತಳಹದಿಯಲ್ಲಿ ಒಂದಾಗಿ ಬಾಳುವುದೇ ಹಬ್ಬಗಳ ಆಶಯವಾಗಿದೆ ಎಂದು ಫಾದರ್ ಫ್ರೇಡ್ರಿಕ್ ಡಿಸೋಜಾ ಹೇಳಿದರು.
ಪಟ್ಪಣದ ಪಾಲಪ್ ಗಲ್ಲಿಯ ಮೋಕ್ಷರಾಣಿ ದೇವಾಲಯದಲ್ಲಿ ಕ್ರಿಸ್ತ ಜಯಂತಿ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಕ್ರಿಸ್ ಮಸ್ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರಿಸ್‍ಮಸ್, ಮಾನವೀಯತೆಯ ಸಂದೇಶ ಸಾರುವ ಮತ್ತು ಏಕತೆ-ಸಮಾನತೆಯ ಹಬ್ಬ. ಕ್ರಿಸ್ ಮಸ್ ಆಚರಣೆ ಮಾನವ ಕುಲದ ಪ್ರೀತಿ ಮತ್ತು ಸೌಹರ್ದತೆಯ ಕೊಂಡಿ ಎಂದರು.
ಶತಮಾನಗಳಿಂದ ಭಾರತದಲ್ಲಿ ಸರ್ವ ಧರ್ಮದ ಜನತೆ ಸಹಬಾಳ್ವೆ ನಡೆಸಿದ್ದಾರೆ. ಸೌಹಾರ್ದತೆಯ ಬದುಕೇ ಭಾರತದ ಉಸಿರು. ಭಾರತದಲ್ಲಿರುವ ಶ್ರೇಷ್ಠ ಸಂಸ್ಕೃತಿ, ಸಂಸ್ಕಾರವನ್ನು ವಿಶ್ವದ ಯಾವುದೇ ದೇಶದಲ್ಲೂ ಕಾಣಲು ಸಾಧ್ಯವಿಲ್ಲ. ಇಂತಹ ಉನ್ನತ ಪರಂಪರೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿ ಎಂದರು.
ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಪಿಎಸ್ಐ ಚಂದ್ರಾಮಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ ಅವಂಟಿ, ಪುರಸಭೆ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಡಾ.ಪ್ರಭುರಾಜ ಕಾಂತಾ, ಮುಖಂಡರಾದ ಈರಪ್ಪ ಭೋವಿ, ಮುಕ್ತಾರ್ ಪಟೇಲ್, ಶಂಕರಗೌಡ ರಾವೂರಕರ್, ಪ್ರಭಾಕರ್ ತುರೆ, ತುಕಾರಾಮ ರಾಠೋಡ, ಆನಂದ ಮುಕ್ತೇದಾರ, ಮೋಹನ್ ಮುಸ್ತಾಜರ್, ಸಿಸ್ಟರ್ ಸಂಧ್ಯಾ ಮಾರಿಯಾ, ಕವಿತಾ, ಶಶಿಕಲಾ ಸೇರಿದಂತೆ ಧರ್ಮಗುರುಗಳು, ಧರ್ಮಭಗಿನಿಯರು, ಸದಸ್ಯರು ಉಪಸ್ಥಿತರಿದ್ದರು.